ಲೋಕದರ್ಶನ ವರದಿ
ಹೂವಿನಹಡಗಲಿ 22: ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಏಕ ವಚನದಲ್ಲಿ ಮಾತನಾಡಿರುವ ಸಚಿವ ಜೆ.ಸಿ.ಮಧುಸ್ವಾಮಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕುರುಬ ಸಮಾಜದವರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಸಚಿವರು ತೋರಿದ ವರ್ತನೆ, ಉದ್ದಟತನವನ್ನು ಸಮಾಜವು ತೀವ್ರವಾಗಿ ಖಂಡಿಸುತ್ತದೆ ಎಂದರು. ಕೂಡಲೇ ಸಚಿವರು ಸ್ವಾಮೀಜಿ ಬಳಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸಮಾಜದಿಂದ ತೀವ್ರವಾದ ಉಗ್ರ ಹೋರಾಟವನ್ನು ಎದುರಿಸ ಬೇಕಾಗುತ್ತದೆ ಎಂದು ಕುರುಬ ಸಂಘದ ತಾಲೂಕು ಅಧ್ಯಕ್ಷ ಬೀರಪ್ಪ, ಮುಖಂಡರಾದ ಎಂ.ಪರಮೇಶ್ವರಪ್ಪ, ಬಿ.ಹನುಮಂತಪ್ಪ, ಗಾಣದ ಶಿವಮೂತರ್ೆಪ್ಪ, ಎಸ್.ಮಲ್ಲಿಕಾಜರ್ುನ, ಕೆಪ್ರಕಾಶ, ಗುರುವಿನ ರವೀಂದ್ರ ಎಚ್ಚರಿಸಿದ್ದಾರೆ.