ವಿಜಯಪುರ: ಭಯಮುಕ್ತ ಸಮಾಜ ನಿರ್ಮಾಣ ಮಾಡುವದೇ ಪ್ರಜಾಪ್ರಭುತ್ವದ ಆಶಯ: ಡಾ.ಸುನಂದಮ್ಮ

ಲೋಕದರ್ಶನ ವರದಿ

ವಿಜಯಪುರ 24: ಭಾರತದ ಸಂವಿಧಾನವು ಜಗತ್ತಿನ ಎಲ್ಲಾ ಸಂವಿಧಾನದಲ್ಲಿ ವಿಶಿಷ್ಟವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತಾಗಿದೆ. ಇದು ಅನೆಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಶ್ರಮ ಹಾಗೂ ಜ್ಞಾನದ ಫಲದಿಂದ ಇಂತಹ ವ್ಯವಸ್ಥಿತ ಕ್ರಮಬದ್ಧ ಹಾಗೂ ಉತ್ತಮವಾದ ಸಂವಿಧಾನವು ಅನೇಕ ಹಂತಗಳನ್ನು ಕ್ರಮಿಸಿದ ನಂತರವೇ ಲಿಖಿತ ರೂಪದಲ್ಲಿ ಆಡಳಿತ ವ್ಯವಸ್ಥೆಗೆ ದಾರಿದೀಪವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಆರ್. ಸುನಂದಮ್ಮ ಹೇಳಿದರು.

ಅವರು ನಗರದ ಕರ್ನಾಟಕ  ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಆಹೇರಿ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಸಹಯೋಗದಲ್ಲಿ ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ವ್ಯವಸ್ಥೆ ಮತ್ತು ಮಾನವ ಹಕ್ಕಗಳ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಗೊಳಿಸಲು ಆರ್ಥಿಕ  ಸಾಮಾಜಿಕ, ರಾಜಕೀಯ,ಧಾರ್ಮಿಕ ಅಧ್ಯಾತ್ಮೀಕ ಮತ್ತು ಶೈಕ್ಷಣಿಕ ರಂಗಗಳ ಮೂಲಕ ನಮ್ಮ ಹಿರಿಯರು ತಮ್ಮ ಕೆಚ್ಚದೆಯ  ಹೋರಾಟದ ಮೂಲಕ ಮಾಡಿಕೊಂಡು ಬಂದಿದ್ದಾರೆ.  ಆದ್ದರಿಂದ ನಾವೆಲ್ಲ ಭಾರತದ ನಾಗರಿಕರು ಭಾರತ ಸಂವಿಧಾನ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕಗಳನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.  ನಮ್ಮ ಪ್ರಜ್ಞಾವಂತ ನಾಗರಿಕ ಪರಿಸರದಲ್ಲಿ ಸೌಜನ್ಯ ರಹಿತ, ಸೌಜನ್ಯ ಸಹಿತ ನೀತಿ ಆಧಾರಿತ ಸಮಾಜ ನಿರ್ಮಾಣ ಮತ್ತು ಭಯಮುಕ್ತ ವಾತಾವರಣ ನಿರ್ಮಿಸುವುದೇ  ಪ್ರಜಾಪ್ರಭುತ್ವದ ಗುಣಲಕ್ಷಣಗಳಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಚಿಂತಕ ಹಾಗೂ ಆಲ್-ಅಮೀನ್ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ರಿಯಾಜ ಫಾರೂಕಿ ಮಾತನಾಡಿ ಸಾಮಾಜಿಕ ಮತ್ತು ಆರ್ಥಿಕ  ಪ್ರಜಾಪ್ರಭುತ್ವವು ರಾಜಕೀಯ ಪ್ರಜಾಪ್ರಭುತ್ವದ ಮುಖ್ಯ ಜೀವಾಳವಾಗಿದೆ. ನಮ್ಮ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಸಮಾನತೆ, ಸಹೋದರತೆಯ ಇನ್ನೊಂದು ಹೆಸರು. ಆದರೆ ಸಂಸದೀಯ ಪ್ರಜಾಪ್ರಭುತ್ವವು ಸ್ವಾತಂತ್ರಕ್ಕೆ ನೀಡಿದಷ್ಟು ಮಹತ್ವವನ್ನು ಸಮಾನತೆ ಮತ್ತು ಸಹೋದರತೆ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡಲಿಲ್ಲ. ಸಮಾನತೆ ಮತ್ತು ನ್ಯಾಯ, ನೀತಿ ಮೌಲ್ಯಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುವಲ್ಲಿ ವಿಫಲವಾಗಿದೆ. ಸ್ವಾತಂತ್ರ್ಯ ಸಮಾನತೆಗಳ ಸಮತೋಲನ ಕಾಪಾಡುವಲ್ಲಿಯೂ ಅದು ಸೋಲು ಕಂಡಿತು ಎನ್ನಲಾಗಿದೆ ಎಂದರು.

ಅತಿಥಿ ಉಪನ್ಯಾಸಕರಾಗಿ ಅಂಜುಮನ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎಸ್. ನಾಗಠಾಣ ಮಾತನಾಡಿ ನಮ್ಮ ಭಾರತದ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ.  ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯತೆ ಸಮಾನತೆ ನೀಡಿದೆ. ಅವುಗಳನ್ನು ನಾವು ದುರ್ಬಲಗೊಳಿಸದೆ ಗೌರವಿಸಬೇಕಾದದ್ದು ನಮ್ಮ ನಾಗರಿಕ ಸಮಾಜದ ಹೊಣೆಗಾರಿಕೆಯಾಗಿದೆ. ಸಂವಿಧಾನ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು ಇವೆಲ್ಲ ನಮ್ಮ ದೈನಂದಿನ ದಿನಗಳಲ್ಲಿ ಅರಿತುಕೊಂಡು ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕಾಗಿದೆ ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಮೋಹನೇಶ್ವರ ಮೇಟಿ, ಅಪ್ಪಾಸಾಬ ಯರನಾಳ, ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ ಗಂಗನಳ್ಳಿ ಮಾತನಾಡಿದರು. 

ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಭೀಮಶಿ ಕಲಾದಗಿ, ವೈಜನಾಥ ಕಪರ್ೂರಮಠ, ಪ್ರಭುಗೌಡ ಪಾಟೀಲ, ಎಲ್.ಜಿ. ಕುಂಬಾರ, ಪಿ.ಬಿ. ಚಲವಯ್ಯ, ಭಾಗ್ಯಾ ತೆಗ್ಗಳ್ಳಿ, ಶಾರದಾ ತೆಗ್ಗಳ್ಳಿ, ಸಂಗೀತಾ ಚವ್ಹಾಣ, ಭರತೇಶ ಕಲಗೊಂಡ, ಶೇಖರ ಹೂಗಾರ, ಬಿ.ಎನ್. ಕಾಳಿ, ಜಿ.ಎಸ್. ಪಾಟೀಲ, ಬಿ.ಐ. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು. 

ಬಸವ ಸಾಹಿತ್ಯ ವೇದಿಕೆ ಬಂಡೆಪ್ಪ ತೇಲಿ ಸ್ವಾಗತಿಸಿದರು.  ಪ್ರೊ. ಶರಣಗೌಡ ಪಾಟೀಲ ನಿರೂಪಿಸಿದರು. ದಾನೇಶ ಅವಟಿ ವಂದಿಸಿದರು. 

ಇದೇ ಸಂದರ್ಭದಲ್ಲಿ ವಿಜಯಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು.