ಲೋಕದರ್ಶನ ವರದಿ
ವಿಜಯಪುರ 06: ದೇವರಹಿಪ್ಪರಗಿಯಿಂದ ಬಿ.ಬಿ. ಇಂಗಳಗಿ 25.95 ಕೀಮಿ ರಸ್ತೆಯಿದ್ದು, ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ 10 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ನಿಡೋಣಿ ಸೇರಿದಂತೆ ವಿವಿಧ ಅಧಿಕಾರಿಗಳೊಡನೆ ಚರ್ಚ ನಡೆಸಿರುವ ಶಾಸಕರು, ಕ್ಷೇತ್ರದಲ್ಲಿರುವ ರಸ್ತೆಗಳ ಮಾಹಿತಿ ಪಡೆಯುವುದರ ಜೊತೆಗೆ ಯಾವ ಯಾವ ರಸ್ತೆಗಳು ಕಾಮಗಾರಿಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂಬುದರ ಕುರಿತು ಚರ್ಚ್ ನಡೆಸಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಹಲವಾರು ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಲೋಕೋಪಯೋಗಿ ಇಲಾಖೆ ಹಂತ ಹಂತವಾಗಿ ಅನುದಾನ ಈಡುತ್ತಿದೆ. ಮೊದಲನೇ ಪ್ಯಾಕೇಜನಲ್ಲಿ ಬಿಬಿ ಇಂಗಳಗಿಯಿಂದ ದೇವರಹಿಪ್ಪರಗಿಯ ಕಡೆಗೆ 0ದಿಂದ 6 ಕೀಮಿ ರಸ್ತೆಗೆ 5 ಕೋಟಿ ರೂ. ಮಂಜೂರಾಗಿದೆ. ಅದರಂತೆ ಎರಡನೇ ಪ್ಯಾಕೇಜನಲ್ಲಿ 9.91 ಕೀಮಿ ಯಿಂದ 14.91 ಕೀಮಿ ವರೆಗೆ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ಈಗಾಗಲೇ ಜನೆವರಿ 25 ರಂದೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದೂಡಲಾಗಿದೆ. ಬರುವ ಜೂನ್ 24 ರಂದು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಟೆಂಡರ್ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಅದರಂತೆ ಇನ್ನು ಉಳಿದ ಬಿಬಿಇಂಗಳಗಿ-ದೇವರಹಿಪ್ಪರಗಿ ರಸ್ತೆ ಕಾಮಗಾರಿಗಾಗಿ ಸರ್ಕಾರಕ್ಕೆ ಇನ್ನೂ 10 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ಉಳಿದ ರಸ್ತೆಯನ್ನು ದುರಸ್ತಿ ಮಾಡಲಾಗುವುದು. ಹಂತ ಹಂತವಾಗಿ ಕ್ಷೇತ್ರದಲ್ಲಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋರಿದರು.
ಲೋಕೋಪಯೋಗಿ ಇಲಾಖೆಯ ಸಿಂದಗಿ ಉಪವಿಭಾಗದ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಎಂ.ಎಸ್. ನಿಡೋಣಿ, ಸಹಾಯಕ ಅಭಿಯಂತರ ಜೆ.ಎಸ್. ನಾರಾಯಣಕರ ಮೊದಲಾದವರು ಭಾಗವಹಿಸಿದ್ದರು.