ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿ

ಕೊಪ್ಪಳ 14: ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಇ.ವಿ.ಎಂ. ಹಾಗೂ ವಿ.ವಿ. ಪ್ಯಾಟ್ ಯಂತ್ರಗಳ ಮತ್ತು ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಸ್ವೀಪ್ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.   

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನಾ, ಸೇಂಟ್ ಪಾಲ್ಸ್ ನ್ಯಾಷನಲ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಅಭಿನವ ಸಿದ್ದೇಶ್ವರ ಶಿಕ್ಷಣ ಗ್ರಾಮೀಣ ಕ್ಷೇಮಾಭೀವೃದ್ಧಿ ಯುವಕ ಸಂಘ ಕೊಪ್ಪಳ, ಇವರ ಸಹಯೋಗದಲ್ಲಿ ಬುಧವಾರದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ "ಮತದಾರರ ಜಾಗೃತಿ ಕಾರ್ಯಕ್ರಮ" ಹಾಗೂ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಯಿತು. 

ಶಿಕ್ಷಣ ಇಲಾಖೆಯ ಬಸವರಾಜ ಅವರು ಮತ ಖಾತ್ರಿ ಯಂತ್ರವಾದ ವಿ.ವಿ. ಪ್ಯಾಟ್  ಬಗ್ಗೆ ಅರಿವು ಹಾಗೂ ತರಬೇತಿಯನ್ನು ನೀಡಿದರು.  ಕ್ರೀಡಾಧಿಕಾರಿ ಆರ್.ಜಿ. ನಾಡಗೀರ ಸೇರಿದಂತೆ ಅಂದಾಜು 175 ಯುವಕ/ ಯುವತಿಯರು ಹಾಗೂ ಕ್ರೀಡಾಪಟುಗಳು ಸಾರ್ವಜನಿಕರು, ಕ್ರೀಡಾ ಇಲಾಖೆ ಸಿಬ್ಬಂದಿ, ಕಾಲೇಜು ಸಿಬ್ಬಂದಿ, ಸಂಘದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮತದಾನ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಿದರು.  ಅಲ್ಲದೇ ಯುವ ಮತದಾರರು ಪ್ರಾಯೋಗಿಕವಾಗಿ ಮತದಾನ ಮಾಡಿ, ತಾವು ಹಾಕಿರುವ ಮತವನ್ನು ವಿ.ವಿ. ಪ್ಯಾಟ್ ಮೂಲಕ ಖಾತ್ರಿ ಪಡಿಸಿಕೊಂಡರು.  ಕ್ರೀಡೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ಸಹ ನೀಡಲಾಯಿತು.