ಧರ್ಮಕ್ಕೆ ಹೊಸ ಪರಿಭಾಷೆ ಬರೆದವರು ಸ್ವಾಮಿ ವಿವೇಕಾನಂದರು

ಗದಗ 23: ಭಾರತ ದೇಶ ಕಂಡ ಶಕ್ತಿಶಾಲಿ ವ್ಯಕ್ತಿತ್ವ ಹೊಂದಿದ ಕೆಲವೇ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿರುವವರು. ಅವರನ್ನು ನೆನೆಸುವುದೆಂದರೆ ಒಬ್ಬ ಧೀರ, ಪ್ರಭಾವಿ ವ್ಯಕ್ತಿಯನ್ನು ನಮ್ಮೊಳಗೆ ಬಿಟ್ಟುಕೊಂಡಂತೆ. ಎಲ್ಲಧರ್ಮಿಯರು ತಮ್ಮ ತಮ್ಮ ಧರ್ಮದ ಭಾವಿಯಲ್ಲಿ ನಿಂತೇ ವಿಚಾರಿಸುವುದು ತಪ್ಪು. ಪರಸ್ಪರ ದೂಷಣೆ ನಿಲ್ಲಿಸಿ ಎಲ್ಲರ ಒಳಿತಿಗಾಗಿ ಧರ್ಮದ ಚೌಕಟ್ಟನ್ನು ದಾಟಿ ಬನ್ನಿ. ಮನುಷ್ಯ ಅಪರಿಮಿತ ಶಕ್ತಿಯ ಸಾಗರ ಎಂಬುದನ್ನು ತಿಳಿಸಿ. ಇದೇ ಕೆಲಸವನ್ನು ಸ್ವಾಮಿ ವಿವೆಕಾನಂದರು 125 ವರ್ಷಗಳ ಹಿಂದೆಯೆ ಮಾಡಿರುವರು ಎಂದು ಕೆ ಬಿ ತಳಗೇರಿ ಅವರು ನುಡಿದರು. 

ಅವರು ಸರಕಾರಿ ಪದವಿ ಪೂರ್ವ ಕಾಲೇಜ್ ಗದಗನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125 ನೇ ವರ್ಷ ಸಂಪನ್ನವಾಗುತ್ತಿರುವ ಸಮಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿತ್ತಿದ್ದರು. ಇನ್ನೋರ್ವ ಅತಿಥಿ ಎ ಎನ್ ನಾಗರಳ್ಳಿ ನಿವ್ರತ್ತ ಉಪನಿದರ್ೆಶಕರು ಸಾ.ಶಿ. ಇಲಾಖೆ ಅವರು ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ ಜಿ ಗಿರಿತಿಮ್ಮಣ್ಣವರ ಅವರು  ಸ್ವಾಮಿ ವಿವೇಕಾನಂದರು ಕೇವಲ ಧರ್ಮದ ಬಗ್ಗೆ ಮಾತ್ರವಲ್ಲ, ಶಿಕ್ಷಣದ ಬಗ್ಗೆಯೂ ಅಪಾರ ಆಸಕ್ತಿಯನ್ನು ಹೊಂದಿದ್ದರು. ಒಬ್ಬ ವ್ಯಕ್ತಿಯ ಅಂತರಾಳದಲ್ಲಿ ಮೊದಲೇ ಹುದುಗಿರುವ ಅಂಶ ಹೊರಹಾಕಲು ಶಿಕ್ಷಣ ಪ್ರಯತ್ನಿಸಬೇಕು ಎಂದವರು ಸ್ವಾಮಿ ವಿವೇಕಾನಂದರು. ನಮ್ಮ ಯುವ ಜನಾಂಗಕ್ಕೆ ಅವರ ಸಂದೇಶಗಳನ್ನು ತಲುಪಿಸುವ ಕಾರ್ಯ ಮಾಡುತ್ತಿರುವ ತಳಗೇರಿಯವರು ಹಾಗೂ ನಾಗರಳ್ಳಿಯವರು ಅಭಿನಂದನಾರ್ಹರು ಎಂದು ಪ್ರಾಚಾರ್ಯರು ಹೇಳಿದರು. ಕು.ನಂದಿನಿ ಮತ್ತು ದೀಪಾ ಪ್ರಾರ್ಥನೆ ಮಾಡಿದರು. ಸುರೇಶ ಸಣ್ಣೆಲಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಎಂ ಎಸ್ ಮುಲ್ಲಾ ವಂದಿಸಿದರು. ಪಿ ಎಸ್ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.