2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ

Pre-budget meeting for 2025-26

2025-26ನೇ ಸಾಲಿನ ಬಜೆಟ್  ಪೂರ್ವಭಾವಿ ಸಭೆ  

ವಿಜಯಪುರ 1: ಮಹಾನಗರ ಪಾಲಿಕೆಯ 2025-26  ಸಾಲಿನ ಬಜೆಟ್ ಅಂದಾಜು ಪತ್ರ ತಯಾರಿಸಲು ಜನವರಿ 4 ರ ಮಧ್ಯಾಹ್ನ 4ಗಂಟೆಗೆ ಪಾಲಿಕೆಯ ಮುಖ್ಯ ಕಛೇರಿಯಲ್ಲಿ ಮೊದಲ ಸುತ್ತಿನ ಬಜೆಟ್ ಪೂರ್ವಭಾವಿ ಸಭೆ ಕರೆಯಲಾಗಿದೆ.   

ಸಭೆಯಲ್ಲಿ ಮಹಾನಗರ ಪಾಲಿಕೆಯ ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರುಗಳು, ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆ ಒಕ್ಕೂಟದ ಸದಸ್ಯರು ಹಾಗೂ ಇತರ ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ತಮ್ಮ ಸಲಹೆ-  ಸೂಚನೆ ನೀಡಬಹುದಾಗಿದೆ ಎಂದು  ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ  

ವಿಜಯಪುರ 1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು   

 ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಂದಾಯ ನೀರೀಕ್ಷ ಸಂತೋಷ ಪಾಠಕ, ಮೂರುಜಾವರ ತಡಲಗಿಯ ರಾಮಾ ಅವಧೂತ ಮಠದ ಮಹೇಂದ್ರ ಸ್ವಾಮಿಗಳು,  ಪ್ರಕಾಶ ಮಹಾರಾಜರು, ಸಮಾಜ ಮುಖಂಡರಾದ ಪರಮಾನಂದ ಬಡಿಗೇರ, ಮುಕುಂದ ಕುಂದನಗಾರ, ಶಾರದಾ ಪತ್ತಾರ, ಮೀನಾ ಕುಂದನಗಾರ, ಕಾಳಮ್ಮ ಪತ್ತಾರ, ಈರಣ್ಣ ಕನಮಡಿ, ಶಿವುಕುಮಾರ ಪತ್ತಾರ, ಶ್ರೀಕಾಂತ ಕುಂದನಗಾರ ಜಿಲ್ಲಾಧಿಕಾರಿ ಕಚೇರಿ  ಸಿಬ್ಬಂದಿ ಉಪಸ್ಥಿತರಿದ್ದರು.