ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸಿದ ಮಹಾನ್ ಶರಣರು : ಸದಾಶಿವ ಮಹಾಸ್ವಾಮಿಗಳು
ರಾಣೇಬೆನ್ನೂರ: ಡಿ 31ಸಾಧಕರ ಬದುಕಿನಲ್ಲಿ ಸಾಧನೆಯ ಗೊಂದಲಗಳನ್ನು ತಮ್ಮ ತಪೋಬಲದಿಂದ ಹಾನಗಲ್ ಗುರು ಕುಮಾರ ಮಹಾ ಸ್ವಾಮಿಗಳವರು ಪರಿಹರಿಸಿದ್ದಾರೆ. ತಪೋಬಲ ಸಾತ್ವಿಕ ಚಿಂತನೆ ಇಂದಾಗಿ ಅವರು ಅಂದು ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸಿದ ಮಹಾನ್ ಶರಣರು ಅವರಾಗಿದ್ದಾರೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ನುಡಿದರು. ಅವರು, ತಾಲೂಕಿನ ಜಂಗಮ ಕ್ಷೇತ್ರ ಜೋಯಿ ಸರಹರಳ ಹಳ್ಳಿ ಗ್ರಾಮದ, ಪಾವನ ಕ್ಷೇತ್ರ ಗುರು ಶಾಂತೇಶ್ವರ ಬೆಟ್ಟದಲ್ಲಿ ಸೋಮವಾರ ಸಂಜೆ, ಶ್ರೀ ಗುರು ಶಾಂತ ಶಿವಯೋಗಿಗಳ ಜೀವಂತ ಸಮಾಧಿ ಜೀರ್ಣೋದ್ಧಾರ ಸಮಿತಿ,ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ, ಲಿಂ, ಹಾನಗಲ್ ಕುಮಾರ ಹಾಗೂ ಲಿಂ, ಗುರು ಶಾಂತ ಶಿವಯೋಗಿಗಳವರ ಸಂಸ್ಮರಣ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಜೋಯಿಸರ ಹರಳಹಳ್ಳಿ ತಮ್ಮ ಕಾಯಕ ಕ್ಷೇತ್ರವನ್ನಾಗಿಸಿದ ಕುಮಾರ ಶ್ರೀಗಳು, ಮಹಾಸಭಾ ಸ್ಥಾಪಿಸಿದ ಮಹಾನ್ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಪವಿತ್ರ ಪಾವನ ಕ್ಷೇತ್ರ, ಭವಿಷ್ಯದ ಮನುಕುಲಕ್ಜೆ ಮಾದರಿಯಾಗಿದೆ. ಎಂದು ವಿಶ್ಲೇಷಿಸಿ ಮಾತನಾಡಿದ ಶ್ರೀಗಳು, ಅವರು ಕಂಡ ಕನಸು ಪರಿಪೂರ್ಣ ನನಸಾಗಬೇಕಾದರೆ, ಇದೊಂದು ಪುಣ್ಯ ಪಾವನ ಕ್ಷೇತ್ರದ ರೂಪದಲ್ಲಿ ಸಂಪೂರ್ಣ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಾಗಿದೆ ಎಂದರು. ಇಂದಿನ ದಿನಮಾನಗಳಲ್ಲಿ ಪಡೆದ ಜ್ಞಾನವು ಸಮಾಜಕ್ಕೆ ಬಳಕೆಯಾಗಬೇಕು ವಿದ್ಯೆ ಜ್ಞಾನ ನೀಡುವಂತಾಗಬೇಕು ಯುವ ಸಮುದಾಯಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರ ಪರಿಚಯಿಸುವ ಕಾರ್ಯ ನಡೆಯಬೇಕಾಗಿದೆ. ವೀರಶೈವ ಆಚಾರ ವಿಚಾರ ಪರಂಪರೆಯಲ್ಲಿ ಅಘಾದವಾದ ಅದಮ್ಯ ಜ್ಞಾನವಿದೆ ಎಂದರು. ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ , ಮಾತನಾಡಿದ ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯರು ಈ ಪಾವನ ಜನ್ಮ ಭೂಮಿಯನ್ನು ತಪೋ ಭೂಮಿಯನ್ನಾಗಿಸಿದ ಮಹಾಮಹಿಮ ಹಾನಗಲ್ಲ ಕುಮಾರ ಸ್ವಾಮಿಗಳವರು.ಅಂದು ಅವರು, ಅಖಿಲ ಭಾರತ ಶಿವಾನುಭವ ಸಂಸ್ಥೆ ಪ್ರಾರಂಭಿಸದಿದ್ದರೆ?. ಇಂದು ಸಮಾಜ ಏನಾಗುತ್ತಿತ್ತು. ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು, ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು. ಲಿಂ,ಗುರುಶಾಂತ ಶಿವಯೋಗಿಗಳವರ ಜೀವಂತ ಸಮಾಧಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಿ. ಹೆಚ್. ಮುದ್ದಪ್ಪಳ್ಳವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶರಣರ ಜೀವನ ಮತ್ತು ಸಾಧನೆ ಕುರಿತು ಬೆಳಗಾವಿ ಕಾರಂಜಿ ಮಠದ ಶ್ರೀ ಶಿವಯೋಗಿ ದೇವರು, ಹಾಗೂ ಜಿಲ್ಲಾ ಕ. ಸಾ.ಪ ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ದತ್ತಿಧಾನಿಗಳಾದ ಶಂಕರಗೌಡ ಚೌಡಪ್ಪಳ್ಳವರ, ಚನ್ನಬಸಮ್ಮ ಹೊಟ್ಟಿ ಗೌಡರ, ಜಿ.ಜಿ. ಹೊಟ್ಟಿ ಗೌಡರ, ಜಿಲ್ಲಾ ಮಾಜಿ ಅಧ್ಯಕ್ಷ ಡಾ, ಕೆ. ಎಚ್. ಮುಕ್ಕಣ್ಣನವರ, ತಾಲೂಕ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಡಾ, ಮಂಜುನಾಥ ಮುದ್ದೇಮ್ಮನವರ, ವ್ಹಿ. ಎಸ್. ಬಡಿಗೇರ, ಕುಮಾರ್ ಶಂಕ್ರಿಕೊಪ್ಪ, ಬಸನಗೌಡ ಉಮ್ಮನಗೌಡ್ರ, ಶ್ರೀಧರ ಅಗಸಿಬಾಗಿಲ, ಎಸ್. ಎಂ.ಪಾಟೀಲ್, ಸೋಮಶೇಖರ ಪಾಟೀಲ, ಪ್ರಕಾಶ ಉಜ್ಜಮ್ಮನವರ ಸುರೇಶ ಮಾಗನೂರ, ಜಿ.ಎಸ್. ಮುದ್ದಪ್ಪಳ್ಳವರ, ಹೊನ್ನಪ್ಪ ತಳವಾರ, ಬಸವರಾಜ ಚೌಡಪ್ಪಳ್ಳವರ, ರುದ್ರ್ಪ ಮಾರೇರ, ಸೇರಿದಂತೆ, ಕ. ಸಾ. ಪ. ಪದಾಧಿಕಾರಿಗಳು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ನಂತರ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವ ನೆರವೇರಿಸಲಾಯಿತು. ನವ್ಯ ಮ. ಸಾರದ ಪ್ರಾರ್ಥಿಸಿದರು. ಶ್ರೀ ಮಠದ ಭಜನಾ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.ಡಾ, ಕಾಂತೇಶ ಗೋಡಿಹಾಳ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್ ಹೆಚ್ ಪಾಟೀಲ್ ನಿರೂಪಿಸಿ, ಗ್ರಾಮ ಘಟಕದ ಅಧ್ಯಕ್ಷ ಸಿದ್ದು ಹೊರಕೇರಿ ವಂದಿಸಿದರು..