ಕಲಾವಿದರಿಗೆ ಪ್ರೇರಣಾದಾಯಕವಾದ ತಾಣ: ಜೆಎಸ್‌ಎಸ್ ಹಾಲಭಾವಿ ಸ್ಕೂಲ ಆಫ್ ಆರ್ಟ

ಧಾರವಾಡ 29: ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ 2024ರ ಜೂನ್ 26 ರಂದು ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರಿನ ಅಂಗ ಸಂಸ್ಥೆಯಾದ ಜೆಎಸ್‌ಎಸ್ ಹಾಲಭಾವಿ ಸ್ಕೂಲ ಆಫ್ ಆರ್ಟನಲ್ಲಿ ಮ್ಯೂರಲ್ ಶಿಲ್ಪಗಳ ಪ್ರದರ್ಶನ, ಸನ್ಮಾನ ಹಾಗೂ ಪ್ರೊ. ಅಶೋಕ ಟಿ. ಅಕ್ಕಿ ದತ್ತಿನಿಧಿ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಠಿತ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರು ಗಾಯತ್ರಿ ಎಂ. ಗೌಡರ್ ಹಾಗೂ ಉಂಈಘಿ-2024 ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಕು. ಕಾರ್ತಿಕ ಕಂಬಾರ ಅವರುಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು ಧಾರವಾಡ ವಿಭಾಗದ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಿತು.   

ಪ್ರಾಸ್ತಾವಿಕವಾಗಿ ಪರಿಚಯಿಸಿದ ಡಾ. ಬಿ.ಎಂ. ಪಾಟೀಲ, ಪ್ರಾಚಾರ್ಯರು 90 ವರ್ಷಗಳನ್ನು ಪೂರೈಸಿದ ಕಲಾಶಾಲೆಗೆ 90 ವರ್ಷದ ನಾಡೋಜ ವಿ.ಟಿ. ಕಾಳೆಯವರನ್ನು ಸನ್ಮಾನ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದು ಓಚಿತ್ಯಪೂರ್ಣವಾಗಿದೆ ಎನ್ನುತ್ತಾ, ಗಾಯತ್ರಿ ಗೌಡರ್ ಅವರು ಸಂವೇದನಾಶೀಲ ಮಹಿಳಾ ಕಲಾವಿದರೆಂದೇ ಗುರುತಿಸಿಕೊಂಡಿದ್ದು, ಕಲಾವಿದರಾಗಿ, ಕಲಾಪ್ರಾಧ್ಯಾಪಕರಾಗಿ, ಆರು ದಶಕಗಳ ಅವರ ಅನುಭವ ಕಲೆಯ ನೋಟದ ಸಂವೇದನೆ ಮೂಲಕ ಬದುಕನ್ನು ರೂಪಿಸಿಕೊಂಡಿರುವರು. ಶಿಸ್ತು, ಸೌಜನ್ಯ, ಸಂಯಮ ಅವರ ಯಶಸ್ವಿಯ ದೊಡ್ಡ ಶಕ್ತಿ. ಕಲಾರಚನೆಯ ಪ್ರಯೋಗಗಳಲ್ಲಿ ತೊಡಗಿರುವ ಇವರು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವರು. 2008ರ ಹೊತ್ತಿಗೆ ಹಾಲಭಾವಿ ಕಲಾಶಾಲೆ ಕಷ್ಟದ ದಿನಗಳನ್ನು ಎದುರಿಸುತ್ತಿರುವಾಗ ಪ್ರಾಚಾರ್ಯರಾಗಿ ಇವರು ಈ ಕಲಾಶಾಲೆಯನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಆಧೀನಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇವರು ಸ್ಕೂಲ ಆಫ್ ಆರ್ಟದಲ್ಲಿ 18 ವರ್ಷ ಉಪನ್ಯಾಸಕರಾಗಿ, 09 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವರು. ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರುರವರ ಆದೇಶದನ್ವಯ ಧಾರವಾಡ ವಿಭಾಗದ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳು ಹಾಗೂ ಮುಖ್ಯಸ್ಥರು ಮತ್ತು ಸಿಬ್ಬಂದಿವರ್ಗದವರು ಸೇರಿಕೊಂಡು ಸನ್ಮಾನಿಸಲಾಯಿತು ಎಂದರು.   

ಉಪನ್ಯಾಸಕ ಯುವರಾಜ ಆರ್‌.ಎಸ್‌. ಅವರು ನಮ್ಮ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ಕಂಬಾರ ಅವರನ್ನು ಕುರಿತು ಪರಿಚಯಿಸುತ್ತಾ “ಕಲೆಯ ಮೇಲಿನ ಹುಚ್ಚು ಮತ್ತು ಛಲ ಇವರನ್ನು ಉತ್ತಮ ಕಲಾವಿದ್ಯಾರ್ಥಿಯಾಗಿ ರೂಪಿಸಿದೆ. 2022-23ನೇ ಶೈಕ್ಷಣಿಕ ಸಾಲಿನ ಪ್ರೊ. ಅಶೋಕ ಅಕ್ಕಿ ದತ್ತಿನಿಧಿಗೆ ಭಾಜನರಾದ ಇವರು 2024ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಬೆಂಗಳೂರಿನ ಉಂಈಘಿ-2024ರ ಕ್ಲೇ ಮಾಡಲಿಂಗ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ನಮಗೂ ಮತ್ತು ನಮ್ಮ ಸಂಸ್ಥೆಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.  

