ಲೋಕದರ್ಶನ ವರದಿ
ವಿಜಯಪುರ 15: ನಗರದ ದಿವಟಗೇರಿ ಗಲ್ಲಿಯ ಮಲ್ಲಿಕಾಜರ್ುನ ದೇವಸ್ಥಾನದ ಶಿವಾನುಭವ ಮಂಟಪದಲ್ಲಿ ರಾಷ್ಟ್ರೀಯ ಬಸವಸೇನೆ ಹಾಗೂ ಅಕ್ಕನ ಬಳಗ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ದಾನೇಶ ಅವಟಿ ಅವರು, ಶರಣೆ ಹೇಮರಡ್ಡಿ ಮಲ್ಲಮ್ಮ ಎಷ್ಟೇ ಕಷ್ಟ ಬಂದರೂ ಎದುರಿಸಿ ಶಿವನನ್ನು ಸಾಕ್ಷಾತ್ಕರಿಸಿಕೊಂಡ ಮಾಹಾಸಾದ್ವಿ ಎಂದರು.
ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯ ಕೆ.ಎಚ್. ಪತ್ತಾರ ಮಾತನಾಡಿ ಸ್ತ್ರೀ ಕುಲಕ್ಕೆ ಆದರ್ಶಪ್ರಾಯಳಾದ ಮಲ್ಲಮ್ಮ ಮಹಾಮಹಿಮಾನ್ವಿತೆ ಹಾಗೂ ಮಾತೃ ಹೃದಯಿ. ವಿಷಯ ಲಂಪಟನಾಗಿದ್ದ, ದುಶ್ಚಟಗಳ ದಾಸನಾಗಿದ್ದ ಮೈದುನ ವೇಮನಿಗೆ ಆತ್ಮ ಜ್ಞಾನ ಮೂಡಿಸಿ ಮಹಾಜ್ಞಾನಿಯನ್ನಾಗಿ ಜಗಕ್ಕೆ ಕರುಣಿಸಿದ ಮಹದುಪಕಾರಿ ಮಲ್ಲಮ್ಮ ಕೇವಲ ರಡ್ಡಿ ಜನಾಂಗಕ್ಕಷ್ಟೆ ಅಲ್ಲ ಇಡೀ ಮಾನವ ಕುಲಕ್ಕೆ ಸುಖ, ಶಾಂತಿ, ನೆಮ್ಮದಿ ಬಯಸಿ ಶುಭಹಾರೈಸಿದವಳೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವಸೈನ್ಯ ಜಿಲ್ಲಾಧ್ಯಕ್ಷ ಸೋಮನಗೌಡ ಕಲ್ಲೂರ ಮಾತನಾಡಿ ಜನನಿ ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು. ನಾವು ಈ ಇಬ್ಬರ ಋಣವನ್ನು ತಿರಿಸುವುದು ಅಸಾಧ್ಯ. ಹೆತ್ತ ತಾಯಿಯನ್ನು ಹಾಗೂ ಹೊತ್ತ ಭೂಮಿಯನ್ನು ನಾವು ಎಷ್ಟು ಪೂಜಿಸಿದರು ಕಡಿಮೆಯೇ ಸರಿ ಎಂದರು.
ಹೇಮರಡ್ಡಿ ಮಲ್ಲಮ್ಮ ಲೋಕನಿಂದೆಯ ಅಪಮಾನ, ಕಷ್ಟ ನಷ್ಟ ಏನೇ ಬರಲಿ ಸತ್ಯ, ಶುದ್ಧ ಕಾಯಕದಿಂದ ಮುಂದುವರೆದು ಮಹಾದೇವನನ್ನು ಒಲಿಸಿಕೊಂಡ ಪರಿ ಸಾಮಾನ್ಯವೇನಲ್ಲ ಜನಸಾಮಾನ್ಯರಾದ ನಾವು ಜೀವನದಲ್ಲಿ ಏನೇ ಕಷ್ಟ ನಷ್ಟ ಬಂದರು ಎದುರಿಸಿ ಶಿವಸಾನಿಧ್ಯವನ್ನು ಹೊಂದಬೇಕೆಂದರು. ಹಾಗೂ ಮಲ್ಲಮ್ಮನ ತತ್ವ ಆದರ್ಶಗಳಲ್ಲಿ ನಂಬುಗೆ ಇಟ್ಟು ನಡೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಕ್ಕನ ಬಳಗದ ಅಂಬವ್ವ ನಿಂಬಾಳ, ಮಹಾದೇವಿ ಪೂಜಾರಿ, ಬೌರವ್ವ ಕಪಾಲಿ, ಜಯಶ್ರೀ ಪೂಜಾರಿ, ಗೌರವ್ವ ಕೋರಿ, ದ್ರಾಕ್ಷಯಣಿ ಕಮ್ಮಾರ, ಗೌರಾಬಾಯಿ ಬಳ್ಳಾರಿ, ಯಮನಕ್ಕ ಕೋರಿ, ಶಿವಾನಂದ ಪೂಜಾರಿ, ಸಿದ್ದು ಭಾವಿಕಟ್ಟಿ, ಶಿವು ಭೂತನಾಳ ಮುಂತಾದವರು ಉಪಸ್ಥಿತರಿದ್ದರು. ಆನಂದ ಜಂಬಗಿ ನಿರೂಪಿಸಿದರು. ಭೀಮಾಶಂಕರ ಪತ್ತಾರ ಶರಣ ಸಮರ್ಪಣೆಗೈದರು.