ಸಿಸ್ಟರ್ ನಿವೇದಿತಾ ಶಾಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನುಡಿ ನಮನ

Salute to Siddeshwar Swamiji at Sister Nivedita School

 ಸಿಸ್ಟರ್ ನಿವೇದಿತಾ ಶಾಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನುಡಿ ನಮನ 

ವಿಜಯಪುರ 07: ನಗರದ ಹೊರ ವಲಯ ಬುರಣಾಪುರ ರಸ್ತೆಯ ಮಹಾತ್ಮ ಗಾಂಧಿ ನಗರದ ಸಿಸ್ಟರ್ ನಿವೇದಿತಾ ಪೂರ್ವ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿನಾಂಕ- 07-01-2025 ರಂದು ಶತಮಾನದ ಶ್ರೇಷ್ಠ ದಾರ್ಶನಿಕರು ನಡೆದಾಡುವ ದೇವರು ಎಂದು ಜನರ ಹೃದಯದಲ್ಲಿ ಸ್ಥಾನ ಪಡೆದ ಸಿದ್ದೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸ್ಮರಣೆ ದಿನದಂದು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಭಕ್ತಿಪೂರ್ವಕ ನುಡಿ ನಮನ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾದ್ಯಾಯಿನಿ ನಿರ್ಮಲಾ ಅವಟಿ ಪೂಜ್ಯರು ದೇಶ ವಿದೇಶಗಳಲ್ಲಿ ಸಂಚರಿಸಿ ತಮ್ಮ ಪ್ರವಚನಗಳ ಮೂಲಕ ಜ್ಞಾನದ ಬೆಳಕಿನಲ್ಲಿ ಜನರ ಅಜ್ಞಾನ ಮನಸಿನ ಕ್ಲೇಷಗಳನ್ನು ಕಳೆದು ಬಾಳಿಗೆ ಬೆಳಕಾಗಿ ನಿಂತರು. ನಿರಬಾರಿ ಸಂತರಾಗಿ ಶಾಂತಿಯ ಸಂದೇಶ ಸಾರಿ ಭೌತಿಕವಾಗಿ ಇರದಿದ್ದರು, ಭಕ್ತರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಸ್ಮರಣೆಯೇ ಭಕ್ತರ ಬಾಳಿಗೆ ದಾರೀದೀಪ ಎಂದರು. 

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಸಂತತ್ವಕ್ಕೆ ಹೊಸ ಭಾಷ್ಯ ಬರೆದ ಸಿದ್ದೇಶ್ವರ ಶ್ರೀಗಳು ಜಗತ್ತಿಗೆ ಮಾದರಿಯಾದರು. ತಮ್ಮ ಬದುಕು ಬರಹದ ಮೂಲಕ ಸಾಧನೆಯ ಶಿಖರವೇರಿದ ಮಹಾತ್ಮರು. ಅವರ ನಡೆ ನುಡಿ ಆಚಾರ-ವಿಚಾರ ಧಾರೆಗಳು ಅತ್ಯಂತ ಸರಳ ಸುಂದರ ಜೀವನ ಶೈಲಿ ಬದುಕಿನ ಸಾರ್ಥಕತೆಯನ್ನು ಸಾರಿದ್ದು ಅವರಿಗೆ ಅವರೆ ಸಾಠಿ. ಜಗತ್ತಿನಲ್ಲಿ ಅವರಂತೆ ಇನ್ನೊಬ್ಬರಿಲ್ಲ ಎಂದರು.  

ಈ ಸಂದರ್ಭದಲ್ಲಿ ರಮಾ ಹಂಜಗಿ, ಜಗದೇವಿ ಕೋಳೂರು ಶ್ರೀಗಳ ಕುರಿತು ಭಕ್ತಿ ಗೀತೆಗಳ ಹಾಡಿದರು. 

ಈ ಸಂದರ್ಭದಲ್ಲಿ ದಾನೇಶ್ವರಿ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಅವಟಿ, ಮೀನಾಕ್ಷಿ ಕಣಮುಚನಾಳ, ಜಕ್ಕವ್ವ ಕಣಮುಚನಾಳ, ಶೋಭಾ ಪೂಜಾರಿ, ಶೈಲಾ ಕಾರಾಜಣಗಿ, ಪ್ರೇರಣಾ ಅವಟಿ, ಯಾಸ್ಮಿನ್ ಪಠಾಣ್, ಆರತಿ ಡೋಣೂರು, ರಾಜೇಶ್ವರಿ ಡೋಣೂರು, ಸಂಗೀತಾ ಕಮಾಟೆ, ವೈಶಾಲಿ ಪತ್ತಾರ, ಕಸ್ತೂರಿ ಪಾಟೀಲ್, ಸೌಜನ್ಯ ಲಂಬು, ಸುಮಂಗಲಾ ಅವಟಿ, ದೀಪಾ ಮಣೂರ, ಶಿವಲೀಲಾ ಕೋರವಾರ, ದೀಪಾ ಕಲ್ಯಾಣಿ, ರತ್ನಾಬಾಯಿ ಕೋಳಿ, ಶಿಕ್ಷಕ ಶರಣಪ್ಪ ಅವಟಿ, ಹಾಜಿ ಮಲಂಗ್ ಕತ್ನಳ್ಳಿ, ರಾಚಪ್ಪ ಬಂಥನಾಳ, ಗೊಲ್ಲಾಳಪ್ಪಾ ಬ್ಯಾಕೋಡ, ಯಲ್ಲಪ್ಪ ಬಿರಾದಾರ, ಸಂತೋಷ ಬಿರಾದಾರ, ಶಂಕರ ಮಣೂರ, ಸುಲೇಮಾನ್ ಸಾರವಾಡ, ಆಕಾಶ ಬಂಗಾರಿ, ಶಿವು ಪತ್ತಾರ, ಸುನೀಲ್ ಪತ್ತಾರ, ಹೇಮಂತ್ ಅವಟಿ ಮುಂತಾದವರಿದ್ದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು.