ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ

Tribute to the new director of the cooperative society

ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ 

ಕಂಪ್ಲಿ 29: ತಾಲೂಕು ಸಮೀಪದ ದರೋಜಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜರುಗಿತು. ಇಲ್ಲಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯ ಒಂದು ಸ್ಥಾನಕ್ಕೆ ಜಿದ್ದಾಜಿದ್ದಿನಿಂದ ಕೂಡಿತ್ತು. ಮತದಾನ ಪ್ರಕ್ರಿಯೆ ನಡೆಯಿತು. ಸರದಿ ಸಾಲಿನಲ್ಲಿ ನಿಂತು ಜನರು ಮತದಾನ ಮಾಡಿದರು.  ಒಟ್ಟು 843 ಮತಗಳ ಪೈಕಿ, 618 ಮತಗಳನ್ನು ಹಾಕಿದ್ದು, 16 ಮತಗಳು ತಿರಸ್ಕೃತಗೊಂಡಿವೆ. ನಂತರದ ಫಲಿತಾಂಶದಲ್ಲಿ ಎನ್‌.ಮರಿಸ್ವಾಮಿ ಅವರು 353 ಮತಗಳೊಂದಿಗೆ ಪ್ರತಿ ಸ್ಪರ್ಧಿ ಹನುಮಂತಪ್ಪ(249) ವಿರುದ್ಧ 104 ಮತಗಳ ಅಂತರದಲ್ಲಿ ಜಯಶಾಲಿಯಾಗಿ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ ಎಂದು ರಿಟನಿಂರ್ಗ್ ಅಧಿಕಾರಿ ಗಂಗಾಧರ ಘೋಷಿಸಿದರು.  ತದನಂತರ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಎನ್‌.ಮರಿಸ್ವಾಮಿ ಹಾಗೂ ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರಾದ ಡಿ.ವಿ.ಮಂಜುನಾಥ, ಡಿ.ಶ್ರೀನಿವಾಸಲು, ಹೆಚ್‌.ದಾನಪ್ಪ, ಎನ್‌.ವಿ.ಹನುಮಂತ, ಮಜ್ಜಿಗಿ ನಾಗಮ್ಮ, ಕೆ.ರಾಮಾಂಜಿನೇಯಲು, ಕೆ.ತಿಮ್ಮಯ್ಯ, ಶೋಭಾದೇವಿ, ಪಿ.ಎಸ್‌.ಲಿಂಗಪ್ಪ, ಎಸ್‌.ವೆಂಕಟೇಶ, ಮಸೀದಿ ವಲಿ ಇವರಿಗೆ ಮಾಲಾರೆ​‍್ಣಯೊಂದಿಗೆ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ವಿ.ಜನಾರ್ದನ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಮಾರೆಪ್ಪ, ಮಾಜಿ ಅಧ್ಯಕ್ಷ ಭೀಮಪ್ಪ, ಅಂಬಣ್ಣ, ವಲಿಸಾಬ್, ಯುಸೂಪ್, ಕೆ.ಮಲ್ಲಿಕಾರ್ಜುನ, ಸದ್ದಾಂ, ರವಿ ಪ್ರಕಾಶ, ಎಂ.ರಾಮು, ವೆಂಕಟೇಶ ಸೇರಿದಂತೆ ಅನೇಕರಿದ್ದರು. ಡಿ.002: ದರೋಜಿಯಲ್ಲಿ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಮರಿಸ್ವಾಮಿಗೆ ಮಾಲಾರೆ​‍್ಣ ಮಾಡಿ ಗೌರವಿಸಲಾಯಿತು.