ಸಮಾಜದಲ್ಲಿ ಬದಲಾವಣೆ ತರಲು ನಿರಂತರ ಓದು ಅತ್ಯಗತ್ಯ: ನಾಗರಾಜ

ವಿಜಯಪುರ: ಸಮಾಜದಲ್ಲಿ ಬದಲಾವಣೆ ತರಲು ನಿರಂತರ ಓದು ಅತ್ಯಗತ್ಯ. ಓದು ಮತ್ತು ಬರಹವು ಪತ್ರಿಕೋದ್ಯಮ ವಿದ್ಯಾಥರ್ಿನಿಯರಾದ ನಿಮ್ಮ ವೃತ್ತಿ ಬದುಕಿನಲ್ಲಿ ದಿನನಿತ್ಯ ಹಾಸುಹೊಕ್ಕಾಗಬೇಕು. ಮಾಧ್ಯಮ ಸಂಸ್ಥೆಗಳಿಗೆ ತರಬೇತಿಗೆ ಹೋದಾಗ ಅತ್ಯಂತ ಶೃದ್ಧೆಯಿಂದ ಕಾರ್ಯ ನಿರ್ವಹಿಸಬೇಕು. ಮಹಿಳಾ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವೆಲ್ಲರೂ ಮಾಧ್ಯಮದಲ್ಲಿ ಹೆಚ್ಚು ಹೆಚ್ಚು ಉದ್ಯೋಗವಕಾಶಗಳನ್ನು ಪಡೆದುಕೊಂಡು ಮಾಧ್ಯಮದಲ್ಲಿ ಕೆಲಸ ಮಾಡುವ ಉತ್ತರ ಕನರ್ಾಟಕದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಎಂಬ ಭಾವನೆಯನ್ನು ಸುಳ್ಳು ಮಾಡಬೇಕು ಎಂದು ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಡಿ.ಬಿ.ನಾಗರಾಜ ಪತ್ರಿಕೋದ್ಯಮ ವಿದ್ಯಾಥರ್ಿನಿಯರಿಗೆ ಕರೆ ನೀಡಿದರು.

   ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಾಧ್ಯಮ ಮನೆ ಚಟುವಟಿಕೆ ಕಾರ್ಯಕ್ರಮದ ಸಮಾರೋಪದ ಸಮಾರಂಭ ಮತ್ತು 4ನೇ ಸೆಮಿಸ್ಟರ್ನ ಸ್ನಾತಕೋತ್ತರ ವಿದ್ಯಾಥರ್ಿನಿಯರ ಬೀಳ್ಕೊಡುಗೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

      ಅಕ್ಷರವನ್ನು ಪ್ರೀತಿಸಿದಷ್ಟು ಅದು ನಮಗೆ ವೃತ್ತಿ ಬದುಕನ್ನು ಕಟ್ಟಿಕೊಡುತ್ತದೆ. ಪತ್ರಕರ್ತರು ಎಲ್ಲ ರೀತಿಯ ವರದಿಗಾರಿಕೆಯನ್ನು ಕಲಿಯಬೇಕು. 

      ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸನ್ನು ಕಾಣಬೇಕು ಎಂದು ಅವರು ವಿದ್ಯಾಥರ್ಿನಿಯರಿಗೆ ಸಲಹೆ ನೀಡಿದರು.

     ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಜಿಲ್ಲಾ ವರದಿಗಾರ ಮಹೇಶ ಗೌಡರ ಮಾತನಾಡಿ, ಒಬ್ಬ ಉತ್ತಮ ಪತ್ರಕರ್ತನಾಗಲು ಸೃಜನಶೀಲತೆ ಮತ್ತು ಸುದ್ದಿಯ ಪ್ರಜ್ಞೆ ಇರಬೇಕು ಎಂದರು.

       ಭಾವಿ ಪತ್ರಕತರ್ೆಯರಾದ ನಿಮ್ಮೆಲ್ಲರ ಮೇಲೆ ಸಾಮಾಜಿಕ ಜವಾಬ್ದಾರಿ ಇದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದಾರೆ. ಮಾಧ್ಯಮ ಕೇತ್ರದಲ್ಲಿ ಶೇ.80ರಷ್ಟು ಮಹಿಳೆಯರು ತಮ್ಮ ವೃತ್ತಿ ಬದುಕನ್ನು ಸಾಗಿಸುತ್ತಿದ್ದಾರೆ. ಇವರಲ್ಲಿ ನೀವೆಲ್ಲರೂ ಸೇರಬೇಕು ಎಂಬುದು ಈ ವಿಶ್ವವಿದ್ಯಾನಿಲಯದ ಆಶಯ. ಅದನ್ನು ನೀವೆಲ್ಲರೂ ನಿಜ ಮಾಡಬೇಕು ಎಂದು ಅವರು ವಿದ್ಯಾಥರ್ಿನಿಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಜಯಪುರದಿಂದ ಮೈಸೂರು ಪ್ರಜಾವಾಣಿ ವಿಭಾಗಕ್ಕೆ ವಗರ್ಾವಣೆಯಾಗಿ ವೃತ್ತಿ ಜೀವನ ಮುಂದುವರೆಸಲಿರುವ ಡಿ.ಬಿ.ನಾಗರಾಜ ಅವರನ್ನು ಸನ್ಮಾನಿಸಲಾಯಿತು. 

    ಈ ಸಂದರ್ಭದಲ್ಲಿ 4ನೇ ಸೆಮಿಸ್ಟರ್ ವಿದ್ಯಾಥರ್ಿನಿಯರ ಎರಡು ವರ್ಷದ ವಿದ್ಯಾಥರ್ಿ ಜೀವನದ ಸವಿನೆಪುಗಳನ್ನು ತೆರೆಯ ಮೇಲೆ ವೀಡಿಯೋ ಮುಖಾಂತರ ಪ್ರಸಾರ ಮಾಡಿದಾಗ ವಿದ್ಯಾಥರ್ಿನಿಯರು ಭಾವುಕರಾದರೆ ಅಕ್ಕ ಟಿವಿಯ ತೆರೆಯ ಹಿಂದಿನ ಕೆಲವು ನಗೆ ತುಣುಕುಗಳನ್ನು ನೋಡಿ ನಗೆಗಡಲಲ್ಲಿ ತೇಲಾಡಿದರು. ವಿದ್ಯಾಥರ್ಿನಿಯರಾದ ಐಶ್ವರ್ಯ ಚಿಮ್ಮಲಗಿ ಮತ್ತು ಬಸಮ್ಮ ಭಜಂತ್ರಿ ತಮ್ಮ ಎರಡು ವರ್ಷದ ವಿದ್ಯಾಥರ್ಿ ಜೀವನದ ಅನಸಿಕೆಗಳನ್ನು ಹಂಚಿಕೊಂಡರು.

        ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಮಾತನಾಡಿದರು. ಈ ಸಂದರ್ಭದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

        ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿದ್ಯಾಥರ್ಿನಿ ಸುಜಾತ ಓತಗೇರಿ ಸ್ವಾಗತಿಸಿದರು. ಕಾಂಚನಾ ಪೂಜಾರಿ ವಂದಿಸಿದರು. ಸವಿತಾ ವಾಸನದ ನಿರೂಪಿಸಿದರು.