ಕೊಪ್ಪಳ: ಇ.ವಿ.ಎಂ. ವಿ.ವಿ. ಪ್ಯಾಟ್ ಕುರಿತು ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ

ಕೊಪ್ಪಳ 11: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಇ.ವಿ.ಎಂ. ಹಾಗೂ ವಿ.ವಿ. ಪ್ಯಾಟ್ ಯಂತ್ರಗಳ ಕುರಿತು ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. 

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಎಲ್ಲಾ ಪತ್ರಕರ್ತರು ಇ.ವಿ.ಎಂ. ನಲ್ಲಿ ಪ್ರಯೋಗಿಕವಾಗಿ ಮತ ಚಲಾಯಿಸಿ, ವಿವಿ ಪ್ಯಾಟ್ ಮೂಲಕ ಮತ ಖಾತ್ರಿ ಪಡಿಸಿಕೊಂಡರು.