ಕೊಪ್ಪಳ 15: ಲೊಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ವಿವಿಧ ಅಧಿಕಾರಿಗಳ ತಂಡವು ಗುರುವಾರದಂದು ವಿವಿಧ ಗ್ರಾಮಗಳ ಸೂಕ್ಷ್ಮ/ ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದೆ.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳನ್ನೊಳಗೊಂಡ ತಂಡವು ಕೊಪ್ಪಳ ತಾಲೂಕಿನ ಮಂಗಳಾಪುರ, ಹೊರತಟ್ನಾಳ, ಬಹದ್ದೂರ ಬಂಡಿ, ಹ್ಯಾಟಿ, ಕುಣಿಕೇರಾ, ಕುಣಿಕೇರಾ ತಾಂಡಾ, ಹಿರೇಬಗನಾಳ, ಕನಕಾಪುರ, ಹೊಸ ಕನಕಾಪುರ ಹಾಗೂ ಗಿಣಿಗೇರಾ ಗ್ರಾಮಗಳಿಗೆ ತೆರಳಿ, ಸೂಕ್ಷ್ಮ/ ಅತೀ ಸೂಕ್ಷ್ಮ ಮತಗಟ್ಟೆಗಳ ಕುರಿತು ಪರಿಶೀಲನೆ ನಡೆಸಿತು. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಸಹಕರಿಸಿ, ಶಾಂತಿಯುತವಾಗಿ ಮತದಾನ ನಡೆಸಿಕೊಡಲು ಸಹಕರಿಸಬೇಕು ಎಂದು ಎಲ್ಲಾ ಗ್ರಾಮಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಚರ್ಚಿ ಸಿದರು.