ರಾಚವಿವಿ-ಯೋಗ ಯುನಿವರ್ಸಿಟಿ ಆಫ್ ಅಮೇರಿಕಾಸ್ ನಡುವೆ ಒಡಂಬಡಿಕೆ

Agreement between Rachavavi and Yoga University of Americas

ಲೋಕದರ್ಶನ ವರದಿ 

ರಾಚವಿವಿ-ಯೋಗ ಯುನಿವರ್ಸಿಟಿ ಆಫ್ ಅಮೇರಿಕಾಸ್ ನಡುವೆ ಒಡಂಬಡಿಕೆ  

ಬೆಳಗಾವಿ 25: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 25ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಯೋಗ ಯುನಿವರ್ಸಿಟಿ ಆಫ್ ಅಮೇರಿಕಾಸ್, ಫ್ಲೋರಿಡಾ, ಯು.ಎಸ್‌.ಎ. ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.  

ಈ ಒಡಂಬಡಿಕೆಯಿಂದ ವಿಶ್ವವಿದ್ಯಾಲಯದ 361 ಮಹಾವಿದ್ಯಾಲಯಗಳಲ್ಲಿ ಯೋಗ ಸ್ವಯಂಸೇವಕ ಮತ್ತು ಯೋಗ ತರಬೇತಿದಾರ ಕಾರ್ಯಾಗಾರಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಹಾಗೂ ಯೋಗ ಶಿಕ್ಷಣದ ಮಹತ್ವವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುವುದು. ವಿಶ್ವವಿದ್ಯಾಲಯವು ಈ ಒಡಂಬಡಿಕೆಯಡಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಯೋಗ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಎನ್‌.ಎಸ್‌.ಎಸ್‌. ಸಂಯೋಜಕರಿಗೆ ಯೋಗ ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆಯನ್ನು ಹೊಂದಿದೆ.  

ಈ ಸಂಸ್ಥೆಯ ಸಹಯೋಗದಿಂದ ಮುಂಬರುವ ದಿನಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಲು ಆರ್ಥಿಕ ನೆರವಿಗಾಗಿ ಭಾರತ ಸರ್ಕಾರದ ಆಯುಷ್ ಇಲಾಖೆಗೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಇವರು ವಿವರಿಸಿದರು. ಕುಲಸಚಿವ ಸಂತೋಷ ಕಾಮಗೌಡ, ಯುವ ಇಂಡಿಯಾದ ಡಾ. ದೇವರಾಜ್ ಗುರುಜಿ, ಆಡಳಿತಾಧಿಕಾರಿ ರವಿ ಪಿ. ಎಸ್, ಡಾ. ಎಸ್‌. ಎಸ್‌. ಹಿರೇಮಠ, ಆರತಿ ಸಂಕೇಶ್ವರಿ, ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ. ಎಂ. ಸಿ. ಯರಿ​‍್ರಸ್ವಾಮಿ, ಪ್ರೊ. ಶಿವಾನಂದ ಗೊರನಾಳೆ, ಪ್ರೊ. ರಿಯಾಜ್ ಅಹ್ಮದ್ ಮನಗೂಳಿ, ಸಹಾಯಕ ದೈಹಿಕ ನಿರ್ದೇಶಕ ಡಾ. ಜಗದೀಶ ಗಸ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.