'ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಅರಿವು ಮೂಡಿಸುವುದು ಅವಶ್ಯಕ'

ಗದಗ 19:   ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.    ತಂಬಾಕು  ಸೇವನೆಯಿಂದ ಕ್ಯಾನ್ಸರ್ , ಹೃದಯ, ಶ್ವಾಸ ಸಂಬಂಧಿ ಮಾರಣಾಂತಿಕ ರೋಗಗಳು ಬರುತ್ತವೆ.  ಯುವಕರು ಸೇರಿದಂತೆ ಸಾರ್ವಜನಿಕರಲ್ಲಿ   ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ. ಸಲಗರೆ ನುಡಿದರು.

ಗದಗ ಜಿಲ್ಲಾ ಆರೋಗ್ಯ ಮತ್ತು   ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಿ ಇಲಾಖೆ, ಜಿಲ್ಲಾ ವಾತರ್ಾ ಇಲಾಖೆ, ಜಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ    ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಅಧಿನಿಯಮ ಕೋಟ್ಪಾ 2003 ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ತಂಬಾಕು ಸೇವನೆಯಿಂದ 10 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.    ಇಂದಿನ ಯುವಕರು  ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗದಂತೆ ಮುಂಜಾಗ್ರತೆ ವಹಿಸುವುದು  ಬಹಳ ಮುಖ್ಯ.  ಈ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಎಸ್.ಜಿ. ಸಲಗರೆ ತಿಳಿಸಿದರು.

ಮಂಜುನಾಥ ಬೊಮ್ಮನಕಟ್ಟಿ ಅವರು ಮಾತನಾಡಿ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಟಾನದಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ.  ಶಾಲಾ ಆವರಣದಿಂದ 100 ಮೀಟರ್  ವ್ಯಾಪ್ತಿಯಲ್ಲಿ  ತಂಬಾಕು ಮಾರಾಟ  ಮಾಡುವ ವ್ಯವಸ್ಥೆ ಕಂಡುಬಂದರೆ ಮಕ್ಕಳ ಸಹಾಯವಾಣಿ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ.   ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ  ತಂಬಾಕು ನಿಯಂತ್ರಣ ಕುರಿತು   ತಾಲೂಕು ಮಟ್ಟದಲ್ಲಿಯೂ ತರಬೇತಿ ಕಾರ್ಯ  ಏರ್ಪಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ  ಅವರು ಮಾತನಾಡಿ  ತಂಬಾಕು ಸೇವನೆ ದುಷ್ಪರಿಣಾಮ ಕುರಿತು  ಜಾಗೃತಿ ಮೂಡಿಸಲಾಗುತ್ತಿದ್ದು    ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಗಾರಗಳನ್ನು ತಾಲೂಕು ಮಟ್ಟದಲ್ಲಿಯೂ ಆಯೋಜಿಸುವದರೊಂದಿಗೆ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು   ಎಂದರು.  

         ಜಿಲ್ಲಾ ಸಮೀಕ್ಷಾಧಿಕಾರಿಗಳು ಹಾಗೂ ಎನ್.ಟಿ.ಸಿ.ಪಿ. ಕಾರ್ಯಕ್ರಮಾಧಿಕಾರಿ ಡಾ. ಸತೀಶ ಬಸರಿಗಿಡದ ಅವರು ಪ್ರಾಸ್ತಾವಿಕವಾಗಿ  ಮಾತನಾಡಿ  ತಂಬಾಕು ನಿಯಂತ್ರಣ  ಅಧಿನಿಯಮ  ಕೋಟ್ಪಾ 2003 ಎಪ್ರಿಲ್ 14 ರಂದು ಈ ಕಾಯ್ದೆ ಜಾರಿಗೆ ಬಂದಿತು.  ತಂಬಾಕು ಸೇವನೆಯಿಂದ ದುಷ್ಪರಿಣಾಮಗಳ ಕುರಿತು   ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  ಶಾಲಾ ಕಾಲೇಜುಗಲ್ಲಿ   ಪಿಪಿಟಿ ಮುಖಾಂತರ, ತಾಲೂಕು ಹಾಗೂ  ಗ್ರಾಮೀಣ ಪ್ರದೇಶಗಳಲ್ಲಿ ಜಾಥಾ ಮುಖಾಂತರ, ಬೀದಿ ನಾಟಕ, ಗೋಡೆ ಬರಹ, ಫ್ಲಕ್ಸ್ , ಬ್ಯಾನರ್ ಅಳವಡಿಕೆ ಮುಖಾಂತರ ಹೆಚ್ಚಿನ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ.   ಈ ನಿಟ್ಟಿನಲ್ಲಿ  ವ್ಯಾಪಕ   ಪ್ರಚಾರ  ಕೈಗೊಳ್ಳಲಾಗುತ್ತಿದೆ ಎಂದರು.

