ಪ್ರೊ. ಜಯಶ್ರೀ ಎಸ್. ಅಧಿಕಾರ ಸ್ವೀಕಾರ
ಧಾರವಾಡ 01: ಕರ್ನಾಟಕ ವಿಶ್ವವಿದ್ಯಾಲಯದ ನೂತನ ಪ್ರಭಾರಿ ಕುಲಪತಿಗಳಾಗಿ ಪ್ರೊ. ಜಯಶ್ರೀ ಎಸ್. ಅವರು ಮಂಗಳವಾರ ದಿ. 31ರಂದು ಸಾಯಂಕಾಲ ಅಧಿಕಾರ ಸ್ವೀಕರಿಸಿದರು.
ಪ್ರಭಾರಿ ಕುಲಪತಿಯಾಗಿದ್ದ ಡಾ. ಬಿ.ಎಂ. ಪಾಟೀಲ ಅವರು ಸಮಾಜ ವಿಜ್ಞಾನ ನಿಖಾಯದ ಡೀನ್ ಆದ ಪ್ರೊ. ಜಯಶ್ರಿ ಎಸ್. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕುಲಸಚಿವ ಡಾ. ಎ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ವಿತ್ತಾಧಿಕಾರಿ ಡಾ. ಕೃಷ್ಣಮೂರ್ತಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.