ಕೀಟಜನ್ಯ ರೋಗಗಳ ನಿಯಂತ್ರಣ ವಿವಿಧ ಇಲಾಖೆಗಳ ಸಮನ್ವಯತೆ ಅಗತ್ಯ

ಗದಗ 23: ಕೀಟಜನ್ಯ ರೋಗಗಳಾದ ಡೆಂಗ್ಯೂ, ಚಿಕೂನ್ಯ ಗುನ್ಯಾ,  ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು  ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು  ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. 

         ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೀಟಜನ್ಯ ರೋಗಗಳ   ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಕ್ಕಾಗಿ ವಿವಿಧ  ಇಲಾಖೆಗಳ ಸಮನ್ವಯ ಸಮಿತಿ ಸಭೆ  ಅಧ್ಯಕ್ಷತೆ  ವಹಿಸಿ  ಅವರು ಮಾತನಾಡಿದರು. 

      ಮಲೇರಿಯಾ, ಡೆಂಗ್ಯೂ ಖಚಿತ ಪಟ್ಟ  ರೋಗಿಗಳಿಗೆ ತಕ್ಷಣ  ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು  ಆರೋಗ್ಯ ಇಲಾಖೆ  ನೀಡಬೇಕು.   ಆಯುಷ್ಮಾನ್ ಭಾರತ ಮತ್ತು  ಆರೋಗ್ಯ ಕರ್ನಾಟಕ  ಯೋಜನೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.    ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಹಾಗೂ  ವಸತಿ ನಿಲಯಗಳ   ವಿದ್ಯಾಥರ್ಿಗಳಿಗೆ ಸ್ವಚ್ಛತೆಯ ಕುರಿತು ತಿಳುವಳಿಕೆ  ಕಾರ್ಯಕ್ರಮ ಜರುಗಿಸಲು   ಜಿಲ್ಲಾಧಿಕಾರಿಗಳು  ತಿಳಿಸಿದರು.

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.  ವಿರುಪಾಕ್ಷರಡ್ಡಿ ಮಾದಿನೂರು ಜಿಲ್ಲೆಯ   ಗ್ರಾಮೀಣ ಪ್ರದೇಶಗಳಲ್ಲಿ  ಕೀಟಜನ್ಯ ರೋಗಗಳ ನಿಯಂತ್ರಣ ಜನಜಾಗೃತಿಗಾಗಿ    ಡಂಗುರ  ಮತ್ತು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕುರಿತು ವಿವರಿಸಿದರು. 

         ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕಣರ್ಿ   ಮಾತನಾಡಿ  ಜೂನ್ 2019 ರವರೆಗೆ ಜಿಲ್ಲೆಯಲ್ಲಿ ಒಟ್ಟು  30 ಡೆಂಗ್ಯೂ, 61 ಚಿಕೂನ್ ಗುನ್ಯಾ ,  36 ಮಲೇರಿಯಾ ಪ್ರಕರಣಗಳು  ಖಚಿತಗೊಂಡಿವೆ.  ಯಾವುದೇ ಸಾವು ಸಂಭವಿಸಿರುವುದಿಲ ಎಂದರು.   ಡೆಂಗ್ಯೂ ಮತ್ತು ಚಿಕೂನ್ಯ ಗುನ್ಯಾ ರೋಗಗಳ ನಿಯಂತ್ರಣಕ್ಕೆ  ಮುಂಜಾಗ್ರತೆಯಾಗಿ   ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು   ಸಹಾಯಕರು ಒಟ್ಟು  91968 ಮನೆಗಳಲ್ಲಿ ಲಾವರ್ಾ ಸಮೀಕ್ಷೆ ಕೈಗೊಂಡಿದ್ದಾರೆ. 8039 ಸ್ಥಳಗಳಲ್ಲಿ  ಲಾರ್ವಾ ಕಂಡು ಬಂದಿದ್ದು ಅವುಗಳನ್ನು    ನಿಮರ್ೂಲನೆ ಮಾಡಲಾಗಿದೆ.  ಸೊಳ್ಳೆಗಳ ನಿಯಂತ್ರಣಕ್ಕಾಗಿ  ಖಚಿತ ಪ್ರಕರಣಗಳು ಬಂದ ಗ್ರಾಮಗಳಲ್ಲಿ  ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮವಾಗಿ  ಫಾಗಿಂಗ್ ಮಾಡಲಾಗಿದೆ.  ಗ್ರಾಮ ಪಂಚಾಯತ್ಗಳಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಪಂಚಾಯತ್ ಕಾರ್ಯಾಲಯದ ಸಿಬ್ಬಂದಿಯವರಿಗೆ  ಶಾಲಾ ಹಾಗೂ ಕಾಲೇಜುಗಳಲ್ಲಿ   ಪರಿಸರ ಸ್ವಚ್ಛತೆ ಹಾಗೂ ಕೀಟಜನ್ಯ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಗಳ ಬಗ್ಗೆ ಅರಿವು ಮೂಡಿಸಲಾಗಿದೆ ನಿಂತ ನೀರಿನ ತಾಣಗಳಲ್ಲಿ ಲಾವರ್ಾ ನಾಶಕ ರಾಸಾಯನಿಕವನ್ನು ಹಾಕಲಾಗುತ್ತಿದೆ. ಮಲೇರಿಯಾ ರೋಗದ ನಿಯಂತ್ರಣಕ್ಕಾಗಿ  ಜಿಲ್ಲೆಯಲ್ಲಿ ಗುತರ್ಿಸಿದಂತಹ 33 ಲಾವರ್ಾಹಾರಿ ಮೀನುಗಳಾದ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನುಗಳನ್ನು ಬೆಳೆಸಿ  ಹೊಂಡ, ಕೆರೆ, ಇನ್ನಿತರ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲಾಗಿದೆ.  ಸಾರ್ವಜನಿಕರಿಗೆ ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ, ಸೊಳ್ಳೆ ಬ್ಯಾಟ್, ಕ್ವಾಯಿಲ್ ಉಪಯೋಗಿಸಲು,  ಹಾಗೂ ಬೇವಿನ ಸೊಪ್ಪಿನ ಹೊಗೆ ಹಾಕಲು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ  ಎಂದು ಡಾ. ಅರುಂಧತಿ ಕುಲಕರ್ಣಿ  ಸಭೆಗೆ ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ  ಡಾ..ಜಿ. ಎಸ್ ಪಲ್ಲೇದ, ಆರ್.ಸಿ.ಎಚ್. ಅಧಿಕಾರಿ ಡಾ. ಗೊಜನೂರ,  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಂದ್ರಕಲಾ ಜೆ,  ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ, ತಾಲೂಕಾ ವೈದ್ಯಾಧಿಕಾರಿಗಳು,   ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.