ಸಿರಿ ಸಾಗರ ಹೋಟೆಲ್‌ನ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ: ಚಿದಾನಂದ ಸವದಿ

All facility under one roof at Siri Sagar Hotel: Chidananda Savadi

ಸಿರಿ ಸಾಗರ ಹೋಟೆಲ್‌ನ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ: ಚಿದಾನಂದ ಸವದಿ 

ಅಥಣಿ 06: ಅಥಣಿಯ ಇತಿಹಾಸದ ಮೊದಲ ಬಾರಿಗೆ ಪ್ರಕಾಶ ಶೆಟ್ಟಿ ಮಾಲೀಕತ್ವದ ಅಥಣಿ ಗ್ರಾಹಕರ ಹಿತಕ್ಕಾಗಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಈ ಸಿರಿ ಸಾಗರ ರೆಸ್ಟೋರೆಂಟ್ ನಲ್ಲಿದೆ. ಅಥಣಿಯ ಸಮಸ್ತ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯುವ ಮುಖಂಡರಾದ ಚಿದಾನಂದ ಸವದಿ ಹೇಳಿದರು.  

ಅವರು  ಪಟ್ಟಣದ ಗಸ್ತಿ ಆರ್ಕೆಡ್, ಹಳ್ಯಾಳ ರೋಡ್ ಮರುಳ ಶಂಕರ ದೇವರ ವೃತ್ತದ ಹತ್ತಿರ ಭವ್ಯವಾಗಿ ನಿರ್ಮಿಸಲಾದ ಸಿರಿ ಸಾಗರ ಹೋಟೆಲ್ ಉದ್ಘಾಟಿಸಿ ಮಾತನಾಡುತ್ತಿದ್ದರು.  ಅಥಣಿಯ ಗ್ರಾಹಕರ ಹಿತಕ್ಕಾಗಿ ಗ್ರಾಹಕರ ಬೇಡಿಕೆಗೆ ತಕ್ಕಹಾಗೆ ಪ್ರಕಾಶ್ ಶೆಟ್ಟಿ ಮಾಲೀಕತ್ವದ ಸಿರಿ ಸಾಗರ್ ಹೋಟೆಲ್ ಜೊತೆಗೆ ಸುಸಜ್ಜಿತವಾದ ಸಭೆ ಸಮಾರಂಭ ಗಳನ್ನು ಒಳಗೊಂಡಂತೆ ಮೀಟಿಂಗ್ ಹಾಲ್ ಹಾಗೂ ಸುಸಜ್ಜಿತವಾದ ಲಾಡ್ಜ್‌ ಜೊತೆಗೆ ಲಿಫ್ಟ್‌ ವ್ಯವಸ್ಥೆಯೂ ಕೂಡ ಒಳಗೊಂಡಿದೆ. ವಾಹನಗಳ ಪಾರ್ಕಿಂಗ್ ಸೌಲಭ್ಯವು ಕೂಡ ಹೊಂದಿದೆ ಇಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿದ ಅಥಣಿಯಲ್ಲಿ ಏಕೈಕ ಹೋಟೆಲ್ ಸಿರಿಸಾಗರ ಹೋಟೆಲ್ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅಥಣಿಯ ಸುತ್ತಮುತ್ತಲಿನ ಗ್ರಾಹಕರು ಹಿಂದೆ ಭೇಟಿ ನೀಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.  

    ಕಾರ್ಯಕ್ರಮದಲ್ಲಿ  ತಿಕೋಟಾ ವಿರಕ್ತಮಠ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಕಾಶ ಶೇಟ್ಟಿ, ವಿನೋದ ಶೆಟ್ಟಿ , ಶೇಕರ ಕನಕರಡ್ಡಿ, ಸುರೇಶ ಶೆಟ್ಟಿ, ಅಶೋಕ ಶಟ್ಟಿ, ಸತೀಶ ಶೆಟ್ಟಿ, ವಿಜಯ ಶೆಟ್ಟಿ, ಆರ್‌.ಎಮ್‌.ಡಾಂಗೆ, ಗಜಾನನ ಮಂಗಸೂಳಿ, ಗೀರಿಶ ಬುಟಾಳಿ, ರವಿ ಪೂಜಾರಿ, ರಾಜಶೇಖರ ಗುಡೋಡಗಿ, ದತ್ತಾ ವಾಸ್ಟರ, ರವಿ ಕೋಟಿ, ವಿನೋದ ಸಾವಡಕರ, ಕುಮಾರ ಗೋಟ್ಟಿ, ರವಿ ಬಡಕಂಬಿ, ಧರೆಪ್ಪ ಟಕ್ಕಣ್ಣವರ, ಶಿವಾನಂದ ಸಂಕ್ರಟ್ಟಿ, ವಿನಯ ಕರಬಸಪ್ಪಗೋಳ, ಸಂಕೋನಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬೀರ​‍್ಪ ಕಡಗಂಚಿ ಹಾಗೂ ಶೆಟ್ಟಿ ಕುಟುಂಬಸ್ಥರು, ಹೋಟೆಲ್ ಸಿಬ್ಬಂದಿಗಳು, ಮುಖಂಡರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.