ನಿವೃತ್ತ ಶಿಕ್ಷಕ ಚಂದ್ರ​‍್ಪರಿಗೆ ಬೀಳ್ಕೊಡುಗೆ

Farewell to retired teacher Chandrapari

ನಿವೃತ್ತ ಶಿಕ್ಷಕ ಚಂದ್ರ​‍್ಪರಿಗೆ ಬೀಳ್ಕೊಡುಗೆ 

ಹೂವಿನಹಡಗಲಿ 01: ತಾಲೂಕಿನ ನಂದಿಹಳ್ಳಿ ಗ್ರಾಮದ ಚಿಕ್ಕಗೌಡ್ರ ಚಂದ್ರ​‍್ಪ ಶಿಕ್ಷಕರುತಮ್ಮ ವೃತ್ತಿ ಜೀವನದುದ್ದಕ್ಕೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ನಿರಂತರವಾಗಿ ನಿರ್ವಹಿಸಿದ್ದಾರೆಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ ಹೇಳಿದರು.ಪಟ್ಟಣದ ಬಂಗಾರ​‍್ಪ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡದ ಸೇವೆ ಸಲ್ಲಿಸಿದ್ದಾರೆ.ಎಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟಿಪ್ಪ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಸಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.ಜಿ ಪಿ ಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೋರಿ ಹಾಲೇಶ್ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲೆ ಮರೆಯ ಹೆಣ್ಣಿನ ರೀತಿಯಲ್ಲಿ ಸಿ ಚಂದ್ರ​‍್ಪ ಶಿಕ್ಷಕರ ಕಾರ್ಯ ವೈಖರಿ ಮೆಚ್ಚುವಂಥದ್ದು ಎಂದು ತಿಳಿಸಿದರು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಯು ಆನಂದ್ ನಿವೃತ್ತಿ ಬದುಕು ಉತ್ತಮ ವಾಗಿರಲೆಂದು ಶುಭಹಾರೈಸಿದರು.ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ್ಘ ಅಶೋಕ್ ನೂತನ ನಿರ್ದೇಶಕರಾದ ಮಾದೇಶ್ವರ ಕೆ. ಪಟ್ಟಣ ಸಿ ಆರ್ ಪಿ ಚನ್ನವೀರನ ಗೌಡ, ಉಪನ್ಯಾಸಕರಾದ ವಿರುಪಾಕ್ಷಪ್ಪ ಬಡಿಗೇರ್, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಶಂಕರ್ ಬೆಟಗೇರಿ, ಕೊಟ್ರೇಶ್ ಹೊಂಬಾಳೆ, ಮಂಜುನಾಥ ಬೋವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವಿ ಹೆಚ್ ಯೇಸು, ಮುಖ್ಯ ಗುರುಗಳಾದ ಮುಕ್ತಿಯಾರ್ ಅಹಮದ್ ಸಿ ಆರ್ ಪಿ ಸುನೀಲ್ ಇತರರು ಶುಭ ಕೋರಿದರು.