ದೇವಾಂಗ ಶಿಕ್ಷಣ ಸಂಸ್ಥೆ: ನಿರ್ದೇಶಕರಾಗಿ ಲಕ್ಷ್ಮಿಕಾಂತ್ ಹುಲಗೂರ
ರಾಣೇಬೆನ್ನೂರು 07: ಇಲ್ಲಿನ ಪ್ರತಿಷ್ಠಿತ ಶ್ರೀ ಬನಶಂಕರಿ ಸೀಡ್ಸ್ ಕಂಪನಿಯ ಸಂಸ್ಥಾಪಕ, ಸಾಮಾಜಿಕ ಚಿಂತಕ, ಲಕ್ಷ್ಮಿಕಾಂತ್ ಎಸ್. ಹುಲಗೂರ,ಅವರು, ದೇವಾಂಗ ಸಮಾಜದ ಉತ್ತರ ಕರ್ನಾಟಕದ ಏಕೈಕ ಶಿಕ್ಷಣ ಸಂಸ್ಥೆಯಾದ ಶ್ರೀ ಬನಶಂಕರಿ ಗ್ರಾಮೀಣ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮಿಕಾಂತ್ ಹುಲಗೂರ ಅವರ, ಸಾಮಾಜಿಕ, ಸಾಂಸ್ಕೃತಿಕ, ಮತ್ತು ಧಾರ್ಮಿಕ ಸೇವೆಯನ್ನು ಪರಿಗಣಿಸಿರುವ, ಆಡಳಿತ ಮಂಡಳಿಯು, ನಿರ್ದೇಶಕರಾಗಿ ಆಯ್ಕೆ ಮಾಡಿದೆ. 2024- ರಿಂದ 29ರವರೆಗೆ ಐದು ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ ಅವಧಿಯಾಗಿದ್ದು, ದೇವಾಂಗ ಸಮಾಜದ ಈ ಶಿಕ್ಷಣ ಸಂಸ್ಥೆಯು, ಗದಗ ಬೆಟಗೇರಿ, ಹುಬ್ಬಳ್ಳಿ ಸೇರಿದಂತೆ ನಾಡಿನ ಮತ್ತಿತರ ಭಾಗಗಳಲ್ಲಿ ತನ್ನ ಶಿಕ್ಷಣ ಸೇವೆ ವಿಸ್ತರಿಸಿಕೊಂಡಿದೆ. ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವ, ಲಕ್ಷ್ಮಿಕಾಂತ್ ಹಲಗೂರ ಅವರಿಗೆ, ನಗರದ ಅನೇಕ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ವರ್ತಕರು ಮತ್ತು ಕೃಷಿ ಪದವೀಧರರು, ಕೃಷಿಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.