ಗದಗ ತಾಲೂಕ ಜಲಶಕ್ತಿ ಅಭಿಯಾನ ಜಾಗೃತಿ ಜಾಥಾ

ಗದಗ 26:   ಜಲಶಕ್ತಿ ಅಭಿಯಾನ ಜಾಗೃತಿ ಜಾಥಾವು ಗದಗ ತಾಲೂಕಿನ ಬಿಂಕದಕಟ್ಟಿ  ಹಾಗೂ ಬಳಗಾನೂರಿನಲ್ಲಿ ಜರುಗಿತು. ಜಿಲ್ಲೆಯ ಅಂತರ್ಜಲ ಮಟ್ಟ ಕುಸಿತದ ಆಧಾರದ ಮೇಲೆ ಗದಗ ಹಾಗೂ ರೋಣ ತಾಲೂಕುಗಳನ್ನು ಜಲಶಕ್ತಿಯನ್ನು ಅಭಿಯಾನದಡಿ ಆಯ್ಕೆ ಮಾಡಲಾಗಿದೆ. 

ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯಿಕರಣ, ಅಂತರ್ಜಲ ಪುನಶ್ಚೇತನ, ಮಳೆ ನೀರು ಸಂಗ್ರಹಣೆ ಕುರಿತಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕನರ್ಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಹಾಗೂ ಗದಗ ಜಿಲ್ಲಾ ಪಂಚಾಯತ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.