ವಿಜಯಪುರ: ಗೋರಕ್ಷಕ ಶಿವು ಉಪ್ಪಾರ ಹತ್ಯೆ ಪ್ರಕರಣ: ತನಿಖೆಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ವಿಜಯಪುರ 07:  ಗೊ ರಕ್ಷಕ ಶಿವು ಉಪ್ಪಾರ  ನಿಗೂಢ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ  ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯ ಒಕ್ಕೂಟದ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

      ಈ ಸಂದರ್ಭದಲ್ಲಿ  ಒಕ್ಕೂಟದ ರಾಜ್ಯಾಧ್ಯಕ್ಷ ಸಾಯಬಣ್ಣ ಮಡಿವಾಳರ ಮಾತನಾಡಿ,  ಗೋ ರಕ್ಷಕ ಶಿವು ಉಪ್ಪಾರ. ಅವರ ನಿಗೂಢ ಹತ್ಯೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಆತನಿಗೆ ನ್ಯಾಯ ದೊರಕಿಸಿಕೊಡಬೇಕು. ಆತನ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು,

ನ್ಯಾಯವಾದಿ ಬಿ.ಎಂ. ನೂಲ್ವಿ, ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟ ಜಿಲ್ಲಾಧ್ಯಕ್ಷ ಎಸ್.ಬಿ. ಕನ್ನೊಳ್ಳಿ  ಅವರು ಮಾತನಾಡಿ,  ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಗೋ ರಕ್ಷಕ ಶಿವು ಉಪ್ಪಾರ ಅವರ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಉಗ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುಮಂಗಲಾ ಕೋಟಿ ಶಿವು ಉಪ್ಪಾರ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ಶಿವು ಉಪ್ಪಾರ ಒಬ್ಬನೇ ಮಗ. ಆ ಮಗನನ್ನೆ ಕಳೆದುಕೊಂಡ ಕುಟುಂಬ ಬೀದಿಗೆ ಬಂದಿದ್ದು ಆ ಕುಟುಂಬಕ್ಕೆ ರಾಜ್ಯ ಸರಕಾರ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಸರಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.  

ಒಕ್ಕೂಟದ ಪದಾಧಿಕಾರಿಗಳಾದ ವಿಶ್ವನಾಥ ನರಳೆ, ರಾಜ್ಯ ಪ್ರಧಾನ ಕಾರ್ಯದರ್ಶಿ  ಸಂಜು ಶಿವಣಗಿ, ಭರತ ಕೋಳಿ, ಮಲ್ಲಿಕಾಜರ್ುನ ಮಡಿವಾಳರ, ಸಂತೋಷ ನಿಗಡಿ, ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ, ಭಾರತಿ ಭೂಯ್ಯಾರ, ಎಂ.ಪಿ. ಶಿವಣ್ಣವರ, ಲಕ್ಷ್ಮಣ ಉಪ್ಪಾರ, ಅನಿಲ ಸಿ. ಉಪ್ಪಾರ, ಮಲ್ಲು ಎ. ಮಡಿವಾಳರ, ಯಲ್ಲಪ್ಪ ಘೋರ್ಪಣೆ, ಸಂಗಮೇಶ ಗುಂದಳೆ, ಚಂದ್ರಶೇಖರ ಗೆಣ್ನೂರ, ನಾಗರಾಜ ಚಿಂತಪಳ್ಳಿ, ಅಂಬರೇಶ ಸುಣಗಾರ, ಹಣಮಂತ ಶೆಟ್ಟೆಣ್ಣವರ, ಶ್ರೀನಿವಾಸ ಅಂಬಲಿ, ಸಂಗನಗೌಡ ಬಿರಾದಾರ,  ಮಲ್ಲಿಕಾಜರ್ುನ ಹತ್ತಿ, ಎಂ.ಎನ್. ಉಪ್ಪಾರ, ಶಿವು ಪರೀಟ ಮುಂತಾದವರು ಉಪಸ್ಥಿತರಿದ್ದರು.