ನುಡಿದಂತೆ ನಡೆದುಕೊಂಡ DEAR ಪೊರ್ಕಿ ಚಿತ್ರತಂಡ

ಭರವಸೆ ಮೂಡಿಸಿ ಸೋತ ಸಿನಿಮಾಗಳ ಮದ್ಯೆ, ಗೆದ್ದ ಕೆಲ ಬೆರಳೆಣಿಕೆಯ ಸಿನಿಮಾಗಳ ಸಾಲಿಗೆ ಸೇರಿದ ’DEAR  ಪೊರ್ಕಿ ’ಕಿರುಚಿತ್ರ.  ಇದೆ ಜೂನ್ 25 ಕ್ಕೆ ಂ2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆದಂತಹ ಆಇಂಖ ಪೊರ್ಕಿ ಚಿತ್ರವು ಎಲ್ಲಡೆ ಸದ್ದು ಮಾಡುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಚಿತ್ರದ ನಾಯಕ ಹಾಗೂ ಚಿತ್ರದ ನಿರ್ದೇಶಕರು ಚಿತ್ರದ ಬಿಡುಗಡೆಗೂ ಮೊದಲು ಹೇಳಿದ ಮಾತಿನಂತೆ ನಡೆದುಕೊಂಡಿದ್ದಾರೆ.       

ಅದೆ ರೀತಿ ಪ್ರೇಕ್ಷಕರು ಅವರ ಮೇಲೆ ಇಟ್ಟ ನಂಬಿಕೆಯನ್ನು ಕೂಡಾ ಉಳಿಸಿಕೊಂಡಿದ್ದಾರೆ.ಚಿತ್ರದಲ್ಲಿ ಕ್ವಾಲಿಟಿ ಹಾಗೂ ಒಂದೊಳ್ಳೆ ಪ್ರೇಮ ಕಥೆಯ ಉತ್ತಮ ಕಂಟೆಂಟ್ ಇದ್ದು. ಯಾವುದೆ ದೊಡ್ಡ ಸಿನಿಮಾಗೂ ಕಡಿಮೆ ಇಲ್ಲದಂತೆ ಯೂಟ್ಯೂಬನಲ್ಲಿ ಉತ್ತಮ ಪ್ರಶಂಸೆಯನ್ನು ಪಡೆದುಕೊಳ್ಳುತ್ತಾ ಇನ್ನೂ ಹೆಚ್ಚು ಹೆಚ್ಚು ಕನ್ನಡದ ಮನಸ್ಸುಗಳನ್ನು ಆಕರ್ಷಸುತ್ತಿದೆ. ಸಿನಿಮಾಗಳೆ ಆಗಲಿ ಅಥವಾ ಕಿರುಚಿತ್ರಗಳೇ ಆಗಲಿ ಕನ್ನಡದಲ್ಲಿಒಳ್ಳೆಯ ಕಂಟೆಂಟ್ ಸಿನಿಮಾಗಳು ಬರಲಿ, ಹೀಗೆ ಕನ್ನಡ ಭಾಷೆಯನ್ನು ಬೆಳಸಲಿ, ಕನ್ನಡದ ಮನಸ್ಸುಗಳನ್ನು ಖುಷಿ ಪಡಿಸಲಿ,ಅದೆ ರೀತಿ ನಾವು ಕೂಡಾ ಹೊಸಬರನ್ನು ಸ್ವಾಗತಿಸುತ್ತ,ಹಳಬರನ್ನುಬೆಂಬಲಿಸುತ್ತ ಕನ್ನಡದ ಸಿನಿಮಾಗಳನ್ನು ಬೆಂಬಲಿಸೋಣ.    

