ಗ್ರಾಮದಲ್ಲಿ ನಡೆದ ಜೆಜೆಎಮ್ ಕಳಪೆ ಮಟ್ಟದ ಕಾಮಗಾರಿಯ ವಿರುದ್ಧ ಆಗ್ರಹ
ತಾಂಬಾ 06: ಗ್ರಾಮದಲ್ಲಿ ಜೆಜೆಎಮ್ ಕೆಲಸದಲ್ಲಿ ಕಳಪೆಮಟ್ಟದ ಪೈಪುಗಳನ್ನು ತಂದು ಅಳವಡಿಸುತ್ತಿದ್ದು. ಸಬಂದ್ದ ಪಟ್ಟ ಅಧಿಕಾರಿಗಳು ಕುಡಲೆ ತನಿಕೆ ಮಾಡಿ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿಗಳ ಜಿಲ್ಲಾ ಸಂಚಾಲಕರಾದ ಸುರೇಶ ನಡುಗಡ್ಡಿ ಆಗ್ರಹಿಸಿದ್ದಾರೆ.
ಈ ಕಾಮಗಾರಿ ನಡೆದು 9ತಿಂಗಳು ಗತಿಸಿದರು ಕಾಮಗಾರಿ ಪೂರ್ಣ ಗೊಂಡಿಲ್ಲ. ಎಲ್ಲ ರಸ್ತೆಗಳು ಅಗೆದು ಹಾಗೆ ಬಿಟ್ಟಿರುವದರಿಂದ ಗ್ರಾಮದಲ್ಲಿ ಚಿಕ್ಕ ಮಕ್ಕಳು ವೃದ್ದರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಈ ಗುತ್ತಿಗೆದಾರ ಅಲಕ್ಷ್ಯ ವಹಿಸಿರುವದರಿಂದ ಅನಾಹುತಗಳು ಆಗುತ್ತಿವೆ. ಈ ಗುತ್ತಿಗೆ ದಾರನ ಲೈಸನ್ಸ ಅನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಕುಡಲೆ ಸಬಂದ್ದ ಪಟ್ಟ ಅಧಿಕಾರಿಗಳು ತಾಂಬಾ ಗ್ರಾಮಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರೀಶೀಲಿಸಿ ಸುಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ವಿಳಂಬ ಮಾಡಿದರೆ ರಾಜ್ಯ ಹೇದ್ದಾರಿ 40ಬಿ ಬಂದ್‌ಗೋಳಿಸಿ ಉಗ್ರಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದ್ದಾರೆ.