ಲೋಕದರ್ಶನ ವರದಿ
ಗದಗ 27: ಗುರು ಎಂದರೆ ಅರ್ಥ ಅಂಧಕಾರವನ್ನು ಹೋಗಲಾಡಿಸುವವನು. ಎಲ್ಲಿ ಅಂಧಕಾರ ಇದೆಯೋ ಅಲ್ಲಿ ದುಃಖ ಇದೆ, ಮೋಸ ಇದೆ, ಕಳ್ಳತನ ಇದೆ, ಭಯ ಇದೆ, ಅಂಧಕಾರದಲ್ಲಿ ಎಡವಿ ಬೀಳುವ ಸಂಭವವಿದೆ. ಅದೇ ರೀತಿ ಜೀವನದಲ್ಲಿ ದೇಹ ಪ್ರಜ್ಞೆ ಎನ್ನುವ ಆತ್ಮ ಜ್ಞಾನದ ಬೆಳಕಿಲ್ಲದೆ ಕತ್ತಲೆಯಲ್ಲಿ ಮುಳಗಿರುವ ಮನುಷ್ಯ ವಿಕಾರಿ ಗುಣಗಳಿಂದ ಕೆರಳಿ ಕೆಂಡವಾಗುತ್ತಿದ್ದಾನೆ. ಆತ್ಮ ಜ್ಞಾನದ ಬೆಳಕಿನಿಂದ ಜೀವನವನ್ನು ಅರಳಿಸಲು ದುಃಖ, ರೋಗ, ಭಯ, ವೇದನೆ, ನೋವು, ಒತ್ತಡ ಇದರಿಂದ ಹೊರಬರಲು ಆಧ್ಯಾತ್ಮ ಜ್ಞಾನ ಹಾಗು ಮೆಡಿಟೇಷನ್ ಎನ್ನುವುದು ಒಂದು ದಿವ್ಯ ಔಷದಿ. ಈ ರೀತಿ ರೋಗಿಗಳಿಗೆ ಈಶ್ವರೀಯ ಸಂದೇಶವನ್ನು ನೀಡಿ ಆಂತರಿಕ ಬಲವರ್ಧನೆಯನ್ನು ಮಾಡುತ್ತಾ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಾ ಜಾಗೃತಿ ಕಾರ್ಯಕ್ರಮವನ್ನು ಮಾನಸಿಕವಾಗಿ ಸಶಕ್ತವಾಗುವ ಜೊತೆ ಜೊತೆಗೆ ಶರೀರಕ್ಕೆ ಶಕ್ತಿ ಬರಲೆಂದು ಹಣ್ಣನ್ನು ಪ್ರಸಾದ ರೂಪದಲ್ಲಿ ಹಂಚಲಾಯಿತು. ಪ್ರಸಾದದಲ್ಲಿ ಶಕ್ತಿ ಇದೆ, ಪ್ರಸಾದದಲ್ಲಿ ಆಶೀವರ್ಾದ ಇದೆ, ಪ್ರಸಾದದಲ್ಲಿ ಪವಿತ್ರತೆಯ ಬಲ ಇದೆ. ಪ್ರಸಾದ ಎನ್ನುವುದು ಶರೀರ ಮತ್ತು ಮನಸ್ಸು ಎರಡನ್ನು ಸಶಕ್ತಗೊಳಿಸುವುದು ಎಂದು ಹಣ್ಣು ಹಂಚುವ ಜೊತೆಗೆ ಈಶ್ವರೀಯ ವಿಶ್ವ ವಿದ್ಯಾಲಯ ಸ್ಥಳೀಯ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಸಂದೇಶ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಜಿ.ಎಸ್ ಪಲ್ಲೇದವರು ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ವಾಗತಿಸಿದರು. ಗದಗ ವೈಧ್ಯಕೀಯ ಸಂಸ್ಧೆ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಮುಖ್ಯಸ್ಧರು ಡಾ. ಉಮೇಶ್. ಕೆ, ಶುಶೃಕೆ ಮಾಡುವ ಶುಶೃಕೆಯರಾದ(ನಸರ್್ಗಳು) ದೀಪಾ, ಕುಮಾರಿ ವಿದ್ಯಾ, ಶಶಿಕಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಬಿ.ಕೆ ರೇಖಾ, ಬಿ.ಕೆ ವಿಮಲಾ, ಬಿ.ಕೆ ಲಕ್ಷ್ಮೀಯವರು ಹಣ್ಣು ಹಂಚಿದರು.