ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಗದಗ 16: ಜಿಲ್ಲಾ ಆಡಳಿತ ಗದಗ, ಜಿಲ್ಲಾ ಪಂಚಾಯತ್, ಗದಗ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ಕಾರಾಗೃಹ, ಹಾಗೂ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ-2019  ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಗದಗ  ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 16ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ-2019 ಕಾರ್ಯಕ್ರಮವನ್ನು ಅಂಜುಮನ್-ಎ-ಇಸ್ಲಾಂ ಪಾಲಿಟೆಕ್ನಿಕ್ ಕಾಲೇಜ, ಮಲ್ಲಸಮುದ್ರ ಗದಗ,ದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ಉದ್ಘಾಟಕರಾಗಿ ಶಕುಂತಲಾ ಮೂಲಿಮನಿ, ಅಧ್ಯಕ್ಷರು (ಪ್ರಭಾರ), ಜಿಲ್ಲಾ ಪಂಚಾಯತ್, ಗದಗ ರವರು ಆಗಮಿಸಿದ್ದರು, ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಿ.ಎಮ್. ಕೊಪ್ಪಳ. ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆ ಮಲ್ಲಸಮುದ್ರ, ಗದಗರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ವ್ಹಿ ಸಂಕನೂರ ಮಾನ್ಯ ಶಾಸಕರು, ವಿಧಾನ ಪರಿಷತ್, ಡಾ. ಆನಂದ.ಕೆ. ಮಾನ್ಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಜಿ.ಪಂ. ಗದಗ ಹಾಗೂ ಡಾ. ವಿರುಪಾಕ್ಷರಡ್ಡಿ ಮಾದಿನೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ರವರು ಭಾಗವಹಿಸಿದ್ದರು. ಉದ್ಘಾಟಕರಾದ ಶಕುಂತಲಾ ಮೂಲಿಮನಿ, ಮಾನ್ಯ ಅದ್ಯಕ್ಷರು (ಪ್ರಭಾರ), ಜಿಲ್ಲಾ ಪಂಚಾಯತ್, ಗದಗ ಇವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾಥರ್ಿಗಳು, ಸೋಲು ಗೆಲುವಿನ ಮೆಟ್ಟಿಲು ಎಂದು ತಿಳಿದು ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಕಲೆಯನ್ನು ಅರಿತು ಜೀವನವನ್ನು ಸುಂದರಗೊಳಿಸಿಕೊಳ್ಳಬೆಕೆಂದು ಕರೆ ನೀಡಿದರು ಹಾಗೂ ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಒಳ್ಳೆ ಜೀವನ ರೂಪಿಸಿಕೊಳ್ಳಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಎಸ್.