ಲೋಕದರ್ಶನ ವರದಿ
ಗಜೇಂದ್ರಗಡ 29: ಜನಸಾಮಾನ್ಯರು ಅರಿಯದ ಅದೇಷ್ಟೋ ವಿಷಯಗಳನ್ನು ವರದಿಗಾರರು ತಮ್ಮ ಬರವಣಿಗೆಯನ್ನು ಪತ್ರಿಕೆಯ ಮೂಲಕ ಬಿಂಬಿಸುತ್ತಾರೆ ಅವುಗಳನ್ನು ಖರೀದಿ ಮಾಡಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ತಾಲೂಕಿನ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಹೇಳಿದರು.
ಪಟ್ಟಣದ ಎಸ್.ಎಮ್.ಭೂಮರಡ್ಡಿ ಪಿ ಯು ಕಾಲೇಜಿನ ಸಭಾ ಭವನದಲ್ಲಿ ನಡೆದ ಗಜೇಂದ್ರಗಡ ತಾಲೂಕಾ ಪತ್ರರ್ತರು, ವಿತರರಕರವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ವಿತರಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ತಿದ್ದುವ ಗುರತರವಾದ ಜವಾಬ್ದಾರಿಯೂ ಪತ್ರಕರ್ತರ ಮೇಲೆ ಇರುತ್ತದೆ. ಯಾರಿಗೂ ಅನ್ಯಾಯವಾಗದೆ ಇರುವ ನಿಟ್ಟಿನಲ್ಲಿ ನಿಸ್ವಾಥತತೆಯಿಂದ ಕೆಲಸ ಮಾಡಲು ಎಲ್ಲಾ ಪತ್ರಕರ್ತರು ಶ್ರಮಿಸಬೇಕು. ಎಲ್ಲೇ ಅನ್ಯಾಯ ನಡೆದರು ಅದನ್ನು ತಮ್ಮ ಬರವಣಿಗಯ ಮೂಲಕ ಸೂಕ್ತವಾದ ನ್ಯಾಯ ನೀಡುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕು ಎಂದರು.
ಬಳಿಕ ಯುವ ಬರಹಗಾರರ ಕುರಿತಾಗಿ ಸಕರ್ಾರಿ ಪಾಲಿಟೆಕ್ನಿಕ ಕಾಲೇಜಿನ ಪ್ರಾಚಾರ್ಯರಾದ ಎಸ್.ಟಿ.ಬೈರಪ್ಪವರ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು, ಬರವಣಿಗೆಯ ಕೌಶಲ್ಯ ಎಲ್ಲರಲ್ಲಿಯೂ ಇದ್ದೇ ಇರುತ್ತದೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೂಕ್ತವಾದ ವೇದಿಕೆಯ ಮೂಲಕ ಅದನ್ನು ಹೊರಹಾಕಬೇಕು ಹಾಗೂ ಪತ್ರಿಕೆಯಲ್ಲಿ ಅನೇಕ ಸದಾವಕಾಶಗಳು ಇರುತ್ತವೆ ಅದರ ಮಾಹಿತಿಯನ್ನು ಪಡೆದು ಅಂತಹ ಪತ್ರಿಕೆಗೆ ತಮ್ಮ ಬರವಣಿಗೆಯನ್ನು ಕಲುಹಿಸಿಬೇಕು ಹಾಗೂ ಯಾವೂದೇ ಕಾರಣಕ್ಕೂ ಬರವಣಿಗೆಯನ್ನು ನಿಲ್ಲಿಸಬಾರದು ಒಂದು ವೇಳೆ ನಿಲ್ಲಿಸಿದ್ದೇ ಆದರೆ ಅಂತವರು ಅವರ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುತ್ತದೆ ಎಂದು ನುಡಿದರು.
ಬಳಿಕ ಪತ್ರಿಕೆ ನಡೆದು ಬಂದ ದಾರಿಯ ಕುರಿತಾಗಿ ಎಸ್.ಎಮ್.ಬಿ. ಕಾಲೇಜಿನ ಉಪನ್ಯಾಸಕರಾದ ಎಸ್.ಕೆ.ಕಟ್ಟಿಮನಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಕಸಾಪ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಅದ್ಯಕ್ಷ ಈಶ್ವರಪ್ಪ ರೇವಡಿ, ಗಜೇಂದ್ರಗಡ ತಾಲೂಕಾ ದಕ್ಷ ಪೋಲಿಸ್ ಅಧಿಕಾರಿ ಆರ್. ವಾಯ್. ಜಲಗೇರಿ, ಡಾ.ಪ್ರಭು ಗಂಜಿಹಾಳ, ಮಾತನಾಡಿದರು.ಗಜೇಂದ್ರಗಡ ತಾಲೂಕಿನಲ್ಲಿನ ಸುಮಾರು 40ಕ್ಕೂ ಹೆಚ್ಚು ವಿತರಕರಿಗೆ ಮಳೆಗಾಲದಲ್ಲಿ ಅವರ ರಕ್ಷಣೆಗಾಗಿ ಜಾಕೇಟ್ ವಿತರಣೆ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ.ಜೆ. ಕುದರಿ, ಹಿರಿಯ ಪತ್ರಕರ್ತ ರಾಘವೇಂದ್ರ ಕುಲಕಣರ್ಿ, ಮುತ್ತು ಚವ್ಹಾಣ, ಗುರು.ಬ. ಕಲ್ಮಂಗಿಮಠ, ಸೀತಲ ಓಲೇಕಾರ, ಪ್ರತಾಫಸಿಂಹ ರಾಠೋಡ, ಅಶೋಕ ಉಕ್ಕಿಸಲ, ಕಿರಣ ನಿಡಗುಂದಿ, ಶಂಕರ ರಾಠೋಡ, ಪಾಂಡುರಂಗ ಶೀಲವೇರಿ, ಚನ್ನು ಸಮಂಗಡಿ, ಸಿದ್ದಪ್ಪ ಚುಚರ್ಿಹಾಳ,ನಾಗಪ್ಪ ಮ್ಯಾಗೇರಿ, ಮಲ್ಲಿಕಾಜರ್ುನ ಹಡಪದ, ಮಹಾಂತಯ್ಯ ಕಂಪ್ಲಿಮಠ ಕುಮಾರ ಗೌರಿಮಠ, ಸೇರಿದಂತೆ ಕಾಲೇಜಿ ಉಪನ್ಯಾಸಕರು, ಸಾರ್ವಜನಿಕರು, ಪುರಸಭೆ ಸದಸ್ಯರು, ವಿದ್ಯಾಥರ್ಿಗಳು ಹಾಜರಿದ್ದರು.