ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ

ಜಮಖಂಡಿ 03: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಇತರೆ ಜಾತಿಯ 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ನಂತರದ ಬಾಲಕರ,ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಳಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇಲಾಖೆಯ ವೆಬ್‌ಸೈಟ್ ನಂಬರ್ https://swdhmis.karnataka.gov.in/ಗೆ ಭೇಟಿ ನೀಡಿ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ 2024-25 ಲಿಂಕ್‌ನ್ನು ಕ್ಲಿಕ್ ಮಾಡಿ ವಿದ್ಯಾರ್ಥಿಯ ಖಾತೆಯನ್ನು ಸೃಜಿಸಿಕೊಂಡು ನಂತರ ವಿದ್ಯಾರ್ಥಿ ಲಾಗಿನ್‌ನಲ್ಲಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   20-07-2024 ಇರುತ್ತದೆ. ಆನ್‌ಲೈನ್ ಸ್ವೀಕೃತಿ (Acknowledgement) ಪ್ರತಿಯೊಂದಿಗೆ ತಮ್ಮ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಕಛೇರಿಗೆ ಸಲ್ಲಿಸುವುದು. ಒಂದು ವೇಳೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗದಿದ್ದಲ್ಲಿ ಮ್ಯಾನುವಲ್ ಮೂಲಕ ದಾಖಲೆಗಳನ್ನು ಲಗತ್ತಿಸಿ (2 ಪಾಸ್‌ಪೋರ್ಟ್‌ ಸೈಜ್ ಫೋಟೊ, ಕಳೆದ ಸಾಲಿನ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಅಂತರ್ ಪ್ರಮಾಣ ಪತ್ರ ಹಾಗೂ ಆಧಾರ್‌ಕಾರ್ಡ್‌ ನಕಲು ಪ್ರತಿ) ಕಾಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ, 9480843061 ಇದಕ್ಕೆ ಸಂಪರ್ಕಿಸಬೇಕೆಂದು ಜಮಖಂಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ,ಎಸ್,ಗಡ್ಡದೇವರಮಠ ಪ್ರಕಟನೆಗೆ ತಿಳಿಸಿದ್ದಾರೆ.