ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿದ್ಯಾರ್ಥಿ ಚಳುವಳಿಗೆ 55 ರ ಸಂಭ್ರಮಾಚರಣೆ

Students Federation of India (SFI) celebrates 55 years of student movement

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿದ್ಯಾರ್ಥಿ ಚಳುವಳಿಗೆ 55 ರ ಸಂಭ್ರಮಾಚರಣೆ  

ಹಾವೇರಿ 1: ಸರ್ವರಿಗೂ ಶಿಕ್ಷಣ,ಉದ್ಯೋಗ ಮೂಲಭೂತ ಹಕ್ಕಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ, ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿದ್ಯಾರ್ಥಿ ಚಳುವಳಿಗೆ 55 ರ ಸಂಭ್ರಮಾಚರಣೆ ಅಂಗವಾಗಿ ಶಿವಾಜಿ ನಗರ 2ನೇ ಕ್ರಾಸ್ ನಲ್ಲಿರುವ ಎಸ್‌ಎಫ್‌ಐ ಕಚೇರಿ ಎದುರು ಶೇತಾ ಪತಾಕೆ ಧ್ವಜಾರೋಹಣ ನೆರವೇರಿಸಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು. 

     ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದ ಉದ್ದಗಲಕ್ಕೂ ಎಸ್‌ಎಫ್‌ಐ 55 ವಸಂತಕಾಲ ನಿರಂತರ ಹೋರಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಎಸ್‌ಎಫ್‌ಐ ಹಲವಾರು ಸಮಸ್ಯೆಗಳನ್ನು ಇಟ್ಟುಕೊಂಡು ನಿರಂತರ ಹೋರಾಟ ಮಾಡುತ್ತಾ 55 ವರ್ಷಗಳ ಕಾಲ ವಿದ್ಯಾರ್ಥಿ-ಯುವಜನರ ಮದ್ಯ ಚಳುವಳಿ ಸಂಘಟಿಸುತ್ತಾ ತ್ಯಾಗ ಬಲಿದಾನದ ಮೂಲಕ ದೇಶದ ಸೌಹಾರ್ದತೆ, ಶಿಕ್ಷಣದ ಉಳಿವಿಗಾಗಿ, ಹೋರಾಟ ನಡೆಸಿದೆ, ಸ್ವಾತಂತ್ರ್ಯ ಭಾರತದಿಂದ ಇಲ್ಲಿಯವರೆಗೂ ದೇಶದ ಮೂಲ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಹಾಗೂ ದೇಶದ ಉಳಿವಿಗಾಗಿ ಎಸ್‌ಎಫ್‌ಐ ಹೋರಾಟ ಪ್ರಮುಖ ಪಾತ್ರವಹಿಸಿದೆ,  ಶಿಕ್ಷಣವು ಉಳ್ಳವರ ಶಿಕ್ಷಣವಂತಾಗದೆ ಎಲ್ಲರಿಗೂ ಸಿಗುವಂತಾಗಲಿ ವಿದ್ಯಾರ್ಥಿಗಳು ಸಮಾಜವನ್ನು ಅಧ್ಯಯನ ಮಾಡುವ ಮೂಲಕ ಭಗತ್ ಸಿಂಗ್ ಕಂಡ ಕನಸನ್ನು ನನಸ್ಸು ಮಾಡಬೇಕು. 23ನೇ ಎಳೆಯ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಹಾವೇರಿ ನೆಲದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪರ ಜೀವನ ಚರಿತ್ರೆಯನ್ನು ಓದಿ ವಿದ್ಯಾರ್ಥಿ - ಯುವಜನರು ಅರಿವಾಗಿ ಇಟ್ಟುಕೊಳ್ಳಬೇಕು ಎಂದರು.ವಿದ್ಯಾರ್ಥಿ-ಯುವಜನರು ದೇಶದ ಅಭಿವೃದ್ಧಿಗೆ ಶ್ರಮಿಸವಹಿಸಬೇಕಾಗಿದೆ. ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಆದರಿಂದ ವಿದ್ಯಾರ್ಥಿಗಳ ಓದುವ ಕಡೆ ಹೆಚ್ಚು ನಿಗ ವಹಿಸಬೇಕು ಪಠ್ಯ ಪುಸ್ತಕಗಳನ್ನು ಅಭ್ಯಾಸ ಮಾಡುವ ಜೊತೆಗೆ ಸಾಮಾಜಿಕ ಚಿಂತನೆ ಮಾಡಬೇಕು.ಅನ್ಯಾಯದ ವಿರುದ್ಧ ಹೋರಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಹಾಗೂ ಭಗತ್‌ಸಿಂಗ್‌ರ ಜೀವನ ಚರಿತ್ರೆ ಅರಿಯಬೇಕು. ಹೋರಾಟ ಮಾಡದೆ ಯಾವುದೇ ಸೌಲಭ್ಯಗಳು ಸಾಮನ್ಯವಾಗಿ ದೊರಕುವುದಿಲ್ಲ ಹಾಗಾಗಿ ಅಭ್ಯಾಸ ಮತ್ತು ಹೋರಾಟವನ್ನು ಮುಂದುವರಿಸಲು ವಿದ್ಯಾರ್ಥಿಗಳ ಎಸ್‌ಎಫ್‌ಐ ಸೇರಬೇಕು ಎಂದು ಹೇಳಿದರು. 

     ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ದುರಗಪ್ಪ ಯಮ್ಮಿಯವರ, ಉಪಾಧ್ಯಕ್ಷ ದೇವರಾಜ ಅಕ್ಕಸಾಲಿ, ಮುಖಂಡರಾದ  ಅಣ್ಣಪ್ಪ ಕೊರವರ, ಹೈದರಅಲಿ ದೇವಿಹೊಸೂರ,ಸಂಪ್ರೀತ ಬೆಟಗೇರಿ, ತಿರಕಪ್ಪ ಬಾತಿ, ಲಿಂಗರಾಜ ಮಲ್ಲಪ್ಪನವರ, ತಾಯಮ್ಮ ನೂಲ್ವಿ, ರಕ್ಷಿತಾ ಡವಗಿ, ಧನುಷ್ ದೊಡ್ಡಮನಿ, ಜಗದೀಶ್ ಎರೆಸೀಮಿ, ಬ್ರಹ್ಮೆಂದ್ರ ಬಡಿಗೇರ, ಭೀಮ್ಮಪ್ಪ ಬಿಜಾಪುರ ಪಾಲ್ಗೊಂಡಿದ್ದರು.