ಯೋಗ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ನಿರಂಜನ್

ಬೆಳಗಾವಿ 26: ಯೋಗ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ನಿರಂಜನ್ ಅವರು ಹೇಳಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೇಣು ಗ್ರಾಮ ಸಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಇವರ ಸಹಯೋಗದೊಂದಿಗೆ ಸಪ್ತಸ್ವರದವರು ಆಯೋಜಿಸಿದ ಐದು ದಿನದ ಸಂಗೀತ ಕಾರ್ಯಗಾರದ ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ಅವರು ಸಂಗೀತ ಆತ್ಮವನ್ನು ಶುದ್ಧ ಮಾಡಿ ಮನಸ್ಸನ್ನು ಶಾಂತವಾಗಿಡುತ್ತದೆ ಎಂದರು. ಸಂಗೀತವು ವೈದ್ಯಕೀಯ ಶಕ್ತಿಯನ್ನು ಹೊಂದಿದೆ ಕೆಲವು ರಾಗಗಳು ಕೆಲವು ರೋಗಗಳಿಗೆ ಮದ್ದಾಗಿವೆ ಸಂಗೀತ ಚಿಕಿತ್ಸೆ ಕೂಡ ಈಗ ಪ್ರಚಲಿತಕ್ಕೆ ಬರಬೇಕು ಎಂದು ಅವರು ಹೇಳಿದರು.  

ಶಿಬಿರದ ಪ್ರಯೋಜನವನ್ನು ಸುಮಾರು 50 ವಿದ್ಯಾರ್ಥಿಗಳು ಪಡೆದರು. ಈ ಸಂದರ್ಭದಲ್ಲಿ ಸಪ್ತಸ್ವರ ಸಂಗೀತರಿ ವಿದ್ಯಾಲಯದ ಮುಖ್ಯಸ್ಥರಾದ ನಿರ್ಮಲಾ ಪ್ರಕಾಶ್ ಅವರು ವೇಣು ಗ್ರಾಮ ಸಂಸ್ಕೃತಿಕ ಪ್ರತಿಷ್ಠಾನದ ನಾರಾಯಣ ಗಣಾಚಾರಿ ಮತ್ತು ಪ್ರಮೋದ್ ಶೇಟ್ ಉಪಸ್ಥಿತರಿದ್ದರು. ತಬಲಾ ಸಾಥ್ ಜಿತೇಂದ್ರ ಸಾಬಣ್ಣವರ ನೀಡಿದರು. ಐದು ದಿನದ ಸಂಗೀತ ಕಾರ್ಯಗಾರವನ್ನು ಸೃಷ್ಟಿ ಬಾಗೇವಾಡಿ ಮತ್ತು ಪೂರ್ವಿ ರಾಜಪರೋಹಿತ್ ನಡೆಸಿಕೊಟ್ಟರು.