ಕೊನೆಯದಾಗಿ ನಮ್ಮ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರದ ನಾಯಕ ಅಜಿತ ರಾವ್ ಅವರು ’ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ಚಿತ್ರಕ್ಕೆ ಬೆಂಬಲಿಸಿದ ಎಲ್ಲರಿಗೂ ಹಾಗೂ ಚಿತ್ರದಲ್ಲಿ ನಟಿಸಿದ ಎಲ್ಲಾ ಸಹ ಕಲಾವಿದರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

DEAR ಪೊರ್ಕಿ..ಇದೆ ಜೂನ್ 25 ರಂದು A2 ಮೂವೀಸ್ ಚಾನೆಲನಲ್ಲಿ ಬಿಡುಗಡೆ ಆದಂತಹ ನಮ್ಮ ಬೆಳಗಾವಿ ಜಿಲ್ಲೆಯ ಹುಡುಗು ಅಭಿನಯಿಸಿದ ಹಾಗೂ ನಮ್ಮ ಬೆಳಗಾವಿಯ ನೀರ್ದೇಶಕರೆ ನಿರ್ದೇಶಸಿದ "DEAR ಪೊರ್ಕಿ" ಚಿತ್ರವು ಯುಟ್ಯೂಬನಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮುನ್ನುಗ್ಗುತಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಬಿಡುಗಡೆಗೂ ಮೊದಲೆ ಚಿತ್ರತಂಡವು ನೀಡಿದ ಬರವಸೆಯನ್ನು, ಚಿತ್ರದ ಬಿಡುಗಡೆಯ ನಂತರವೂ ಆಡಿದ ಮಾತುಗಳನ್ನು ಉಳಿಸಿಕೊಂಡಿದೆ.         

ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ.ಅದೆ ರೀತಿ ಒಂದೊಳ್ಳೆ ಪ್ರೇಮಕಥಾ ಹಂದರವು ಕೂಡಾವಿದ್ದು, ನೋಡುಗರನ್ನ ರಂಜಿಸುತ್ತಿದೆ. ಒಬ್ಬ ವ್ಯಕ್ತಿ ಪ್ರೀತಿಯನ್ನು ಕಳೆದಕೊಂಡು ಕೊನೆಗೆ ಮನೆಯವರಿಗೂ ಬೇಡವಾದಾಗ ಇನ್ನೇನು ಸೋತೆ ಅನ್ನೋ ಸಮಯದಲ್ಲಿ ಆತ ಮತ್ತೆ ಯಾವ ತರಾ ತನ್ನ ಗುರಿಗಳನ್ನು ಸಾಧಿಸುತ್ತ, ಜೀವನದಲ್ಲಿ ಮೇಲಕ್ಕೆ ಎದ್ದು ಬರ್ತಾನೆ ಅನ್ನೋದನ್ನ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ ನಿರ್ದೇಶಕರು.   ಹಾಗೆ ನಮ್ಮ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರದ ನಾಯಕ ನಟ ಅಜಿತ್ ರಾವ್ ಅವರು ನಮ್ಮ ನಮ್ಮ ಚಿತ್ರದ ಯಶಸ್ಸಿಗೆ ಕಾರಣದಂತ ಎಲ್ಲರಿಗೂ, ಮತ್ತು ಚಿತ್ರಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ಹಾಗೂ ನನ್ನ ಜೊತೆ ಚಿತ್ರದಲ್ಲಿ ನಟಿಸಿದ ನನ್ನ ಎಲ್ಲಾ ಸಹ ಕಲಾವಿದರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಾ, ಹೀಗೆ ಹೊಸ ಹೊಸ  ಕಲಾವಿದರನ್ನ ಪ್ರೋತ್ಸಾಹಿಸಿ ಹರಿಸಿ, ಹಾರೈಸಿ, ಕನ್ನಡದ ಸಿನಿಮಾಗಳನ್ನ ಪ್ರೋತ್ಸಾಹಿಸಿ, ಕನ್ನಡದಾ ಸಿನಿಮಾ ಗಳನ್ನ ಚಿತ್ರ ಮಂದಿರಗಳಲ್ಲೇ ವೀಕ್ಷಿಸಿ, ಕನ್ನಡವನ್ನ ಬೆಳಿಸಿ ಎಂದು ಚಿತ್ರದ ನಾಯಕ ಅಜಿತ್ ರಾವ್ ಅವರು ಮಾಧ್ಯಮದ ಮೂಲಕ ಕೇಳಿಕೊಂಡರು.