ಕೊಪ್ಪಳ : ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಕಡೇಮನಿ ಹೇಳಿಕೆ

ಲೋಕದರ್ಶನ ವರದಿ

ಕೊಪ್ಪಳ 10: ರೇಣುಕಾ ಎಂ. ಪಾಟೀಲ್ ರವರು ಅಧಿಕಾರದ ಅಮಲಿನಲ್ಲಿ ಎಸ್.ಸಿ ಎಸ್. ಟಿ ಗುತ್ತಿಗೆದಾರರಿಗೆ ನ್ಯಾಯಯುತವಾಗಿ ದೋರೆಯಬೇಕಾದ ಕಾಮಗಾರಿಗಳನ್ನು ಉದ್ದೇಶಪೂರಕವಾಗಿ ತೆಡೆದು ಕಾಮಗಾರಿಗಳನ್ನು ಕೈತಪ್ಪುವ ಕುತಂತ್ರ ಮಾಡುತ್ತಾರೆ. ಲೋಕೋಪಯೋಗಿ ಹಾಗೂ ಒಳನಾಡು ಬಂದರು ಜಲ ಸಾರಿಗೆ ಇಲಾಖೆಯಲ್ಲಿ ಎಸ್.ಸಿ ಎಸ್.ಟಿ ಗುತ್ತಿಗೆದಾರರನ್ನು ಕೇವಲವಾಗಿ ಕಂಡು ಕೀಳು ಜಾತಿಯವರು ಎಂದೂ ಮುಖ್ಯವಾಹಿನಿ ಮತ್ತು ಆಥರ್ಿಕವಾಗಿ ಬೇಳೆಯಬಾರದೆಂದು ತೀರ್ಮನಿಸಿ ಎಸ್.ಸಿ ಎಸ್.ಟಿ ಗುತ್ತಿಗೆದಾರರಿಗೆ ವಂಚನೆಮಾಡುತ್ತಾ  ಹಿಯ್ಯಾಳಿಸುತ್ತಿದ್ದಾರೆ ಎಂದು ಎಸ್ ಸಿ ಎಸ್ ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಹನುಮೇಶ್ ಎಂ. ಕಡೇಮನಿ ಅವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠೀಯಲ್ಲಿ ತಿಳಿಸಿದರು.

ಅವರು ಮುಂದುವರೆದು ಮಾತನಾಡುತ್ತಾ ಇದಕ್ಕೆಲ್ಲಾ ಕಾರಣ ಮಾನ್ಯ ಕಾರ್ಯನಿವರ್ಾಹಕ ಅಭಿಯಂತರರಾದ  ರೇಣಕಾ ಎಂ.ಪಾಟೀಲ್ ರವರು ನೇರ ಕಾರಣರಾಗಿರುತ್ತಾರೆ. ಮ್ಯಾನವೆಲ್ ಟೆಂಡರ್ (ಪೀಸ್ ವರ್ಕ) ಮಾಡಬಾರದೆಂದು  ಎಸ್.ಇ ರವರ ಆದೇಶವನ್ನು ಗಾಳಿಗೆ ತೂರಿ ತಮ್ಮ ಮನಬಂದಂತೆ ತುಂಡು ಗುತ್ತಿಗೆಯಲ್ಲಿ ಕಾಮಾಗಾರಿಗಳನ್ನು ತಮಗೆ ಬೇಕಾದ ಹೆಸರಿನವರಿಗೆ ಅಗ್ರಿಮೆಂಟ್ ಮಾಡಿ ಬೋಗಸ್ ಬೀಲ್ನ್ನು ಎತ್ತುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳೀದರು. ಕಾಮಗಾರಿಗಳಲ್ಲಿ ಯಾವುದೇ ಮೀಸಲಾತಿ ಅಳವಡಿಸದೇ ಬೀಲ್ ಎತ್ತುವ ಪ್ರಯತ್ನ ನಡೆದಿರುತ್ತದೆ, ಕಾರ್ಯನಿವರ್ಾಹಕ ಅಭಿಯಂತರರು ಕರ್ತವ್ಯಕ್ಕೆ ಹಾಜರಾಗಿದ್ದಾಗಿನಿಂದಲೂ ಒಂದು ದಿನವೂ ಕಛೇರಿಗೆ ಬರದೇ ಮನೆಯಲ್ಲಿಯೇ ಕುಳಿತ ಕೊಂಡು ಆಡಳಿತ ವ್ಯವಹಾರಗಳನ್ನು ನಡೆಸಿತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಗುತ್ತಿಗೆದಾರರಿಗೂ ಬಹಳ ತೊಂದರೆಯಾಗುತ್ತದೆ. ಸದರಿಯವರಿಗೆ ಫೋನ್ ಕರೆ ಮಾಡಿದರೂ ಕೂಡ ಸ್ಪಂದಿಸುವುದಿಲ್ಲ. 

ನಮ್ಮ ಕೆಲಸವನ್ನು ಯಾವುದೆ ಪ್ರಯತ್ನದಲ್ಲಿ ಕೈತಪ್ಪಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಸಂಬಂದಪಟ್ಟ ಮೇಲಾಧಿಕಾರಿಗಳು ಕ್ರಿಮೀನಲ್ ದಾವೆ ಹಾಕಿ ಕೆಲಸದಿಂದ ವಜಾಗೋಳಿಸಬೇಕು. ಒಂದು ವೇಳೆ ಹಾಗೇ ಮುಂದುವರೆದಲ್ಲಿ ನ್ಯಾಯಾಕ್ಕಾಗಿ ಕೋಪ್ಪಳ ಪಿ.ಡಬ್ಲ್ಯೂ.ಡಿ ವಿಭಾಗದ  ಕಚೇರಿ ಮುಂದೆ ದಿ.13-ಮಾ2019 ರಂದು ಎಸ್.ಸಿ ಎಸ್.ಟಿ ಗುತ್ತಿಗೆದಾರರು ಸಾಮೂಹಿಕ ಕೇಶಮುಂಡನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು, ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದಶರ್ಿ ಶಿವಮೂತರ್ಿ ಗುತೂರು, ಜಿಲ್ಲಾ ಉಪಾದ್ಯಕ್ಷ ರಾಮಣ್ಣ ಚೌಡ್ಕಿ, ಯಲ್ಲಪ್ಪ ಹಳೆಮನಿ, ಸುರೇಶ್ ಬಳಗನೂರು, ಶಿವಾನಂದ ಚಲವಾದಿ ಇನ್ನು ಮುಂತಾದವರು ಉಪಸ್ಥಿತರಿದ್ದರು.