ಲೋಕದರ್ಶನ ವರದಿ
ವಿಜಯಪುರ 07: ಲಯನ್ಸ್ ಹಿರಿಯ ನಾಗರಿಕ ವೇದಿಕೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಬ್ಲಡ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಡಿದ ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಅವರು, ಇಂದಿನ ದಿನಮಾನಗಳಲ್ಲಿ ಅರಣ್ಯವೆಲ್ಲಾ ನಾಶವಾಗುತ್ತಿದ್ದು ಎಲ್ಲ ಕೆರೆ, ಡ್ಯಾಂಗಳು ಹೂಳಿನಿಂದ ತುಂಬಿಕೊಂಡು, ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ.
ಇದೇ ರಿತಿ ಮುಂದುವರೆದರೆ, ನಾವೆಲ್ಲಿ ಜಲಕ್ಷಾಮ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಯ ಆವರಣದಲ್ಲಿ, ಹೊಲ ತೋಟಗಳಲ್ಲಿ ಹೆಚ್ಚು ಹೆಚ್ಚಾಗಿ ಗಿಡಗಳನ್ನು ಬೆಳೆಸಲು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭರತೇಶ ಕಲಗೊಂಡ, ಅವರು ಶಾಲಾ ಕಾಲೇಜುಗಳ ಹಂತದಿಂದಲೇ ಕಿರಿಯರಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಸಿಕೊಡಬೇಕು. ಎಲ್ಲರಿಗು ಪರಿಸರ ನಾಶದಿಂದಾಗುವ ಹಾನಿಯ ಅರಿವಿರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ದೇಶಕ್ಕೆ 308ನೇ ಸ್ಥಾನ ಹಾಗೂ ರಾಜ್ಯಕ್ಕೆ 8ನೇ ಸ್ಥಾನ ಪಡೆದ ರೈತನ ಮಗ ನಾಗಠಾಣದ ಗಿರೀಶ ಧರ್ಮರಾಜ ಕಲಗೊಂಡ ಅವರನ್ನು ಸನ್ಮಾನಿಸಲಾಯಿತು. ಬಾಬುರಾವ ಕುಲಕಣರ್ಿ, ಬಿ.ಎಸ್. ಸಜ್ಜನ ಮತ್ತು ಪಿ.ಕೆ. ಬಿದರಕುಂದಿ ವಚನ ಗಾಯನ ಮಾಡಿದರು.
ವಿ.ಆರ್. ಕುಲಕಣರ್ಿ ಸ್ವಾಗತಿಸಿದರು. ಎಸ್.ಎಸ್. ಬಣಜಿಗೇರ, ನಿರೂಪಿಸಿ, ವಂದನಾರ್ಪಣೆ ಮಾಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಡಾ. ಎನ್.ಬಿ. ದೇಸಾಯಿ, ಆರ್.ಎ. ಗುಡಿ, ಡಾ. ಎಸ್.ಬಿ. ಬೀಳೂರ, ಎ.ಎಸ್. ಕೋರಿ, ಎಸ್.ಎಸ್. ಸಜ್ಜನ, ಉಮೇಶ, ಕಲಗೊಂಡ, ವಿಶ್ವನಾಥ ಕಲಗೊಂಡ ನಾಗಠಾಣ ಎನ್.ಎಸ್. ರೆಡ್ಡಿ, ವಿ.ಎನ್. ಕಪಾಳೆ, ಎಸ್.ಎಸ್. ಮಗದುವಲೆ, ಎಸ್.ವಾಯ್. ವಾಲಿಕಾರ, ಎಸ್.ಸಿ. ಕಮತಗಿ, ಆರ್.ಎಸ್. ಹಂದಿಗೋಳ, ಬಿ.ಎಸ್. ಹೊನಬರಟ್ಟಿ, ಈರಮ್ಮ ಕೊಳ್ಳಿ ಮುಂತಾದವರು ಉಪಸ್ಥಿತರಿದ್ದರು