ವಿಜಯಪುರ: ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಗೆಲುವು

ಲೋಕದರ್ಶನ ವರದಿ

ವಿಜಯಪುರ 23: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ  ರಮೇಶ ಜಿಗಜಿಣಗಿ ಅವರು ಪುನರಾಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

    ಇದು ರಮೇಶ ಜಿಗಜಿಣಗಿ ಅವರ ಎರಡನೇ ಹ್ಯಾಟ್ರಿಕ್ ಗೆಲುವು. ಈ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೀಸಲು ಲೋಕಸಭಾ ಕ್ಷೇತ್ರದಿಂದಲೂ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಲೋಕಸಭೆ ಚುನಾವಣೆೆಯಲ್ಲಿ 'ಡಬಲ್ ಹ್ಯಾಟ್ರಿಕ್ ವಿಜಯ ಸಾಧಿಸಿದ ಹೆಗ್ಗಳಿಕೆ ಇವರದಾಗಿದೆ.

ರಮೇಶ ಜಿಗಜಿಣಗಿ ಅವರು ಮೂರನೇ ಬಾರಿ ಆಯ್ಕೆಯಾಗುವುದರೊಂದಿಗೆ ಬಿಜೆಪಿ ಭದ್ರಕೋಟೆಯಾಗಿರುವ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರವನ್ನು ಮತ್ತಷ್ಟು ಸುಭದ್ರಗೊಳಿಸಿದ್ದಾರೆ. ಮೈತ್ರಿ ಅಭ್ಯಥರ್ಿ ಪರಾಭವಗೊಂಡಿದ್ದರಿಂದ ಬಿಜೆಪಿ ಭದ್ರಕೋಟೆ ಬೇಧಿಸಬೇಕೆಂದು ಛಲತೊಟ್ಟಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಮುಖಭಂಗವಾದಂತಾಗಿದೆ. 

ಗೃಹ ಸಚಿವ ಎಂ.ಬಿ. ಪಾಟೀಲ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ನೀರು ಸರಬರಾಜು ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಸಂಸದೀಯ ಕಾರ್ಯದಶರ್ಿ ದೇವಾನಂದ ಚವ್ಹಾಣ ಮುಂತಾದ ನಾಯಕರು ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಒಕ್ಕಟ್ಟಿನ ಜಪದೊಂಧಿಗೆ ಚುನಾವಣೆ ಎದುರಿಸಿದ್ದರೂ ಬಿಜೆಪಿ ಭದ್ರಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. 

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ  ಡಾ. ಸುನೀತಾ ಚವ್ಹಾಣ ಅವರನ್ನು ಸೋಲಿಸಿ 2,58,038 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. 

     ಬಿಜೆಪಿ ಅಭ್ಯರ್ಥಿ  ರಮೇಶ ಚಂದಪ್ಪ ಜಿಗಜಿಣಗಿ ಅವರಿಗೆ 635867 ಮತಗಳು ಬಂದಿವೆ. ಮೈತ್ರಿ ಅಭ್ಯಥರ್ಿ ಡಾ.ಸುನೀತಾ ದೇವಾನಂದ ಚವ್ಹಾಣ ಅವರಿಗೆ 377829  ಮತಗಳು ಬಂದಿವೆ. ಬಹುಜನ ಸಮಾಜ ಪಕ್ಷದ ಶ್ರೀನಾಥ ಸಂಗಪ್ಪ ಪೂಜಾರಿ ಅವರಿಗೆ 23389, ಉತ್ತಮ ಪ್ರಜಾಕೀಯ ಪಕ್ಷದ ಗುರುಬಸವ ರಬಕವಿ 8475, ವೆಂಕಟೇಶ್ವರ ಮಹಾಸ್ವಾಮೀಜಿ ಕಟಕಧೋಂಡ 2646, ಯಮನಪ್ಪ ವಿಠ್ಠಲ ಗುಣದಾಳ 2957, ರುದ್ರಪ್ಪ ಚಲವಾದಿ 3216, ದಾದಾಸಾಹೇಬ ಸಿದ್ಧಪ್ಪ ಬಾಗಾಯತ 4188, ಧೋಂಡಿಬಾ ರಾಮು ರಾಠೋಡ 4102,   ಧರೆಪ್ಪ ಮಹಾದೇವ ಅಧರ್ಾವೂರ 23706, ಬಾಲಾಜಿ ದ್ಯಾಮಣ್ಣ ವಡ್ಡರ 7644, ರಾಮಪ್ಪ ಹರಿಜನ 4992 ಮತಗಳನ್ನು ಪಡೆದುಕೊಂಡಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 12,286 ರಷ್ಟು ನೋಟಾ ಮತಗಳು ಚಲಾವಣೆಯಾಗಿವೆ. ಅದರಲ್ಲಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 1881 ರಷ್ಟು ನೋಟಾ ಚಲಾವಣೆಯಾಗಿದೆ. ಮುದ್ದೇಬಿಹಾಳದಲ್ಲಿ 1624, ದೇವರಹಿಪ್ಪರಗಿ 1558, ಬಬಲೇಶ್ವರದಲ್ಲಿ 1792, ವಿಜಯಪುರದಲ್ಲಿ 1165, ನಾಗಠಾಣ 1483, ಇಂಡಿಯಲ್ಲಿ 1887, ಸಿಂದಗಿಯಲ್ಲಿ 1490 ನೋಟಾ ಮತಗಳು ಚಲಾವಣೆಯಾಗಿವೆ.