ವಿಜಯಪುರ 17: ವಿಜಯಪುರ ಜಿಲ್ಲಾಧಿಕಾರಿಗಳಾದ ಎಂ.ಕನಗವಲ್ಲಿ ಅವರು ಗುರುವಾರ ಬರಟಗಿ ತಾಂಡಾ ಹಾಗೂ ತಿಡಗುಂದಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸರಬರಾಜು ಕುರಿತು ಪರಿಶೀಲನೆ ನಡೆಸಿದರು.
ಬರಟಗಿ ತಾಂಡಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಕುರಿತಂತೆ ವೀಕ್ಷಿಸಿ, ಅಲ್ಲಿನ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರುದ್ರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.