ಲೋಕದರ್ಶನ ವರದಿ
ಗದಗ 19: ಕಲ್ಕತ್ತಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ ಯೋಧ ನಗರದ ಇರಾನಿ ಕಾಲೋನಿ ನಿವಾಸಿ ಕುಮಾರಸ್ವಾಮಿ ಡಿ ನಾಗರಾಳ (36) ಅವರು ಸೋಮವಾರ ಕಲ್ಕತ್ತಾದಲ್ಲಿನ ತಮ್ಮ ಕ್ವಾಟರ್ಸ ಮನೆಯಲ್ಲಿ ಆಯತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಕತ್ತಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ನಿಧನರಾದರು.
ಕಳೆದ 16 ವರ್ಷಗಳಿಂದ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕುಮಾರಸ್ವಾಮಿ ಅವರು ಕಲ್ಕತ್ತಾದಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಲ್ಲತ್ತಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಪಾಥರ್ಿವ ಶರೀರವು ಶನಿವಾರ ಬೆಳಿಗ್ಗೆ ನಗರಕ್ಕೆ ಆಗಮಿಸಲಿದೆ. ನಗರದ ಹಾತಲಗೇರಿ ರಸ್ತೆಯಲ್ಲಿರುವ ವಿವೇಕಾನಂದ ನಗರದ ಸಾಯಿಬಾಬಾ ದೇವಸ್ಥಾನದ ಹತ್ತಿರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತಯೋಧ ಕುಮಾರಸ್ವಾಮಿ ಅವರು ತಂದೆ-ತಾಯಿ, ಪತ್ನಿ, ಅಣ್ಣ, ಅಕ್ಕ, ತಮ್ಮ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.