ವಿಜಯಪುರ: ಅತ್ಯುತ್ತಮ ಸಂಶೋಧನಾ ಲೇಖನ: ಅಭಿನಂದನಾ ಸಮಾರಂಭ

ವಿಜಯಪುರ 27: ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುವರ್ೇದ ಮಹಾವಿದ್ಯಾಲಯದಲ್ಲಿ ಡಾ. ಶ್ರೀಕರ ಹಿರೇಮಠ ಅವರ ಪಿಎಚ್.ಡಿ. ಅಧ್ಯಯನ ಗ್ರಂಥ "ಶಿವಾಗಮಗಳು ಮತ್ತು ವಚನ ಸಾಹಿತ್ಯ ಒಂದು ವಿಮಶರ್ಾತ್ಮಕ ಅಧ್ಯಯನ" ಕ್ಕೆ ಕನರ್ಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ಪ್ರಧಾನ ಮಾಡುವ ಗ್ರಂಥ ಪುರಸ್ಕಾರ 2017ನೇ ಸಾಲಿನ ಸಂಸ್ಕೃತ ಅತ್ಯುತ್ತಮ ಸಂಶೋಧನಾ ಲೇಖನ (ಶಿಕ್ಷಕ) ಪುರಸ್ಕಾರ ಲಭಿಸಿದ ನಿಮಿತ್ತ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಶರಣರು 12ನೇ ಶತಮಾನದಲ್ಲಿ ರಚಿಸಿದ ವಚನ ಸಾಹಿತ್ಯಗಳು ಇಂದಿಗೂ ಪ್ರಾಯೋಗಿಕವಾಗಿದ್ದು, ಈ ಎಲ್ಲ ವಚನ ಸಾಹಿತ್ಯಗಳು ಜನ ಸಾಮಾನ್ಯರನ್ನು ತಲುಪಬೇಕು. ಹಾಗೂ ಇವುಗಳ ಕುರಿತಾದ ಸಂಶೋಧನೆಗಳು ಕೇವಲ ಪುಸ್ತಕದಲ್ಲಿ ಉಳಿಯದೇ ಬೆಳಕಿಗೆ ಬರಬೇಕು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕಣರ್ಿ ಹೇಳಿದರು.  

ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ  ಮಹಾವಿದ್ಯಾಲಯದಲ್ಲಿ ಸಂಹಿತಾ ಸಿದ್ಧಾಂತ ವಿಭಾಗದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶ್ರೀಕರ ಹಿರೇಮಠ ಮಾತನಾಡುತ್ತ ವಚನ ಸಾಹಿತ್ಯದಲ್ಲಿ ಅಡಗಿರುವ ಜ್ಞಾನ ಭಂಡಾರ ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಪಿ.ಎಚ್.ಡಿ. ಪದವಿಯು ಸಂಶೋಧನೆಯ ಪ್ರಾರಂಭದ ಹಂತವಾಗಿದೆ. ಸಂಶೋಧನೆಗೆ ಮತ್ತು ಅಧ್ಯಯನಕ್ಕೆ ಸತತ ಪ್ರಯತ್ನಿಸಿದರೇ ಸಾಧಕರಾಗಬಹುದು. ಪಿಎಚ್.ಡಿ. ಅಧ್ಯಯನಕ್ಕೆ ಸಹಕರಿಸಿದ ತಮ್ಮ ಗುರುಗಳು, ತಂದೆ-ತಾಯಿ ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಸಂಸ್ಕೃತವು ಆಯುವರ್ೇದದ ಮೂಲ ಭಾಷೆಯಾಗಿದ್ದು, ಅದರ ಅಧ್ಯಯನ ಬಹಳ ಪ್ರಮುಖವಾಗಿದ್ದು, ಸಂಸ್ಕೃತ ಸಾಹಿತ್ಯ  ಮತ್ತು ಆಯುರ್ವೇದದಲ್ಲಿ  ಇನ್ನೂ ಅನೇಕ ರೀತಿಯ ಸಂಶೋಧನೆಗಳು ನಡೆಯಬೇಕು ಹಾಗೂ ವಿಶ್ವದಾದ್ಯಂತ ಆಯುವರ್ೇದ ಚಿಕಿತ್ಸಾ ಸಿದ್ಧಾಂತಗಳ ಸದ್ಭಳಕೆಯಾಗಬೇಕು ಎಂದು ಮನವಿ ಮಾಡಿದರು. 

ಡಾ. ಜ್ಯೋತಿ ಬರಗಿ ಸ್ವಾಗತಿಸಿದರು. ಡಾ. ಶಿಲ್ಪಾ ನಿಂಬಾಳ ಪರಿಚಯಿಸಿದರು. ಡಾ. ಮಧು ಹಿಪ್ಪಲಗಾವ ನಿರೂಪಿಸಿದರು. ಡಾ. ಮೇಘಾವತಿ ಅವಟಿ ವಂದಿಸಿದರು. ಡಾ. ಎಸ್.ಪಿ. ಮನಗೂಳಿ, ಡಾ. ರೇಣುಕಾ ತೆನಹಳ್ಳಿ, ಡಾ. ಆರ್.ಎ. ದೇಶಮುಖ, ಡಾ. ಸಚಿನ ಬಗಲಿ ಹಾಗೂ ಕೆ.ಕೆ. ಕತ್ತಿ ಸನ್ಮಾನಿಸಿದರು.