ಲೋಕರ್ಶನ ವರದಿ
ವಿಜಯಪುರ 03: ವಿಜಯಪುರ ಜಿಲ್ಲೆಯ ಜನತೆ ನನಗೆ ಆಶೀವರ್ಾದ ಮಾಡಿ ದಾಖಲೆ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ವಿಜಯಪುರದಲ್ಲಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನತೆಯ ಋಣ ತೀರಿಸುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.
ಸಂಸದರಾಗಿ ಪುನರಾಯ್ಕೆಯಾದ ನಂತರ ಪ್ರಥಮ ಬಾರಿ ವಿಜಯಪುರದಲ್ಲಿ ಸೋಮವಾರ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಪರಿಸರ ಹಾಗೂ ಮೂಲಭೂತ ಸೌಕರ್ಯಗಳಿಗೆ ಪೂರಕವಾಗುವ ಕೈಗಾರಿಕೆಯನ್ನು ಸ್ಥಾಪಿಸಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ವಿಜಯಪುರದಲ್ಲಿ ಲಭ್ಯವಿರುವ ಸಂಪನ್ಮೂಲಗಳು, ನೀರಿನ ಲಭ್ಯತೆ ಮೊದಲಾದ ಸೌಕರ್ಯಗಳನ್ನು ಅವಲೋಕಿಸಿ ವಿಜಯಪುರಕ್ಕೆ ಯಾವ ಕಾಖರ್ಾನೆ, ಉದ್ಯಮ ಸ್ಥಾಪಿಸಿದರೆ ಸೂಕ್ತ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ಭಾಗಕ್ಕೆ ಕೈಗಾರಿಕೆಯನ್ನು ತರುವೆ ಆ ಮೂಲಕ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸುವುದಾಗಿ ಅವರು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ರಾಜ್ಯ ಸಕರ್ಾರ ಕೇವಲ ಸಮ್ಮತಿ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದೆ ಹೊರತು ತನ್ನ ಪಾಲಿನ ಹಣ ನೀಡುತ್ತಿಲ್ಲ. ಈ ಹಿಂದೆಯೂ ಸಹ ಸಮ್ಮತಿ ನೀಡಿತ್ತು, ಆದರೆ ಹಣ ನೀಡಿಲ್ಲ ಎಂದು ಆರೋಪಿಸಿದರು. ಅವರು ಹಣ ನೀಡುತ್ತಾರೋ ಬಿಡುತ್ತಾರೋ ಅದು ನನಗೆ ಗೊತ್ತಿಲ್ಲ, ಒಂದು ವೇಳೆ ಹಣ ನೀಡದಿದ್ದರೂ ಸಹ ಕೇಂದ್ರದ ಅನುದಾನ ತಂದು ವಿಮಾನ ನಿಲ್ದಾಣ ನಿರ್ಮಾಣ ಮಾಡುವೆ ಎಂದು ಜಿಗಜಿಣಗಿ ಹೇಳಿದರು.
ವಿಮಾನ ನಿಲ್ದಾಣ ನಿಮರ್ಿಸುವದೇಂದರೆ ನೀರಾಗ ಏಮ್ಮಿ ಮಲಗಿಸಿ ವ್ಯಾಪಾರ ಮಾಡಿದಂಗಲ್ಲ ಎಂದು ಜಿಗಜಿಣಗಿ ಪರೋಕ್ಷವಾಗಿ ಸಚಿವ ಎಂ.ಬಿ.ಪಾಟೀಲರಿಗೆ ಟಾಮಗ್ ನೀಡಿದರು. ಅಲ
ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದ ವರಿಷ್ಠರ ನಿರ್ಧಾರ. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನಗೇನೂ ಬೇಸರವಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲ ಎಂದು ಹೇಳಿದ ಜಿಗಜಿಣಗಿ ಅವರು, ಇನ್ನೂ ಅವಕಾಶವಿದೆ, ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯಾದರೂ ತಮಗೆ ಅವಕಾಶ ಸಿಗುವ ಆಶಾಭಾವನೆ ಇದೆ ಎಂದು ಪತ್ರಕರ್ತರ ಪಶ್ನೆಯೊಮದಕ್ಕೆ ಉತ್ತರಿಸುತ್ತ ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.