          ಜಿಮ್ಸ್ದ  ಡಾ. ಅರವಿಂದ ಕರಿನಾಗಣ್ಣವರ ಅವರು ಉಪನ್ಯಾಸ ನೀಡಿ ಆರೋಗ್ಯಕರ   ಸಮಾಜ ನಿಮರ್ಾಣವಾಗಬೇಕಾದರೆ ಸಮಾಜವು  ತಂಬಾಕು ಮುಕ್ತವಾಗಬೇಕು. ಜಗತ್ತಿನಲ್ಲಿ 50ರಿಂದ 60 ಲಕ್ಷ  ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ.   ಧೂಮಸಹಿತ ತಂಬಾಕು ವಸ್ತುಗಳಲ್ಲಿ 4000 ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳಿದ್ದು ಅದರಲ್ಲಿ 60 ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಕಾಯಿಲೆ ಉಂಟುಮಾಡುತ್ತವೆ.   ತಂಬಾಕು ಸೇವಿಸುವ  ಮಹಿಳೆಯರು ಬಂಜೆತನ,  ಗರ್ಭಪಾತ, ಗರ್ಭಧಾರಣೆಯಲ್ಲಿ ಕುಂಠಿತ,  ದಂತ ಕ್ಷಯ, ಕಡಿಮೆ ತೂಕದ ಮಗುವಿನ ಜನನ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದರು. 

ಇಂದಿನ  ಯುವಕರು  ಕೌಟುಂಬಿಕ ಹಿನ್ನೆಲೆ, ಗೆಳೆತನದಿಂದ, ಕೆಲಸದೊತ್ತಡದಿಂದ, ಮಾನಸಿಕ ಖಿನ್ನತೆಯಿಂದ ತಂಬಾಕು ಸೇವನೆಯ  ದುಶ್ಚಟಕ್ಕೆ ಬಲಿಯಾಗುತ್ತಿದ್ದು  ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ವಹಿಸಬೇಕು.  ತಂಬಾಕು ವ್ಯಸನಿಗಳಿಗೆ ನಿಕೋಟಿನ್ ಮಾತ್ರೆ   ಸೇವನೆ ಮತ್ತು ಸೂಕ್ತ ಸಮಾಲೋಚನೆ, ತಿಳುವಳಿಕೆ  ನೀಡುವ ಮುಖಾಂತರ, ತಂಬಾಕು ವ್ಯಸನಮುಕ್ತಿ ಕೇಂದ್ರವನ್ನು ಸಂಪಕರ್ಿಸಿ  ಸಾರ್ವಜನಿಕರು  ಆರೋಗ್ಯಕರ ಸಮಾಜ ನಿಮರ್ಿಸುವಲ್ಲಿ ಮುಂದಾಗಬೇಕು ಎಂದು ಡಾ. ಅರವಿಂದ ಕರಿನಾಗಣ್ಣವರ ತಿಳಿಸಿದರು.  

ತಂಬಾಕು ನಿಯಂತ್ರಣ ಕೋಶದ  ಸಲಹೆಗಾರರಾದ ಗೋಪಾಲ ಸುರಪುರ ಅವರು ಮಾತನಾಡಿ    ಕೋಟ್ಪಾ ಕಾಯ್ದೆ  ಸೆಕ್ಷನ್  4 ಪ್ರಕಾರ  ಸಾರ್ವಜನಿಕ ಪ್ರದೇಶಗಳಲ್ಲಿ  ಧೂಮಪಾನ ನಿಷೇಧಿಸಲಾಗಿದೆ.  ಸಾರ್ವಜನಿಕ ಸ್ಥಳಗಳಲ್ಲಿ  ದೂಮಪಾನ  ಮಾಡುವುದು ಅಪರಾಧವಾಗಿದ್ದು ಉಲ್ಲಂಘನೆಯಾದಲ್ಲಿ 200 ರೂ. ದಂಡ ವಿಧಿಸಲಾಗುವುದು.  ಸೆಕ್ಷನ್  5 ಪ್ರಕಾರ    ತಂಬಾಕಿನ ಕುರಿತು ಜಾಹೀರಾತು  ಬಿಡುಗಡೆ  ನಿಷೇಧಿಸಲಾಗಿದೆ.   ಸೆಕ್ಷನ್  6 ಎ ಪ್ರಕಾರ  ತಂಬಾಕು ವಸ್ತುಗಳನ್ನು  ಮಕ್ಕಳು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.  ಸೆಕ್ಷನ್ 6 ಬಿ ಪ್ರಕಾರ  ಶಾಲಾ ಕಾಲೇಜು ಆವರಣದಿಂದ 100ಮೀಟರ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧಿಸಲಾಗಿದೆ ಎಂದು ತಂಬಾಕು ನಿಯಂತ್ರಣ ಅಧಿನಿಯಮ   ಕೋಟ್ಪಾ ಕಾಯ್ದೆ  2003 ನ್ನು ವಿವರಿಸಿದರು.      

           ಕಾರ್ಯಾಗಾರದಲ್ಲಿ   ಆರೋಗ್ಯ ಇಲಾಖೆಯ   ಸಿಬ್ಬಂದಿ   ಉಪಸ್ಥಿತರಿದ್ದರು.     ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ   ಬಸವರಾಜ ಲಾಳಗಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.