ಅನಂತಪೂರ ಜಿ ಪಂ ಕ್ಷೇತ್ರಕ್ಕೆ ಕಾಂಗ್ರೆಸದಿಂದ ವಿನಾಯಕ ಬಾಗಡಿಗೆ ಅಭ್ಯರ್ಥಿಯನ್ನಾಗಿಸಲು ಆಗ್ರಹ

Demand to make Vinayak Bagadi the candidate from Congress for Anantapur G.P. constituency

ಲೋಕದರ್ಶನ ವರದಿ 

ಅನಂತಪೂರ ಜಿ ಪಂ ಕ್ಷೇತ್ರಕ್ಕೆ ಕಾಂಗ್ರೆಸದಿಂದ ವಿನಾಯಕ ಬಾಗಡಿಗೆ ಅಭ್ಯರ್ಥಿಯನ್ನಾಗಿಸಲು ಆಗ್ರಹ  

 ಸಂಬರಗಿ, 25; ಮುಂಬರುವ ಜಿಲ್ಲಾ ಹಾಗೂ ತಾಲೂಕಾ ಪಂಚಾಯತ ಚುನಾವಣೆಯಲ್ಲಿ ಅನಂತಪೂರ ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಕಾಂಗ್ರೇಸದಿಂದ ವಿನಾಯಕ ಬಾಗಡಿಗೆ ಅಭ್ಯರ್ಥಿಯಾಗಿ ರಾಜ್ಯದ ಪಕ್ಷದ ವರಿಷ್ಠರಿಗೆ ಹಾಗೂ ಸ್ಥಳಿಯ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಸಂಬರಗಿ ಗ್ರಾಮದ ಪಿಕೆಪಿಅಸ್‌ನ ಮಾಜಿ ಅಧ್ಯಕ್ಷರಾದ ಅಬ್ದುಲ ಮುಲ್ಲಾ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.   

ಸಂಬರಗಿ ಗ್ರಾಮದಲ್ಲಿ ಮಂಗಳವಾರ ಪಕ್ಷದ ಕಾರ್ಯಾಲದಲ್ಲಿ ಮಾತನಾಡಿ ಅವರು ವಿನಾಯಕ ಬಾಗಡಿಯವರು ಹಿಂದಿನ ಜಿಲ್ಲಾ ಪಂಚಾಯತ ಸದಸ್ಯರಿದ್ದಾಗ ಈ ಭಾಗದ ಅಭಿವೃದ್ಧಿ ಮಾಡಿದಾರೆ ಗಡಿಭಾಗದ ಮಹಾರಾಷ್ಟ್ರ ಸಂಪರ್ಕದ ರಸ್ತೆಗಳನ್ನು ಡಾಂಬರಿಕರಣ ಮಾಡಲು ಸಾಂಗಲಿ ಜಿಲ್ಲೆಯ ಸಚಿವರಿ ಹಾಗೂ ಶಾಸಕರಿಗೆ ಮನವಿ ಮಾಡಿದ ನಂತರ ಮಹಾರಾಷ್ಟ್ರದಿಂದ ಕರ್ನಾಟಕ ಸಂಪರ್ಕ ರಸ್ತೆಗಳು ಡಾಂಬರೀಕರಣ ಹೊಂದಿದಾವೆ 

ಗಡಬಾಗದ ಗ್ರಾಮಗಳಲ್ಲಿ ಶಾಸಕ ಲಕ್ಷ್ಮಣ ಸವದಿ ಶಾಸಕ ರಾಜು ಕಾಗೆ ಇವರಿಗೆ ಹಲವಾರು ಸಮಸ್ಯಗಳನ್ನು ಗಮನಕ್ಕೆ ತಂದು ಗಡಿಭಾಗದ ಗ್ರಾಮದ ರೈತರ ಕನಸ್ಸಾಗಿರುವ ಬಸವೇಶ್ವರ ಏತ ನೀರಾವರಿ ಪ್ರಾಯೋಗಿಕವಾಗಿ ಪ್ರಾರಂಭಸಿ ಅರಳಿಹಟ್ಟಿ ಗ್ರಾಮದ ವರೆಗೆ ನೀರು ಹರಿಸಿದ್ದಾರೆ ಅವರು ಅಧಿಕಾರದಲ್ಲಿ ಇದ್ದರು ಅಥವಾ ಇಲ್ಲದೆ ಇದ್ದರೂ ಜನರ ಸೇವೆ ಮಾಡಲು ಸದಾ ಸಿದ್ದರಿತ್ತಾರೆ. ಆ ಕಾರಣ ನಿಷ್ಠವಂತ ವ್ಯಕ್ತಿಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಒತ್ತಡ ತರುತೇವೆಂದು ಹೇಳಿದರು. 

ರಾಜ್ಯದಲ್ಲಿ ಕಾಂಗ್ರೇಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆನೆಗುದ್ದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಹಾಗೂ ಗಡಿಭಾಗದ 11 ಕೆರೆ ತುಂಬುವ ಯೋಜನೆಗಳು ಶಾಸಕರಾದ ರಾಜು ಕಾಗೆ ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಆದಕ್ಕಾಗಿ ಜನರು ಕಾಂಗ್ರೇಸ ಪಕ್ಷಕ್ಕೆ ಬೇನ್ನೆಲಬಾಗಿ ನಿಂತ್ತಿದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಈ ವೇಳೆ ಸಂಬರಗಿ ಗ್ರಾಮದ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅಮೃತ ಮಿಸಾಳ ಮಾತನಾಡಿ ಈ ಭಾಗದ ಜನರಿಗೆ ಯಾವುದೇ ಕಷ್ಟ ಬಂದಾಗ ಶಾಸಕ ರಾಜು ಕಾಗೆ ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಇವರು ಬೆನ್ನಾಗಿ ನಿಲ್ಲುತ್ತಾರೆ ಅವರ ಪ್ರಯತ್ನದಿಂದ ಅಭಿವೃದ್ದಿಯಾಗಿದೆ ಎಂದು ಸ್ಪಷ್ಟ ಪಡಿಸಿದರು. 

ಈ ವೇಳೆ ಅಣ್ಣಪ್ಪಾ ಮಿಸಾಳ ವಿಠ್ಠಲ ಗಸ್ತಿ ಸುಭಾಸ ಲಾಂಡಗೆ ದತ್ತಾ ಅವಳೆಕರ ಅಣ್ಣಾಸಾಬ ಅವಳೆಕರ ಸಂದೀಪ ವಾಯಫಳ ಸೇರಿಂದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಗಣ್ಯರು ಉಪಸ್ತಿತರಿದ್ದರು.