ವಿಶೇಷಚೇತನರ ಉಚಿತ ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿ
ಕುಕನೂರು 01: ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ಮ.ನಿ.ಪ್ರ. ಡಾ. ಮಹಾದೇವ ಮಾಹಾಸ್ವಾಮಿಗಳ ದ್ವಿತೀಯ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಯಲಬುರ್ಗಾ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜನವರಿ 30 ರಂದು ವಿಶೇಷಚೇತನರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿವಾಹವಾಗಲು ಬಯಸುವ ವಿಶೇಷಚೇತನ ಜೋಡಿಗಳು ಜನವರಿ 15ನೇ ದಿನಾಂಕಗೊಳಗಾಗಿ ತಮ್ಮ ಹೆಸರು ನೊಂದಾಯಿಸಲು ಈ ಮೂಲಕ ತಿಳಿಸಲಾಗಿದೆ. ವಿವಾಹ ಕಾರ್ಯಕ್ರಮಕ್ಕೆ ದಾನಿಗಳೂ ಕೂಡ ಕೈ ಜೋಡಿಸಿ ತಮ್ಮ ಸೇವೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈರ್ಪ ಕರೇಕುರಿ, 8762437848, ಕೊಟ್ರಯ್ಯ ಕೆಂಭಾವಿಮಠ 9972518887, ಈರಮ್ಮ ಕವಲೂರ 8660063402, ಬಸವರಾಜ ಕೋಮಾರ 9901957969 ಇವರನ್ನು ಸಂಪರ್ಕಿಸಬಹುದಾಗಿದೆ.