ಬಿಜಾಪುರ 06: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ಬಿಜಾಪುರದಲ್ಲಿ ಜಂಟಿ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ನಕ್ಸಲಿಯರು ಐಇಡಿಯಿಂದ ಸ್ಫೋಟಿಸಿದ್ದಾರೆ. ಸ್ಫೋಟದಲ್ಲಿ 8 ಯೋಧರು ಮತ್ತು ಚಾಲಕ ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಎಲ್ಲಾ ಯೋಧರು ದಾಂತೇವಾಡ ಡಿಆರ್‌ಜಿಯವರು ಎಂದು ಹೇಳಲಾಗಿದೆ.
ಬಸ್ತಾರ್ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಿಜಾಪುರದ ಕುಟ್ರು-ಬೇದ್ರೆ ರಸ್ತೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟ ನಡೆಸಿದ್ದಾರೆ. ಜನವರಿ 6ರಂದು ಮಧ್ಯಾಹ್ನ 2.15ರ ಸುಮಾರಿಗೆ ಬಿಜಾಪುರ ಜಿಲ್ಲೆಯ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಮಾವೋವಾದಿಗಳು ಐಇಡಿ ಸ್ಫೋಟಿಸುವ ಮೂಲಕ ಭದ್ರತಾ ಪಡೆಯ ವಾಹನವನ್ನು ಸ್ಫೋಟಿಸಿದ್ದಾರೆ. ಸ್ಫೋಟದಲ್ಲಿ 9ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.