ಗದುಗಿನ ವಿಜಯ ಕಲಾಮಂದಿರದ ವಿಶ್ರಾಂತ ಪ್ರಾಚಾರ್ಯರು ಮತ್ತು ನಾಡಿನ ಹಿರಿಯ ಕಲಾವಿದರಾದ ಪ್ರೊ. ಅಶೋಕ ಅಕ್ಕಿಯವರು ಮ್ಯೂರಲ್ ಶಿಲ್ಪಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ “ಹಾಲಭಾವಿ ಕಲಾಮಹಾವಿದ್ಯಾಲಯದ ಆವರಣವು ತುಂಬಾ ಸುಂದರವಾಗಿದೆ. ಕಲಾವಿದರಿಗೆ ಅತ್ಯಂತ ಪ್ರೇರಣಾದಾಯಕವಾದ ಸುಂದರ ತಾಣವಾಗಿದೆ. ಲಲಿತಕಲಾ ಕ್ಷೇತ್ರಗಳ ಬೆಳವಣಿಗೆ ಇಂದಿನ ದಿನಗಳಲ್ಲಿ ಅತೀ ಮುಖ್ಯವಾಗಿ ಯುವ ಪೀಳಿಗೆಗೆ ಸಾಗಬೇಕಾಗಿದೆ ಎಂದರು. ಈ ಪ್ರದರ್ಶನದಲ್ಲಿಯ ಕಲಾಕೃತಿಗಳು ಒಂದಕ್ಕಿಂತ ಒಂದು ಸೃಜನಾತ್ಮಕವಾಗಿ ಮೂಡಿಬಂದಿವೆ. ಕಲಾಕೃತಿಗಳ ರೂಪ, ವರ್ಣಸಂಯೋಜನೆ, ಜಾನಪದೀಯ ಅಂಶಗಳಿಂದ ಎಲ್ಲರ ಗಮನವನ್ನು ಶಿಲ್ಪಗಳು ತನ್ನತ್ತ ಸೆಳೆಯುತ್ತಿವೆ. ರಚಿಸಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಅಭಿನಂದನೆಗಳು ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಡೋಜ ವಿ.ಟಿ. ಕಾಳೆ ಅವರು ಮಾತನಾಡಿ ಆಧುನಿಕ ಸಂದರ್ಭದಲ್ಲಿ ಕಲಾಶಿಕ್ಷಣ ಮತ್ತು ಕಲಾಕೃತಿಗಳ ಒಳನೋಟಗಳನ್ನು ಅರ್ಥೈಸಿಕೊಳ್ಳುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಕಲಾವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಾಕೃತಿಗಳನ್ನು ಅಧ್ಯಯನ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲ ಕಲಾಶಾಲೆ ಹಾಲಭಾವಿ ಸ್ಕೂಲ ಆಫ್ ಆರ್ಟ ಸಂಸ್ಥೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಗಾಯತ್ರಿ ಗೌಡರ್ ಅವರು ಈ ಕಲಾಶಾಲೆಯಲ್ಲಿ ವಿದ್ಯಾರ್ಥಿಯಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದು, ಈ ನಾಡು ಕಂಡ ಅಪ್ರತಿಮ ಮಹಿಳಾ ಕಲಾವಿದೆ ಇವರಿಗೆ ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ಬಂದಿರುವುದು ಅಭಿನಂದನೀಯ. ಇವರನ್ನು ಜೆಎಸ್‌ಎಸ್ ಸಂಸ್ಥೆ ಸನ್ಮಾನಿಸುತ್ತಿರುವುದು ಸಂತೋಷದಾಯಕ ಎಂದರು.  

ಅಧ್ಯಕ್ಷತೆ ವಹಿಸಿರುವ ಎಸ್‌.ಜಿ. ಬಿರಾದಾರ, ಆಡಳಿತಾಧಿಕಾರಿಗಳು ಮಾತನಾಡಿ ಅತ್ಯಂತ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ಜರುಗಿದೆ. ಈ ಹಾಲಭಾವಿ ಸ್ಕೂಲ ಆಫ್ ಆರ್ಟ 90 ವರ್ಷಗಳನ್ನು ಪೂರೈಸಿದೆ. ಈ ಸಂಸ್ಥೆಯು ಇನ್ನೂ ಹೆಚ್ಚಿಗೆ ಬೆಳೆಯಬೇಕು ಎಂದರು.  ಅಂತಿಮವಾಗಿ ಪ್ರಾಚಾರ್ಯರಾದ ಡಾ. ಬಿ.ಎಂ. ಪಾಟೀಲರು ಆಗಮಿಸಿದ ಗಣ್ಯಮಾನ್ಯರನ್ನು ಕಲಾಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ಮತ್ತು ಉಪನ್ಯಾಸಕರುಗಳನ್ನು ಹಾಗೂ ನಮ್ಮ ಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಹಕಾರವನ್ನು ಹಾಗೂ ಸಿಬ್ಬಂದಿಯವರನ್ನು ವಂದಿಸಿದರು ಹಾಗೆಯೇ ಜೆಎಸ್‌ಎಸ್ ವನ್ನೂ ನೆನೆದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜಶೇಖರ​‍್ಪಗೌಡ, ಪ್ರಾಚಾರ್ಯರು, ಜೆಎಸ್‌ಎಸ್ ವಿಜ್ಞಾನ ಪಿ.ಯು. ಕಾಲೇಜ, ಧಾರವಾಡ ವರು ನಿರ್ವಹಿಸಿದರು.