ವಿಜಯಪುರ: ಸಮುದಾಯ ಭವನ ನಿರ್ಮಾಣದಲ್ಲಿ ಅವ್ಯವಹಾರ: ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ

ಲೋಕದರ್ಶನ ವರದಿ

ವಿಜಯಪುರ 27: ಸಮಾಜ ಕಲ್ಯಾಣ ಇಲಾಖೆಯಿಂದ 2017-18 ನೇ ಸಾಲಿನಲ್ಲಿ ಇಂಗಳೇಶ್ವರ ಗ್ರಾಮಕ್ಕೆ ಮಂಜೂರಾದ ಸಮುದಾಯ ಭವನ ನಿರ್ಮಾಣದಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಂಗಳೇಶ್ವರ ಎಲ್.ಟಿ. ನಂ.1 ರ ನಿವಾಸಿಗಳು,  ದುರ್ಗಾದೇವಿ ಸಂಘದ ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಈ ಸಂದರ್ಭದಲ್ಲಿ ಸೇವಾಲಾಲ ಯುವಕ ಸಂಘದ ಕಾರ್ಯದಶರ್ಿ ರಾಜು ರಾಠೋಡ ಮಾತನಾಡಿ, 2017-18 ನೇ ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಇಂಗಳೇಶ್ವರ ಎಲ್.ಟಿ. ನಂ.1 ರಲ್ಲಿ ಸಮುದಾಯ ಭವನ ಕಟ್ಟುವುದಕ್ಕೆ ದುಗರ್ಾದೇವಿ ಸಂಘದ ಅಧ್ಯಕ್ಷೆ ಕಸ್ತೂರಿಬಾಯಿ ಪ್ರೇಮಸಿಂಗ ಚವ್ಹಾಣ  ಅವರಿಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಈ ಸಮುದಾಯ ಭವನದ ಒಟ್ಟು ರೂ.1.45 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿಸಿದ್ದು. ಇದರಲ್ಲಿ 25 ಲಕ್ಷ ರೂ.ಗಳನ್ನು ಪಡೆದುಕೊಂಡು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ  ಮಾಡದೇ ಮೋಸ ಮಾಡಿರುತ್ತಾರೆ. ಸದ್ಯ ಸದರಿ ಜಾಗೆಯಲ್ಲಿ ಯಾವುದೇ ಸಮುದಾಯ ಭವನ ಇರುವದಿಲ್ಲ. ಈಗಾಗಲೇ ಮೂರನೇಯ ಹಂತದ ಜಿ.ಪಿ.ಎಸ್. ಮಾಡಲು ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಅದ್ಯಕ್ಷರು ಮತ್ತು ಅದ್ಯಕ್ಷರ ಕುಟುಂಬ ಸದಸ್ಯರು ಪೋರ್ಜರಿ ಸಹಿ ಮಾಡಿ ಈ ಭಾರಿ ಪ್ರಮಾಣದ ಹಗರಣವನ್ನು ಮಾಡಿದ್ದು, ಇದರ ಮೇಲೆ ಇನ್ನುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 

ಇದರಲ್ಲಿ ಸಂಘದ ಉಪಾಧ್ಯಕ್ಷರ ಹಾಗೂ ಸದಸ್ಯರ ಎಳ್ಳಷ್ಟೂ ಪಾತ್ರವಿಲ್ಲ. ಕೇವಲ ಅಧ್ಯಕ್ಷರು ಮತ್ತು ಅವರ ಕುಟುಂಬದವರು ಮಾತ್ರ ಶಾಮೀಲಾಗಿದ್ದು, ಈ ಪ್ರಕರಣವನ್ನು ಅತೀ ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ ಸಂಘದ ಅಧ್ಯಕ್ಷರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು, ಅವರಿಗೆ ಮಂಜೂರಾದ ಹಣವನ್ನು ಸಮುದಾಯ ಭವನದ ನಿಮರ್ಾಣಕ್ಕೆ ಬಳಕೆ ಮಾಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು. 

ಪುಂಡಲೀಕ ರಾಠೋಡ, ರಾಮು ನಾಯಕ, ವಾಚು ಪವಾರ, ಶ್ರೀಮಂತ ಚವ್ಹಾಣ, ಕಾಂತು ರಾಠೋಡ, ಮಂಗಲು ಚವ್ಹಾಣ, ಸುಭಾಸ ರಾಠೋಡ, ಸಂಜು ಚವ್ಹಾಣ, ಹೂನಾಬಾಯಿ ಚವ್ಹಾಣ, ರುಕ್ಮಾಬಾಯಿ ರಾಠೋಡ,ಕುಸಮಾಬಾಯಿ ರಾಠೋಡ, ಶಾಂತಾಬಾಯಿ ರಾಠೋಡ, ರಾಮಬಾಯಿ ರಾಠೋಡ, ಕವಿತಾ ಚವ್ಹಾಣ ಮೊದಲಾದವರು ಉಪಸ್ಥಿತರಿದ್ದರು.