ವ್ಹಿ ಸಂಕನೂರ ಮಾನ್ಯ ಶಾಸಕರು, ವಿಧಾನ ಪರಿಷತ್, ಇವರು ಮಾತನಾಡಿ ಇತ್ತಿಚ್ಚಿನ ದಿನಗಳಲ್ಲಿ ಯುವಜನತೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ ನಾವು ಜನಿಸಿರುವದು ಎನಾದರು ಸಾಧನೆ ಮಾಡಲಿಕ್ಕೆ, ಸಾಯುವದಕ್ಕೆ ಅಲ್ಲ ಆದ್ದರಿಂದ ಯುವಕರು ಆತ್ಮ ಹತ್ಯೆ ಮಾಡಿಕೊಳ್ಳಬಾರದು ಎಂದು ತಿಳಿಸಿ ಮತ್ತು ಪಾಲಕರು ವಿದ್ಯಾಥರ್ಿಗಳ ಮೇಲೆ ಒತ್ತಡ ಹೇರದೆ ಅವರಿಗೆ ದಾರಿ ದೀಪವಾಗಿ ಅವರ ಆಸಕ್ತಿ ಮೇರೆಗೆ ಅವರನ್ನು ಬೆಳೆಸಿ. ಯುವಜನತೆ  ದೇಶದ ಸಂಪತ್ತಾಗಿದ್ದು ಆತ್ಮಹತ್ಯೆಯನ್ನು ತಡೆಗಟ್ಟಿ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ  ಡಾ. ಆನಂಕ ಕೆ. ಮಾನ್ಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಜಿ.ಪಂ. ಗದಗರವರು ಮಾತನಾಡಿ ಒತ್ತಡದಿಂದ ಹೆಚ್ಚು ಆತ್ಮಹತ್ಯೆಗಳು ಆಗುತ್ತಿದ್ದು ಕಾರಣ ಪಠ್ಯಕ್ರಮದಲ್ಲಿ ಒತ್ತಡ ನಿಭಾಯಿಸುವ ಕಲೆಯನ್ನು ಕಲಿಸುವ ಪಠ್ಯ ಇರುವದು ಅವಶ್ಯಕ ಎಂದರು ಹಾಗೂ ಇಂದಿನ ದಿನಮಾನದಲ್ಲಿ ಬುದ್ದಿ ಮತ್ಯೆ (ಕಿ) ಗಿಂತ ಭಾವನಾತ್ಮಕ ಮತ್ಯೆ (ಇಕಿ)   ಇರುವದು ಅವಶ್ಯಕ ಎಂದರು. ಯುವಜನತೆ ಅಂತಜರ್ಾಲದ ಉಪಯೋಗವನ್ನು ಒಳ್ಳೆಯದಕ್ಕೆ ಉಪಯೋಗಿಸಿ ಎಂದರು. ಯುವಜನತೆ ತಮ್ಮ ಕರ್ತವ್ಯವನ್ನು ಅರಿತು ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು. 

ಉಪನ್ಯಾಸದಲ್ಲಿ  ಡಾ. ಸೋಮಶೇಖರ ಬಿಜ್ಜಳ ಇವರು "ಆತ್ಮ ಹತ್ಯೆ ಮಹಾಪಾಪವೆಂದು ತಿಳಿಸಿ ಆತ್ಮ ಹತ್ಯೆ ಮಾಡಿಕೊಳ್ಳುವ ಕಾರಣಗಳು ಆತ್ಮ ಹತ್ಯೆ ವಿಚಾರಗಳಿಂದ ಹೊರಬರುವ ಕ್ರಮಗಳ ಕುರಿತು ವಿವರವಾಗಿ  ಉಪನ್ಯಾಸ ನೀಡಿದರು. ಡಾ. ವಿರುಪಾಕ್ಷರಡ್ಡಿ ಮಾದಿನೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರು ಸಭೆಗೆ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿ ಆತ್ಮ ಹತ್ಯೆ ಎಂದರೇನು, ಕಾರಣಗಳು, ಹಾಗೂ ಆತ್ಮ ಹತ್ಯೆಗೆ ಸಂಭಂಧಿಸಿದ ಅಂಕಿ ಅಂಶಗಳನ್ನು ತಿಳಿಸಿದರು. 

ಕಾರ್ಯಕ್ರಮದಲ್ಲಿ ಡಾ. ಎಸ್.ಎಸ್. ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು. ಗದಗ ತಾಲೂಕ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಎಸ್.ಪಿ.ಕಾಟೇವಾಲೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಕಾಲೇಜಿನ ಸಿಬ್ಬಂದಿವರ್ಗ ಹಾಗೂ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಬಸವರಾಜ ಲಾಲಗಟ್ಟಿ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಎಚ್. ಸುರೇಶ (ಜಿಲ್ಲಾ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ)ಇವರು ನೆರವೇರಿಸಿದರು, ಸ್ವಾಗತ ಗೀತೆಯನ್ನು ಕಾಲೇಜಿನ ಪ್ರೊ. ನೀಲಾಂಬಿಕಾ ರವರು ಹಾಡಿದರು.