ಲೋಕದರ್ಶನ ವರದಿ
ಕಂಪ್ಲಿ 24; ಹಿರಿಯರು ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದು ಆಯೋಧ್ಯೆಯ ವೀರಶೈವ ಸಮಾಜದ ಮುಖಂಡ ಎಚ್.ಎಂ.ಶರಣಬಸವರಾಜ ಹೇಳಿದರು.
ಇಲ್ಲಿನ ಗುರುಮಠದಲ್ಲಿ ಗುರುವಾರ ಓದ್ಸೋ ಶಿವಾನಂದಾಶ್ರಮದಿಂದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 84ನೇ ಸ್ಮರಣೋತ್ಸವ ಹಾಗೂ ಲಿಂ.ಗೊಗ್ಗ ಬಸಯ್ಯನವರ 36ನೇವರ್ಷದ ಪುಣ್ಯ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ವಚನ ಸಂಗೀತ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ತಾಯಂದಿರುಮಕ್ಕಳಿಗೆ ಸಂಸ್ಕಾರ, ಜೊತೆಗೆ ಶರಣರ ವಚನ ಬಗ್ಗೆ ತಿಳಿಸಿ. ಮಾನವೀಯ ಮೌಲ್ಯಗಳುೆ ಕಲಿಸುವಲ್ಲಿ ಪೋಷಕರು ಮುಂದಾಗಬೇಕು ಎಂದು ಹೇಳಿದರು.
ಪುಣ್ಯ ಸ್ಮರಣೋತ್ಸವ ನಿಮಿತ್ತ ಹೊಸಪೇಟೆಯ ಯಲ್ಲಪ್ಪ ಬಂಡಾರಗರ್, ಕೊಂಡನಾಯಕನಹಳ್ಳಿಯ ಸುಜಾತ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕಾಶಿಣಾಥ ಹಾರ್ಮೋನಿಯಂ, ಯೋಗೇಶ್ ತಬಲಸಾತ್ ನೀಡಿದರು. ವಚನ, ಕೀತರ್ಿನೆಗಳು, ತತ್ವಪದಗಳನ್ನು ಹಾಡಿ ಶೋತೃಗಳ ಮನಸೂರೆಗೊಂಡರು.
ಗುರುಮಠದ ಪ್ರಮುಖರಾದ ಗೊಗ್ಗ ಚನ್ನಬಸವರಾಜ, ಗೊಗ್ಗ ಗುರುಸಿದ್ದಯ್ಯ, ಮುಕ್ಕುಂದಿ ರುದ್ರಾಣಿ ಬಸವರಾಜ, ಗೊಗ್ಗ ಶಾಂತ, ಎಸ್.ಶಾರದಾ, ಎಚ್.ಎಂ.ಅಕ್ಕಮ್ಮ, ಎಂ.ಎಸ್.ಶಶಿಧರಶಾಸ್ತ್ರಿ, ಕಲ್ಗುಡಿ ರಾಜೇಶ್ವರಿ, ಕೆ.ನಾಗರತ್ನ, ಗಡಾದ ವಿಜಯಾ, ಮುಕ್ಕುಂದಿ ಮಮತಾ, ಸಜ್ಜೇದ ವೀರಭದ್ರಪ್ಪ, ಜಿ.ಪ್ರಕಾಶ್, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಎಚ್.ನಾಗರಾಜ, ಮುಕ್ಕುಂದಿ ತಿಪ್ಪೆಸ್ವಾಮಿ, ಡಿ.ಶಿವನಾಗಪ್ಪ, ಕೆ.ಎಂ.ಚಂದ್ರಶೇಖರಶಾಸ್ತ್ರಿ, ಜಗದೀಶ್, ಯೋಗೇಶ್ ಸೇರಿ ಇತರರಿದ್ದರು.