ವಿಜಯಪುರ: ವಿಶ್ವ ಕಾರ್ಮಿಕ ದಿನಾಚರಣೆ: ಬೃಹತ್ ಮೆರವಣಿಗೆ

ಲೋಕದರ್ಶನ ವರದಿ

ವಿಜಯಪುರ 02: ವಿಶ್ವ ಕಾರ್ಮಿಕರ  ದಿನಾಚರಣೆಯ ಅಂಗವಾಗಿ ವಿಜಯಪುರದಲ್ಲಿ ವಿವಿಧ ಕಾಮರ್ಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. 

ಕೆಂಪು ಬಟ್ಟೆ ಧರಿಸಿ, ಕೈಯ್ಯಲ್ಲಿ ಕೆಂಪು ಬಾವುಟ ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಕಾಮರ್ಿಕರು ಮೆರವಣಿಗೆಯುದ್ದಕ್ಕೂ ಕಾರ್ಮಿಕ ಶಕ್ತಿಗೆ ಜಯವಾಗಲಿ ಎಂದು ಘೋಷನೆ ಕೂಗಿದರು.  

   ನಗರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು. 

ನಂತರ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಲವಾರು ಕಾಮರ್ಿಕ ಮುಖಂಡರು ಮಾತನಾಡಿ ತಮ್ಮ ವಿಚಾರ ಹಂಚಿಕೊಂಡರು.

ಹಿರಿಯಕಾರ್ಮಿಕ  ಮುಖಂಡ ಭೀಮಶಿ ಕಲಾದಗಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸಕರ್ಾರಕಾರ್ಮಿಕ ಕಾನೂನುಗಳನ್ನು ದಮನ ಮಾಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಅನೇಕ ಕಾಮರ್ಿಕರ ಪರವಾದ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕಾರ್ಮಿಕರ  ಶಕ್ತಿಯನ್ನೇ ದುರ್ಬಲಗೊಳಿಸುವ ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದೆ. ಕೇಂದ್ರ ಸಕರ್ಾರ ಬಂಡವಾಳಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕೇಂದ್ರ ಸರ್ಕಾರ  ದೇಶದಲ್ಲಿ ಜಾರಿಗೆ ತಂದಿರುವ ನೋಟು ಅಮಾನ್ಯೀಕರಣ, ಜಿಎಸ್ಟಿ ಮೊದಲಾದ ವ್ಯವಸ್ಥೆಯಿಂದಾಗಿ ಆಹಾರ ಧಾನ್ಯ ಪದಾರ್ಥಗಳು ಹಾಗೂ ಪೆಟ್ರೋಲ್, ಡೀಸಲ್ ಬೆಲೆಗಳು ನಿರಂತರ ಏರಿಕೆಯಾಗುತ್ತಿದೆ. ಬ್ಯಾಂಕ್, ವಿಮಾ ಕ್ಷೇತ್ರಗಳಲ್ಲಿ ವಿದೇಶಿ   ನೇರ ಬಂಡವಾಳಕ್ಕೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಖಾಸಗೀಕರಣ ಮಾಡಲು ಕೇಂದ್ರ ಸಕರ್ಾರ ಹೊರಟಿದೆ ಎಂದು ದೂರಿದರು. 2 ಕೋಟಿ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಮೋದಿ ಅವರು ಭರವಸೆ ನೀಡಿದ್ದರು, ಈ ಭರವಸೆ ಈಡೇರಲಿಲ್ಲ, ಅಚ್ಛೇ ದಿನ ಬರಲಿವೆ ಎಂದರು ಆದರೆ ಈಗ ಬಂದಿದ್ದು ಕರಾಬ್ ದಿನ ಎಂದು ವಿಷಾದ ವ್ಯಕ್ತಪಡಿಸಿದರು. 

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ದುಡಿಯುವ ಜನತೆಯ ಹಕ್ಕುಗಳ ಸಂರಕ್ಷಣೆ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಆಳುವ ಸಕರ್ಾರಗಳು ರೂಪಿಸುತ್ತಿರುವ `ನವ ಉದಾರವಾದಿ ನೀತಿ'ಗಳ ಮೂಲಕ ದೇಶದಲ್ಲಿ ಸಮರಶೀಲ ಹೋರಾಟಗಳಿಂದ ಕಾಮರ್ಿಕ ವರ್ಗ ಪಡೆದಂತಹ ಕಾಮರ್ಿಕ ಹಕ್ಕುಗಳನ್ನು ಇಲ್ಲವಾಗಿಸಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಕೇಂದ್ರ ಸರ್ಕಾರ  44 ಕೇಂದ್ರ ಕಾರ್ಮಿಕರ ಕಾನೂನುಗಳನ್ನು ಸರಳೀಕರಣಗೊಳಿಸುವ ನೆಪದಲ್ಲಿ 4 ಸಂಹಿತೆಗಳಾಗಿ ಮಾರ್ಪಡಿಸಿ ಬಂಡವಾಳ ಪರ ಕಾಮರ್ಿಕ ವಿರೋಧಿ ತಿದ್ದುಪಡಿಗಳನ್ನು ಮಾಡಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಕಾಮರ್ಿಕರ ಹಕ್ಕುಗಳನ್ನು ಬಲಪಡಿಸಲು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು. 

ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ಸೇರಿದಂತೆ ವಿವಿಧ ಕಾಮರ್ಿಕ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಕಾರ್ಮಿಕ ಮುಖಂಡರಾದ ಅಣ್ಣಾರಾಯ ಈಳಿಗೇರ, ಪ್ರಕಾಶ ಹಿಟ್ನಳ್ಳಿ, ಸುನಂದಾ ನಾಯಕ, ಸುರೇಖಾ ರಜಪೂತ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.