ಲೋಕದರ್ಶನ ವರದಿ
ಕೊಪ್ಪಳ 12: ರಕ್ತ ಪೂರೈಕೆ, ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ ಸಭಾಂಗಣದಲ್ಲಿ ನಡೆದ ವಾಷರ್ಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನು ಯಾದಗಿರಿಯಲ್ಲಿ ಇದ್ದ ವೇಳೆಯಲ್ಲಿ ರಕ್ತದ ಸಮಸ್ಯೆ ತೀವ್ರವಾಗಿತ್ತು. ರಕ್ತ ಸಿಗದೆ ಒಂದೆರಡು ಸಾವುಗಳು ಸಂಭವಿಸಿದ್ದವು. ಅಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಪ್ರಾರಂಭಿಸಿ, ರಕ್ತ ನಿಧಿ ಸ್ಥಾಪನೆ ಮಾಡುವ ಪ್ರಯತ್ನ ಕೈಗೂಡಲೇ ಇಲ್ಲ.
ಕೊಪ್ಪಳದಲ್ಲಿ ಮಾತ್ರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಅದರ ಕಾರ್ಯವೈಖರಿಯನ್ನು ಮೆಚ್ಚಿ ಎರಡು ಬಾರಿ ರಾಜ್ಯಪಾಲರ ಪ್ರಶಸ್ತಿಯನ್ನು ನೀಡಲಾಗಿದೆ. ಈಗ ನಾನು ಸಹ ಇದರ ಭಾಗವಾಗಿರುವುದು ಹೆಮ್ಮೆಯ ಸಂಗತಿಯೇ ಸರಿ. ಇನ್ನು ಇದರಡಿಯಲ್ಲಿ ಏನೇನು ಸಮಾಜಮುಖಿ ಕಾರ್ಯ ಮಾಡಲು ಸಾಧ್ಯವಿದೆಯೋ ಅವುಗಳೆಲ್ಲನವನ್ನು ಒಟ್ಟಾಗಿ ಮಾಡೋಣ. ಇದೊಂದು ಅಸಹಾಯಕರಿಗೆ ಸಹಾಯ ಮಾಡುವ ಸಂಸ್ಥೆಯಾಗಿದ್ದು,ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನಕಾರ್ಯದಶರ್ಿ ಡಾ. ಶ್ರೀನಿವಾಸ ಹ್ಯಾಟಿ ಅವರು ಮಾತನಾಡಿ, ಕಳೆದ ವರ್ಷದ ವಾಷರ್ಿಕ ವರದಿಯನ್ನು ಓದಿದರಲ್ಲದೆ ನಡೆದಬಂದ ದಾರಿಯನ್ನು ವಿವರಿಸಿದರು. ಕಳೆದ ಬಾರಿಯ ವಾಷರ್ಿಕ ಮಹಾಸಭೆಯಲ್ಲಿ ನಡೆದ ನಿರ್ಣಯಗಳು ಹಾಗೂ ಅವುಗಳ ಅನುಷ್ಠಾನ ಮಾಡಿರುವ ಕುರಿತು ವಿವರಣೆ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮುಂದೆ ಹಲವು ಗುರಿಗಳು ಇವೆ. ಅವುಗಳಲ್ಲಿ ಈಗಾಗಲೇ ಕೆಲವನ್ನು ಕಾರ್ಯಗತ ಮಾಡಿದ್ದು, ಮುಂದಿನ ದಿನಗಳಲ್ಲಿ ಉಳಿದವುಗಳನ್ನು ಕಾರ್ಯಗತ ಮಾಡಲು ಶತಾಯ ಶ್ರಮಿಸಲಾಗುವುದು ಎಂದರು. ನೇತ್ರ ಸಂಗ್ರಹಣಾ ಘಟಕ ಪ್ರಾರಂಭಿಸಲಾಗಿದ್ದು, ಐ ಬ್ಯಾಂಕ್ ಸ್ಥಾಪನೆಗಾಗಿ ರೆಡ್ ಕ್ರಾಸ್ ಭವನ ನಿಮರ್ಾಣಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೈಸ್ ಚೇರಮನ್ ಡಾ. ಚಂದ್ರಶೇಖರ ಕರಮುಡಿ ಅವರು ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದುವರೆಗೂ ಅನೇಕ ಜನಸೇವಾ ಕಾರ್ಯಕ್ರಮಗಳನ್ನು ಮಾಡಿದ್ದು, ಮುಂದೆಯೂ ಮಾಡುವ ಉದ್ಧೇಶ ಹೊಂದಿದೆ ಎಂದರು. ಇದಕ್ಕೆ ಇನ್ನು ದೊಡ್ಡ ಪ್ರಮಾಣದ ಸಹಕಾರವನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು. 2016-17 ಹಾಗೂ 2017-18 ನೇ ಸಾಲಿ ಲೆಕ್ಕಪತ್ರ ಹಾಗೂ ಮುಂಗಡ ಆಯವ್ಯಯದ ಕುರಿತು ಮಾಹಿತಿಯನ್ನು ಖಜಾಂಚಿ ಸುಧೀರ ಅವರಾದಿ ಅವರು ಮಂಡಿಸಿ, ಸವರ್ಾನುಮತದಿಂದ ಅನುಮೋದನೆಯನ್ನು ಪಡೆದರು.
ಪ್ರಾರಂಭದಲ್ಲಿ ಸಹನಾ ಸಜ್ಜನ ಮತ್ತು ಕೀತರ್ಿ ಪಾಟೀಲ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಂತೋಷ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರೇ ರಾಜೇಶ ಯಾವಗಲ್ ಸ್ವಾಗತಿಸಿದರು. ಕೊನೆಯಲ್ಲಿ ಜಿ.ಎಸ್. ಗೌಡರ ಅವರು ವಂದಿಸಿದರು.