ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ
Tribute to the new director of the cooperative society
ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ
ಕಂಪ್ಲಿ 29: ತಾಲೂಕು ಸಮೀಪದ ದರೋಜಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜರುಗಿತು. ಇಲ್ಲಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿಯ ಒಂದು ಸ್ಥಾನಕ್ಕೆ ಜಿದ್ದಾಜಿದ್ದಿನಿಂದ ಕೂಡಿತ್ತು. ಮತದಾನ ಪ್ರಕ್ರಿಯೆ ನಡೆಯಿತು. ಸರದಿ ಸಾಲಿನಲ್ಲಿ ನಿಂತು ಜನರು ಮತದಾನ ಮಾಡಿದರು. ಒಟ್ಟು 843 ಮತಗಳ ಪೈಕಿ, 618 ಮತಗಳನ್ನು ಹಾಕಿದ್ದು, 16 ಮತಗಳು ತಿರಸ್ಕೃತಗೊಂಡಿವೆ. ನಂತರದ ಫಲಿತಾಂಶದಲ್ಲಿ ಎನ್.ಮರಿಸ್ವಾಮಿ ಅವರು 353 ಮತಗಳೊಂದಿಗೆ ಪ್ರತಿ ಸ್ಪರ್ಧಿ ಹನುಮಂತಪ್ಪ(249) ವಿರುದ್ಧ 104 ಮತಗಳ ಅಂತರದಲ್ಲಿ ಜಯಶಾಲಿಯಾಗಿ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ ಎಂದು ರಿಟನಿಂರ್ಗ್ ಅಧಿಕಾರಿ ಗಂಗಾಧರ ಘೋಷಿಸಿದರು. ತದನಂತರ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಎನ್.ಮರಿಸ್ವಾಮಿ ಹಾಗೂ ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರಾದ ಡಿ.ವಿ.ಮಂಜುನಾಥ, ಡಿ.ಶ್ರೀನಿವಾಸಲು, ಹೆಚ್.ದಾನಪ್ಪ, ಎನ್.ವಿ.ಹನುಮಂತ, ಮಜ್ಜಿಗಿ ನಾಗಮ್ಮ, ಕೆ.ರಾಮಾಂಜಿನೇಯಲು, ಕೆ.ತಿಮ್ಮಯ್ಯ, ಶೋಭಾದೇವಿ, ಪಿ.ಎಸ್.ಲಿಂಗಪ್ಪ, ಎಸ್.ವೆಂಕಟೇಶ, ಮಸೀದಿ ವಲಿ ಇವರಿಗೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ವಿ.ಜನಾರ್ದನ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಮಾರೆಪ್ಪ, ಮಾಜಿ ಅಧ್ಯಕ್ಷ ಭೀಮಪ್ಪ, ಅಂಬಣ್ಣ, ವಲಿಸಾಬ್, ಯುಸೂಪ್, ಕೆ.ಮಲ್ಲಿಕಾರ್ಜುನ, ಸದ್ದಾಂ, ರವಿ ಪ್ರಕಾಶ, ಎಂ.ರಾಮು, ವೆಂಕಟೇಶ ಸೇರಿದಂತೆ ಅನೇಕರಿದ್ದರು. ಡಿ.002: ದರೋಜಿಯಲ್ಲಿ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಮರಿಸ್ವಾಮಿಗೆ ಮಾಲಾರೆ್ಣ ಮಾಡಿ ಗೌರವಿಸಲಾಯಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 