ಭೀಮ್‌ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ವಿಜಯೋತ್ಸವ ಆಚರಿಸಿದ ಕುರಿತು

As part of the Bhimkoregaon Victory Festival, Dr. Baba Saheb Ambedkar effigy was garlanded and cele

ಭೀಮ್‌ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ವಿಜಯೋತ್ಸವ ಆಚರಿಸಿದ ಕುರಿತು

ಗದಗ 01:ದಿನಾಂಕ:01-01-2025 ರಂದುಗದಗಜಿಲ್ಲೆಡಾಽಽ ಬಾಬಾಸಾಹೇಬ ಅಂಬೇಡ್ಕರ ಹಾಗೂ ಡಾಽಽ ಬಾಬು ಜಗಜೀವನರಾಮ ಸಮಾನತೆ ಸಮಿತಿ ವತಿಯಿಂದ ನಾಡಿನ ಹಾಗೂ ದೇಶದ ಸಮಸ್ತ ದಲಿತ ಬಂಧುಗಳಿಗೆ  ಜೈ ಭೀಮ್ ನಮೋ ಬುದ್ಧಾಯ ಜಯಗೋಷಗಳನ್ನು ಕೂಗುತ್ತಾಡಾಽಽ ಬಾಬಾಸಾಹೇಬ ಅಂಬೇಡ್ಕರ ನಗರಸಭೆಯ ಪುತ್ಥಳಿಗೆ ಮಾಲಾರೆ​‍್ಣಮಾಡಿ ಭಿಮಾಕೊರೆಗಾವ್ ವಿಜಯ್ ಶೌರ್ಯ ಸ್ತಂಭ... 207ನೇ ಭೀಮ್‌ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು ಕೋರಲಾಯಿತು. 

ಗೋವಿಂದರಾಜ ಬಳ್ಳಾರಿ ಮಾತನಾಡಿ ನಮ್ಮ ಸ್ವಾಭಿಮಾನದ ಬದುಕಿಗೆ ಅಸಂಖ್ಯಾತ ಕ್ರೂರ ಜಾತಿವಾದಿ ಪೇಶ್ವೆಗಳ ವಿರುದ್ದ 500 ಜನ ವೀರ ಮಹಾರ್ (ದಲಿತ) ಯೋಧರು “ಸ್ವಾಭಿಮಾನಕ್ಕಾಗಿ” ಸ್ವಾಭಿಮಾನದ ಬದುಕಿಗಾಗಿ ಹೋರಾಡಿದ ವಿಶ್ವದಐತಿಹಾಸಿಕ ಏಕೈಕ ಘನಘೋರಯುದ್ಧ ನಡೆದಿರುವ ಭಿಮಾಕೊರೆಗಾವ್ ವಿಜಯ್ ಶೌರ್ಯ ಸ್ತಂಭ... ಕುರಿತುಡಾಽಽ ಬಾಬಾಸಾಹೇಬ ಅಂಬೇಡ್ಕರರು ಅನೇಕ ವಿಷಯಗಳನ್ನು ಕಲೆ ಹಾಕಿಅಧ್ಯಯನ ಮಾಡಿ ನಮ್ಮಲ್ಲರಿಗೂ (ದಲಿತರಿಗೆ) ವಿಜಯೋತ್ಸವದ ಬಗ್ಗೆ ತಿಳಿಸಿಕೊಟ್ಟಿದ್ದಕಾಗಿ ನಾವು ಇಂದುಅವರಿಗೆ ಚಿರಋಣಿಗಳಾಗಿದ್ದೇವೆ ಎಂದು ತಿಳಿಸಿದರು. 

ಯುವರಾಜ ಬಳ್ಳಾರಿ ಮಾತನಾಡಿ ನಮ್ಮ ಪೂರ್ವಿಕರು ಮಹಾನ್ ಮಹರ್ ನಾಯಕರ ಪಾದಗಳಿಗೆ ಹೃದಯತುಂಬಿದ ಸ್ಮರಣೆಗಳು.. ಇತಿಹಾಸಕ್ಕೆ ಹೊಸ ತಿಲಕವ ತಿದ್ದಿದವೂ ವೀರರೇ, ಕೋರೆಗಾಂವ್‌ಕದನದಲ್ಲಿಅಮರರಾದ ಶೂರರೇಇದೋ ನಿಮಗೆ ನಮ್ಮ ಈ ಸಲಾಮುಗಳು. ಜಯಜಯಹೆ ಸ್ವಾಭಿಮಾನಿಗಳೇ ನೀಲ್ ಸಲಾಂ ಸಮರ ಸಂಹಗಳೇ, ಜೈ ಭೀಮ್, ಜೈ ಸಂವಿಧಾನ, ಜೈ ಪ್ರಬುದ್ಧ ಭಾರತ, ಜೈ ಭೀಮ್ ಬಂಧುಗಳೇಎಂದು ಕೂಗಿಹೇಳಿದರು. ಈ ಸಂಧರ್ಭದಲ್ಲಿದಲಿತ ಮುಖಂಡರಾದ ವೆಂಕಟೇಶಯ್ಯ, ಮಹೇಶ ನಾನಬಾಲ, ಸುಂಕಪ್ಪಗುತ್ತಿ,  ನಾಗರಾಜಕಿನ್ನಾರಿ, ಸಣ್ಣರಾಮು ಪಿ.ಬಳ್ಳಾರಿ,  ಹಾಗೂ ಮುಂತಾದವರು ಉಪಸ್ಥೀತರಿದ್ದರು.