ವಿಜಯಪುರ: ನಾಳೆಯಿಂದ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ

ಲೋಕದರ್ಶನ ವರದಿ

ವಿಜಯಪುರ 01: ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಜೂನ್ 2 ಮತ್ತು 3 ರಂದು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.

ಜೂನ್ 2 ರಂದು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಇಂಗ್ಲೀಷನಲ್ಲಿ ಹಾಗೂ 3 ರಂದು ಬೆಳಿಗ್ಗೆ 6 ರಿಂದ 7ರವರೆಗೆ ಕನ್ನಡದಲ್ಲಿ ಶ್ರೀಗಳು ಪ್ರವಚನ ಹೇಳುವರು. 

ಸದ್ಭಕ್ತರು ಜ್ಞಾನದಾಸೋಹದ ಪ್ರಯೋಜನ ಪಡೆಯಲು ಜ್ಞಾನಯೋಗಾಶ್ರಮದ ಸದ್ಭಕ್ತ ಮಂಡಳಿ ತಿಳಿಸಿದೆ