ಲೋಕದರ್ಶನ ವರದಿ
ಕೊಪ್ಪಳ 08: ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಖಜಾಂಚಿ, ಅಗಳಕೇರಿಯ ಅಶ್ವಿನಿ ನಾರಾಯಣಪ್ಪ ಅರಕೇರಾ ಮತ್ತು ಹಾಸಗಲ್ಲಿನ ಹನುಮೇಶ ಇಂದ್ರೆಪ್ಪ ನಾಯಕ ಅವರ ವಿವಾಹ ಮಹೋತ್ಸವದಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿನೂತನ ಮದುವೆಗೆ ಸಾಕ್ಷಿಯಾದರು.
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ರೋಟರಿ ಕ್ಲಬ್ ಕೊಪ್ಪಳ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮ ನಡೆಸಿದವು.
ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಎಂ. ಗೊಂಡಬಾಳ ಅವರು, ಕಡ್ಡಾಯ ಮತದಾನ ಮತ್ತು ಮತದಾನ ಮಹತ್ವ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮದಲ್ಲಿ ಮದುಮಕ್ಕಳು ಹಾಗೂ ಎಲ್ಲಾ ಕುಟುಂಬ ಮತ್ತು ಅತಿಥಿಗಳಿಗೆ ಮತದಾನ ಪ್ರಮಾಣ ವಚನ ಬೋದಿಸಿದರು. ಸ್ವೀಪ್ ಕಮಿಟಿಯ ಬೂದಗುಂಪಾ ಕ್ಲಸ್ಟರ್ ವ್ಯಾಪ್ತಿಯ ಅಧಿಕಾರಿಗಳು ವಿವಿಪ್ಯಾಟ್ ಮೂಲಕ ಜನರಿಗೆ ಮತದಾನ ಹೇಗೆ ಮತದಾನ ಮಾಡಬೇಕು ಎನ್ನುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವರಭಾರತಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕೌಟಂಬಿಕ ಕಾರ್ಯಕ್ರಮವನ್ನು ಸಾಮಾಜಿಕ ಕಳಕಳಿಗೆ ಅವಕಾಶ ಕೊಟ್ಟ ಅರಕೇರಿ ಮತ್ತು ನಾಯಕ್ ಕುಟುಂಬ ಮಾದರಿಯಾಗಿವೆ. ಅಲ್ಲದೇ ಜನರು ಬದಲಾವಣೆಗಾಗಿ ಮತಗಟ್ಟೆವರೆಗೆ ಬಂದು ಮತ ಚಲಾಯಿಸಬೇಕು, ಆಸೆ ಆಮಿಷಗಳಿಗೆ ಬಲಿಯಾಗದೆ ನಿಜ ನಾಯಕನ ಆಯ್ಕೆಗೆ ಮತದಾನ ಒಂದೇ ಅವಕಾಶ, ಮತದಾನ ಮಾಡದೆ ಕುಳಿತುಕೊಂಡು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ, ಆದ್ದರಿಂದ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇದೇ ವೇದಿಕೆಯಲ್ಲಿ ಆಚರಿಸಿದರು. ವಿವಿಧ ರಂಗದಲ್ಲಿ ಸಾಧನೆ ಮಾಡಿದ, ಹೋರಾಟಗಾತರ್ಿ ಮುಮ್ತಾಜ್ ಬೇಗಂ, ಶಿಕ್ಷಣ ಸೇವೆ ಮಾಡುತ್ತಿರುವ ಶ್ರೀದೇವಿ ಸೂಡಿ ಮತ್ತು ಸಮಾಜ ಸೇವಕಿ ದೇವಮ್ಮ ಬಂಡಿಹಲರ್ಾಪೂರ ಅವರಿಗೆ ಗಣ್ಯರು, ಮಧುಮಕ್ಕಳು ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹನುಮಂತಪ್ಪ ಅರಕೇರಿ, ಪ್ರಭುಗೌಡ ಪಾಟೀಲ, ಮಾಜಿ ಜಿ. ಪಂ. ಸದಸ್ಯ ನಾಗನಗೌಡ, ಶರಣಪ್ಪ ಆನೆಗುಂದಿ, ಮಂಜುನಾಥ ಕನಕಗಿರಿ, ಮಹೇಶ ಅರಕೇರಾ, ನಾಗರಾಜ್ ಕಿನ್ನಾಳ, ಬಸವರಾಜ ಕಕರ್ಿಹಳ್ಳಿ, ಸಂಚಲನ ಸಮಿತಿಯ ರಜನಿ ಆಚಾರ್, ಗವಿಸಿದ್ದಪ್ಪ, ತಾಜುದ್ದಿನ್, ಮದರ್ಾನ ಅಲಿ, ಲತಾ ಹಿರೇಮಠ, ವಿಜಯಲಕ್ಷ್ಮೀ ಗುಳೇದ ಸ್ವಾಗತಿಸಿದರು, ಧರ್ಮಣ್ಣ ಹಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅಜುಮುನ್ನಿಸಾ ಬೇಗಂ ವಂದಿಸಿದರು.