ಭೀಮವಾದ ಡಿ ಎಸ್ ಎಸ್ ಪದಾಧಿಕಾರಿಗಳ ಆಯ್ಕೆ
ಬೆಳಗಾವಿ 01 : ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಬಿ ಎನ್ ವೆಂಕಟೇಶ್, ಕೋರ್ ಕಮಿಟಿ ಅಧ್ಯಕ್ಷರಾದ ಸಿದ್ಧಾರ್ಥ ಅಣ್ಣಾ ಸಿಂಗೆಯವರು , ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಆನಂದ್ ಅರಬಳ್ಳಿಯವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು. ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ದುರುಗಪ್ಪ ಮೇಲಿನಮನಿ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಬಸವರಾಜ ತಳವಾರ, ದುರಗಾರಾಮ ಕಾಂಬಳೆ ಶಿವರಾಮ ತಳವಾರ,ಲಕ್ಷ್ಮಣ ಗುಂಡಪ್ಪನವರ ವಿಜಯ ಧರ್ಮಟ್ಟಿ ಯವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಒಕ್ಕೂಟದ ಬೆಳಗಾವಿ ಜಿಲ್ಲಾ ಸಂಚಾಲಕಿಯಾಗಿ ಶ್ರೀಮತಿ ಮಂಜುಳಾ ಕಾಂಬಳೆಜಿಲ್ಲಾ ಸಂಘಟನಾ ಸಂಚಾಲಕಿಯರಾಗಿ ಶ್ರೀಮತಿ ರೇಣುಕಾ ಕೆಂಪಣ್ಣ ಹರಿಜನಶ್ರೀಮತಿ ರೇಣುಕಾ ಭ್ರಮಾ ಕೋಲಕಾರ ಇವರನ್ನು ಆಯ್ಕೆ ಮಾಡಲಾಯಿತು.